ಮುಂದಿನ ವರ್ಷ ಕೊವಾಕ್ಸಿನ್ ಲಸಿಕೆ

ನವದೆಹಲಿ,ನ.೨- ಕೊರೊನಾ ಸೋಂಕು ತಡೆಗೆ ದೇಶೀಯವಾಗಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್ ಲಸಿಕೆ ೨೦೨೧ರ ತ್ರೈ ಮಾಸಿಕ ಅವಧಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.
ಈ ಲಸಿಕೆಗೆ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದರೆ ಲಸಿಕೆ ಬಿಡುಗಡೆಯಾಗಲಿದೆ ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಕೊವಾಕ್ಸಿನ್ ಲಸಿಕೆಯ ೩ನೇ ಹಂತದ ಪ್ರಯೋಗಕ್ಕೆ ಭಾರತ ಔಷಧಗಳ ನಿಯಂತ್ರಕ ಮಂಡಳಿ ಪ್ರಾಥಮಿಕ ಒಪ್ಪಿಗೆ ಸೂಚಿಸಿದ್ದು, ಈ ತಿಂಗಳಿನಲ್ಲೇ ಸ್ವಯಂ ಸೇವಕರಿಗೆ ಎಷ್ಟು ಪ್ರಮಾಣದಲ್ಲಿ ಡೋಸ್ ನೀಡಬೇಕೆಂಬ ಬಗ್ಗೆ ಭಾರತ್ ಬಯೋಟೆಕ್ ಚಿಂತನೆನಡೆಸಿದೆ.
ಈ ಪ್ರಯೋಗವನ್ನು ೧೦ ರಿಂದ ೧೨ ರಾಜ್ಯಗಳ ೨೫ ಕಡೆಗಳಲ್ಲಿ ಕ್ಲಿನಿಕಲ್ ಪ್ರಯೋಗ ನಡೆಸಲು ತೀರ್ಮಾನಿಸಿದೆ ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಸಾಯಿಪ್ರಸಾದ್ ತಿಳಿಸಿದ್ದಾರೆ.