ಮುಂದಿನ ವರ್ಷ ರಾಹುಲ್-ಅಥಿಯಾ ವಿವಾಹ

ಮುಂಬೈ, ಸೆ.7-ಬಹುನಿರೀಕ್ಷಿತ‌‌ ಭಾರತೀಯ ಕ್ರಿಕೆಟ್ ತಂಡದ ಉಪನಾಯಕ ಹಾಗೂ ಕನ್ನಡಿಗ
ಕೆ.ಎಲ್. ರಾಹುಲ್‌ ಹಾಗೂ ಬಾಲಿವುಡ್ ನಟಿ ಅಥಿಯಾ ದಾಂಪತ್ಯ ಜೀವನಕ್ಕೆ ಕಾಲಿಡುವುದು ಖಚಿತವಾಗಿದೆ.
ಮುಂದಿನ ವರ್ಷ ಈ ಜೋಡಿ ವಿವಾಹವಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಮುಂದಿನ ವರ್ಷ ಜನವರಿಯಲ್ಲಿ ತಮ್ನ ಬಹುಕಾಲದ ಗೆಳತಿ ಅಥಿಯಾರನ್ನು ಮದುವೆಯಾಗಲಿದ್ದಾರೆ. ಮಹಾರಾಷ್ಟ್ರದಲ್ಲಿ ಅದ್ದೂರಿ ಮದುವೆ ಸಮಾರಂಭ ನಡೆಯಲಿದೆ.
ಕೆಲವು ದಿನಗಳ ಹಿಂದೆಯಷ್ಟೇ ಅಥಿಯಾ ಅವರನ್ನು ವಿವಾಹವಾಗುವುದಾಗಿ ರಾಹುಲ್ ತಿಳಿಸಿದ್ದರು. ಮದುವೆಯ ಬಗ್ಗೆ ಅಥಿಯಾ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದರು.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ.20 ವಿಶ್ವಕಪ್ ಟೂರ್ನಿಯ ಬಳಿಕ ಭಾರತ ಕ್ರಿಕೆಟ್ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅದರ ನಂತರ ಈ ವಿವಾಹ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.