ಮುಂದಿನ ಬಾರಿ ವಿಜಯಪುರದಲ್ಲಿ ರಾಜ್ಯಮಟ್ಟದ ರೇಡಿಯಾಲಾಜಿಸ್ಟ್ ಕಾನ್ಪರನ್ಸ್ :ಡಾ. ಆನಂದ ಎಚ್.ಕೆ. ಭರವಸೆ

ವಿಜಯಪುರ:ನ.13: ಮುಂದಿನ ಬಾರಿ ವಿಜಯಪುರದಲ್ಲಿ ರಾಜ್ಯಮಟ್ಟದ ರೇಡಿಯಾಲಾಜಿಸ್ಟ್ ಕಾನ್ಪರನ್ಸ್ ನಡೆಸಲು ಸಂಪೂರ್ಣ ಸಹಕಾರ ನೀಡುವದಾಗಿ ಕರ್ನಾಟಕ ರೇಡಿಯಾಲಜಿ ಸಂಘದ ಅಧ್ಯಕ್ಷ ಡಾ. ಆನಂದ ಎಚ್.ಕೆ. ಭರವಸೆ ನೀಡಿದ್ದಾರೆ.
ನಗರದ ಬಿ.ಎಲ್.ಡಿ.ಇ. ಡೀಮ್ಡ ವಿವಿಯಲ್ಲಿ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ರೇಡಿಯಾಲಜಿ ವಿಭಾಗ ಮತ್ತು ಕರ್ನಾಟಕ ರೇಡಿಯಾಲಜಿ ಸಂಘ ಸಂಯುಕ್ತವಾಗಿ ಆಯೋಜಿಸಿದ್ದ ಅಂತರಾಷ್ಟ್ರೀಯ ರಾಂಟಜನ ದಿನ ಮತ್ತು ಬೆಸಿಕ್ಸ್ ಟು ಇಂಟರವೆನ್ಶನಲ್ ರೇಡಿಯಾಲಜಿ ಕುರಿತು ವೈದ್ಯಕೀಯ ನಿರಂತರ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವಿ ಕುಲಪತಿ ಡಾ. ಆರ್.ಎಸ್.ಮುಧೋಳ ಮಾತನಾಡಿ ರೇಡಿಯಾಲಜಿಸ್ಟ್ ಮತ್ತು ರೇಡಿಯೊಗ್ರಾಫರ್ಸ ಸಪೆÇೀಟಿರ್ಂಗ್ ಪೇಸೆಂ?????ಗಳ ಹಿತರಕ್ಷಣೆಗೆ ವಿಶ್ವವಿದ್ಯಾಲಯ ಬದ್ಧವಾಗಿದೆ. ಅಲ್ಲದೇ, ಇದಕ್ಕಾಗಿ ವಿವಿಯಿಂದ ಸಕಲ ರೀತಿಯ ಅನುಧಾನ ಮತ್ತು ಸಹಾಯ ನೀಡುವುದಾಗಿ ತಿಳಿಸಿದರು.
ವಿವಿಯ ಸಮಉಪಕುಲಪತಿ ಡಾ. ಅರುಣ ಸಿ. ಇನಾಂದಾರ ಮಾತನಾಡಿ ರೇಡಿಯಾಲಜಿ ಕ್ಷೇತ್ತಕ್ಕೆ ಅನುಕೂಲವಾಗಲು ಬಿ.ಎಲ್.ಡಿ.ಇ. ಎಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಉಪಯೋಗಿಸಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ. ರವಿ ಎಲಿ ಅವರು ಚೆಸ್ಟ್ ಎಕ್ಸ್-ರೆ ಕುರಿತು, ಹುಬ್ಬಳ್ಳಿಯ ಕಿ?????ನ ಪ್ರಾಧ್ಯಾಪಕ ಡಾ. ಜಗದೀಶ ಸುತ್ತಗಟ್ಟಿ ಅವರು ಎಕ್ಸ್-ರೆ ಮ್ಯಾಮ್ಮೊಗ್ರಾಫಿ ಹಾಗೂ ಕೊಚ್ಚಿ???ನ ಆಸ್ಟರ್ ಮೆ???ಸಿಟಿ ಸಿನಿಯರ್ ಕನ್ಸಲ್ಟಂಟ್ ಡಾ. ರೋಹಿತ ನಾಯರ ಅವರು ಇಂಟರವೆನ್ಶನಲ್ ರೇಡಿಯಾಲಜಿ ಇನ್ ಯುಟಿರೈನ್ ಫೈಬ್ರಾಯ್ಡ್ಸ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಡಾ. ಆನಂದ ಎಚ್.ಕೆ., ಕರ್ನಾಟಕ ರೇಡಿಯಾಲಜಿ ಸಂಘದ ಖಜಾಂಚಿ ವಿಜಯಸಾರಧಿ ಮತ್ತು ಸಿನಿಯರ್ ರೇಡಿಯಾಲಜಿಸ್ಟ್ ಡಾ. ಎಂ.ಎಂ.ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಲೈಡ್ ಹೆಲ್ತ್ ಸೈನ್ಸಸ್ ಡೀನ್ ಡಾ. ಎಸ್.ಬಿ.ಪಾಟೀಲ, ಉಪಪ್ರಾಚಾರ್ಯ ಡಾ. ಎಂ.ಬಿ.ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಡಾ. ಆರ್.ಸಿ.ಬಿದರಿ, ಡಾ. ಮಾನಕರೆ, ಡಾ. ನೀಲಮ್ಮ ಪಾಟೀಲ, ಡಾ. ಶಿವಾನಂದ ಪಾಟೀಲ, ಡಾ. ಶಂಕರಗೌಡ ಪಾಟೀಲ, ಡಾ. ಸತೀಶ ಪಾಟೀಲ, ಡಾ. ವಿಶಾಲ ನಿಂಬಾಳ, ಡಾ. ಸುರೇಶ ಕನಮಡಿ, ಡಾ. ಸಿದ್ಧಾರೂಢ ಸಜ್ಜನ, ಡಾ. ನಾಗೇಶ, ಡಾ. ರಜನಿ ಜಾಧವ, ಡಾ. ವಸಿಯಾ, ಬಿ.ಎಲ್.ಡಿ.ಇ. ಡೀಮ್ಡ್ ವಿವಿ ಮತ್ತು ಅಲ್ ಅಮಿನ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮ ಸಂಘಟಕ ಡಾ. ರಾಜಶೇಖರ ಮುಚ್ಚಂಡಿ ವಂದಿಸಿದರು.
ಉಚಿತ ಮ್ಯಾಮ್ಮೊಗ್ರಾಫಿ ಶಿಬಿರ:
ಬಿ.ಎಲ್.ಡಿ.ಇ. ಆಸ್ಪತ್ರೆಯಲ್ಲಿ ರೇಡಿಯಾಲಜಿ ವಿಭಾಗದ ವತಿಯಿಂದ ಉಚಿತ ಮ್ಯಾಮ್ಮೊಗ್ರಾಫಿ ಶಿಬಿರ ಆಯೋಜಿಸಲಾಗಿದೆ. ನವೆಂಬರ್ 15ರ ವರೆಗೆ ನಡೆಯಲಿರುವ ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿಭಾಗದ ಮುಖ್ಯಸ್ಥ ಡಾ. ರಾಜಶೇಖರ ಕನಮಡಿ ಕೋರಿದ್ದಾರೆ.