ಮುಂದಿನ ವರ್ಷಾಂತ್ಯಕ್ಕೆ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣ


ಅಯೋಧ್ಯೆ,ಸೆ.೫- ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ೨೦೨೩ರ ಡಿಸೆಂಬರ್ ವೇಳೆಗೆ ಮಂದಿರ ಲೋಕಾರ್ಪಣೆ ಮಾಡುವ ಉದ್ದೇಶ ಹೊಂದಲಾಗಿದೆ ೨೦೨೪ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ೨೦೨೩ರ ಡಿಸೆಂಬರ್ ಅಂತ್ಯದ ಒಳಗೆ ರಾಮಮಂದಿರ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ ಎರಡು ವರ್ಷಗಳೊಳಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶೇ.೪೦ಕ್ಕೂ ಹೆಚ್ಚು ಕಾಮಗಾರಿ ಪೂರ್ಣಗೊಂಡಿದೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ . ಪ್ರಪಂಚದಾದ್ಯಂತದ ಭಕ್ತರು ಡಿಸೆಂಬರ್ ೨೦೨೩ ರಿಂದ ದೇವರಿಗೆ ನಮನ ಸಲ್ಲಿಸಬಹುದು ಎಂದು ಹೇಳಿದ್ದಾರೆ. ದೇವಾಲಯದ ಸುತ್ತಲಿನ ರಸ್ತೆಗಳ ಅಭಿವೃಧ್ಧಿ ಮತ್ತು ಕಟ್ಟಡ ಕೆಡವಿ ರಸ್ತೆ ನಿರ್ಮಾಣ ಚಟುವಟಿಕೆಗಳು ಸಹ ಭರದಿಂದ ಸಾಗುತ್ತಿವೆ ”ದೇಗುಲ ನಿರ್ಮಾಣ ಕಾಮಗಾರಿ ಶೇ ೪೦ಕ್ಕೂ ಹೆಚ್ಚು ಪೂರ್ಣಗೊಂಡಿದೆ. ಶೇ.೮೦ಕ್ಕೂ ಹೆಚ್ಚು ಪ್ಲಿಂತ್ ಕಾಮಗಾರಿ ಮುಗಿದಿದೆ. ಡಿಸೆಂಬರ್ ೨೦೨೩ ರಿಂದ ದೇವಾಲಯದ ದರ್ಶನ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.ನಿರ್ಮಾಣಕ್ಕೆ ಬಳಸಲಾದ ಹಣದ ಮೂಲದ ಬಗ್ಗೆ ಕೇಳಿದಾಗ ರೈ, ದೇವರ ಕಾರಣಕ್ಕಾಗಿ ಯಾವುದೇ ಹಣದ ಕೊರತೆ ಇರಬಾರದು ಈ ನಿಟ್ಟಿನಲ್ಲಿ ಎಲ್ಲಾ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಟ್ರಸ್ಟ್‌ನ ಪದಾಧಿಕಾರಿಗಳ ಪ್ರಕಾರ, ದೇವಾಲಯದ ದೀರ್ಘಾಯುಷ್ಯ ಮತ್ತು ಕನಿಷ್ಠ ಒಂದು ಸಾವಿರ ವರ್ಷಗಳ ಕಾಲ ಸ್ಥಿರತೆ ಖಚಿತಪಡಿಸಿಕೊಳ್ಳಲು ಮಣ್ಣಿನಲ್ಲಿ ಬೃಹತ್ ಅಡಿಪಾಯ ಹಾಕಲಾಗಿದೆ.ದೇವಾಲಯದ ಗರ್ಭಗುಡಿಯೊಳಗೆ ರಾಜಸ್ಥಾನದ ಮಕ್ರಾನಾ ಬೆಟ್ಟಗಳಿಂದ ಬಿಳಿ ಅಮೃತಶಿಲೆಯನ್ನು ಬಳಸಲಾಗುವುದು ಎಂದು ಅವರು ಹೇಳಿದ್ದಾರೆ.