ಮುಂದಿನ ವರ್ಷ ಬಸವ ಉತ್ಸವ ಮೂರು ದಿನಗಳಕಾಲ ಆಚರಿಸಲಾಗುತ್ತದೆ:ಶಾಸಕ ಶರಣು ಸಲಗರ

ಬೀದರ, ಮಾ. 13 : ಈ ವರ್ಷ ಬಸವ ಉತ್ಸವ ಅದ್ದೂರಿಯಾಗಿ ಎರಡು ದಿನ ಆಚರಿಸಲಾಯಿತು ಆದರೆ ಇದನ್ನು ತಮಗಾಗಿ ಮುಂದಿನ ವರ್ಷ ಮೂರು ದಿನಗಳ ಕಾಲ ಆಚರಿಸಲಾಗುತ್ತದೆ ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಹೇಳಿದರು.

ಅವರು ರವಿವಾರ ಸಂಜೆ ಬಸವಕಲ್ಯಾಣದ ಥೇರ ಮೈದಾನದಲ್ಲಿ ನಡೆದ ಬಸವ ಉತ್ಸವ-2023 ರ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಸವ ಉತ್ಸವದ ಯಶಸ್ವಿಗಾಗಿ ಶ್ರಮಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ವೃಂದಕ್ಕೂ ಹಾಗೂ ಜಿಲ್ಲೆಯ ಎಲ್ಲಾ ಜನತೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೆನೆ ಮತ್ತು ಇದೇ ಮಾರ್ಚ್ 24 ತಾರೀಖು ಗೋರ್ಟಾ ಗ್ರಾಮದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ಇದ್ದು ಇದರ ಉದ್ಘಾಟನೆಗೆ ಕೇಂದ್ರ ಗೃಹ ಮಂತ್ರಿಗಳಾದ ಅಮಿಶ್ ಶಾ ಅವರು ಆಗಮಿಸುತ್ತಿದ್ದು ಅಲ್ಲಿಯು ಹೆಚ್ಚಿನ ಜನರು ಬರಬೇಕು ಎಂದರು.

ಬರುವ ದಿನಗಳಲ್ಲಿ ಬಸವಕಲ್ಯಾಣದಲ್ಲಿ ಎಲ್ಲಾ ಕಡೆ ರಿಂಗ್ ರೋಡ್ ಮತ್ತು ಬಸವಕಲ್ಯಾಣ ಜಿಲ್ಲಾ ಕೇಂದ್ರ ಹಾಗೂ ಇಲ್ಲಿ ಒಂದು ವಿಮಾನ ನಿಲ್ದಾಣ ಆಗಲು ಕೆಲಸ ಮಾಡುತ್ತೇನೆ ಎಂದರು.

ಬಸವ ಉತ್ಸವ ಮುಂದಿನ ವರ್ಷ ರಾಜ್ಯಕ್ಕೆ ಮಾದರಿ ಉತ್ಸವವಾಗುವಂತೆ ಆಚರಿಸಲಾಗುತ್ತದೆ ಹಾಗೂ ಆಕಾಶದ ತುಂಬೆಲ್ಲ ಪಟಾಕಿ ಕಾಣಬೇಕು ಹಾಗೆ ಮಾಡಲಾಗುತ್ತದೆ. ಬಸವ ಉತ್ಸವ ಯಶಸ್ವಿಯಾಗಲು ಶ್ರಮಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೆನೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಮಾತನಾಡಿ, ಬಸವ ಉತ್ಸವದಲ್ಲಿ 75 ಸಾವಿರಕ್ಕೂ ಹೆಚ್ಚಿನ ಜನರು ಸೇರಿ ಯಶಸ್ವಿಗೊಳಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು. ಮುಂದಿನ ವಾರ ಬಸವಕಲ್ಯಾಣ ಕೋಟೆಯಲ್ಲಿ ಲೇಸರ್ ಶೋ ಕಾರ್ಯಕ್ರಮ ಇರುತ್ತದೆ ಇದರಲ್ಲಿ ಬಸವಣ್ಣನವರು ಮತ್ತು ಬಸವಕಲ್ಯಾಣ ಕೋಟೆಯ ಇತಿಹಾಸ ಮತ್ತು ಈ ಕೋಟೆಯಲ್ಲಿ ಆಳ್ವಿಕೆ ಮಾಡಿದ ಅಂದಿನ ರಾಜ ಮಾಹಾರಾಜರ ಇತಿಹಾಸದ ಕುರಿತಾಗಿದೆ.

ಇದರ ಉದ್ದೇಶ ಇತಿಹಾಸ ನಮ್ಮ ಶಾಲಾ ಮಕ್ಕಳಿಗೆ ಮತ್ತು ಯುವ ಪೀಳಿಗೆಗೆ ತಿಳಿಯಬೇಕೆಂಬ ಉದ್ದೇಶದಿಂದ ಮಾಡಲಾಗುತ್ತಿದೆ. ಬೀದರ ಉತ್ಸವದಂತೆ ಬಸವ ಉತ್ಸವದ ಲೆಕ್ಕ ಪತ್ರವನ್ನು ಕೊಡುತ್ತೆನೆ ಈ ಉತ್ಸವದಲ್ಲಿ ಶ್ರಮಿಸಿದ ಎಲ್ಲಾ ನನ್ನ ಅಧಿಕಾರಿ ಸಿಬ್ಬಂದಿಗಳು ಹಾಗೂ ಜಿಲ್ಲೆಯ ಜನತೆಗೆ ನನ್ನ ಧನ್ಯವಾದಗಳನ್ನು ತಿಳಿಸುತ್ತೆನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಸವ ಉತ್ಸವ-2023 ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಬಸವ ಉತ್ಸವದಲ್ಲಿ ನಡೆಸಿದ ಇತರೆ ಉತ್ಸವಗಳು ಮತ್ತು ವಿವಿಧ ಕಲಾತಂಡಗಳು ಹಾಗೂ ಸಂಗೀತ. ನೃತ್ಯ. ಹಾಡುಗಾರಿಕೆ, ವಚನಗಾಯನ, ನಾಟಕ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಬಸವ ಉತ್ಸವದ ಮೆರಗನ್ನು ಹೆಚ್ಚಿಸಿದವು.

ಈ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್. ಎಲ್. ಬಸವಕಲ್ಯಾಣದ ಸಹಾಯಕ ಆಯುಕ್ತ ರಮೇಶ ಕೋಲಾರ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಅಭಯಕುಮಾರ, ಮುಖ್ಯ ಪಶು ವೈದ್ಯಾಧಿಕಾರಿ ಗೌತಮ್ ಅರಳಿ, ಹುಲಸೂರು ತಹಶಿಲ್ದಾರ ಶಿವಾನಂದ ಮೇತ್ರೆ., ಬಸವಕಲ್ಯಾಣ ತಹಶಿಲ್ದಾರ ಶಾಂತಗೌಡ, ಪ್ರಾಂಶುಪಾಲರಾದ ಬಸವರಾಜ ಬಲ್ಲೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.