ಮುಂದಿನ ದಿನಗಳಲ್ಲಿ ಭಾರತ ಅಭಿವೃದ್ಧಿ ಪಟ್ಟಿಯಲ್ಲಿ

ಕಲಬುರಗಿ : ಫೆ.15: ದೇಶದಲ್ಲಿರುವ ಕೈಷಿ, ಉದ್ಯಮ, ಸೇವಾ ವಲಯಗಳಲ್ಲಿ ಅಮೂಲಾಗ್ರಾ ಬದಲಾವಣೆಯಾದಾಗ ಭಾರತವು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಟ್ಟಿಯಲ್ಲಿರಲಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಆರ್.ಆರ್.ಬಿರಾದಾರ ಅಭಿಪ್ರಾಯಪಟ್ಟರು.

ನಗರದ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭಾರತ @ 2047 ರ ವರೆಗೆ ವಿಕಸಿತ ಭಾರತವಾಗಲು ಹಲವಾರು ಕ್ರಮಗಳ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಮುಖ್ಯ ಅತಿಥಿಯಾಗಿ ಮಾತನಾಡಿದರು. ಜೆ.ಡಿ.ಪಿ. ಮಾನವ ಬಂಡವಾಳ ಅಭಿವೈದ್ಧಿಯಾಗಬೇಕಾದರೆ, ಒಟ್ಟಾರೆ ಮಾನವ ಅಭಿವೈದ್ಧಿ ಸೂಚ್ಯಂಕದಲ್ಲಿ ಏರಿಕೆಯಾಗಬೇಕು. ಅಂದರೆ ಬಡತನ, ನಿರುದ್ಯೋಗ ಲಿಂಗ ತಾರತಮ್ಯತೆ, ಪ್ರಾದೇಶಿಕ ಅಸಮತೋಲನ, ಮುಂತಾದ ಪರಿಕರಗಳಲ್ಲಿ ಇಳಿಕೆಯಾಗಿ, ಶಿಕ್ಷಣ, ಆರ್ಯೋಗ್ಯ, ಕೌಶ್ಯಲಗಳು ಏರಿಕೆಯಾಗಬೇಕು. ಮೂಲ ಸೌಕರ್ಯಗಳ ಹೆಚ್ಚಳ, ಉತ್ಪಾದನೆ ಬೇಡಿಕೆಗೆ ತಕ್ಕಂತೆ ಉತ್ಪಾದಿಸಿ ಪೂರೈಕೆ ಮಾಡಬೇಕು ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಪಾತ ಮುಂದುವರಿದ ರಾಷ್ಟ್ರಗಳಂತೆ ಆಗಲು, ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚಿನ ಬಂಡವಾಳ , ಆರ್ಯೋಗ್ಯ ಕ್ಷೇತ್ರದ ಮೇಲೆ, ಕೈಗಾರಿಕೆ ಕೈಷಿ ಕ್ಷೇತ್ರಗಳ ಮೇಲೆ ಬಂಡವಾಳ ಅಧಿಕವಾಗಬೇಕು. ಅಂದಾಗ ಮಾತ್ರ ನಿರುದ್ಯೋಗ ಹೋಗಿ, ಉದ್ಯೋಗ ದೊರಕಿ, ತಲಾ ಆದಾಯ, ರಾಷ್ಟ್ರೀಯ ಆದಾಯದಲ್ಲಿ ಹೆಚ್ಚಳವಾಗುವುದು ಎಂದು ಹೇಳಿದರು.

ಇನ್ನೊರ್ವ ಸಂಪನ್ಮೂಲ ವ್ಯಕ್ತಿ ಕಾಳಗಿಯ ಸರಕಾರಿ ಪದವಿ ಮಹಾವಿದ್ಯಾಲಯ  ಪ್ರಾಧ್ಯಾಪಕರ ಡಾ.ಬಿ.ಆರ್.ಅಣ್ಣಸಾಗರ ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಕಲ್ಪನೆಯನ್ನು ತಾಂತ್ರಿಕ, ಆವಿಷ್ಕಾರಿಕ ಸಿದ್ದಾಂತಗಳ ಬಳಕೆಯಿಂದ ದೇಶ ಆರ್ಥಿಕವಾಗಿ ಸದೈಡವಾಗಿ, ವಿಕಸಿತ ಭಾರತ 2047 ರಲ್ಲಿ ಆಗಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಶರಥ ಮೇತ್ರೆಯವರು ಮಾತನಾಡಿ, ಜಪಾನನಂಥ ದೇಶ ಭಾರತದ ಜೊತೆಗೆ ಸ್ವಾತಂತ್ರ ಪಡೆದು ಅಭಿವೈದ್ಧಿ ಹೊಂದಿದ ದೇಶಗಳಲ್ಲಿವೆ. ಆದರೆ ಭಾರತ 75 ವರ್ಷವಾದರೂ ಅಭಿವೈದ್ದಿ ಹೊಂದುತ್ತಿರುವ ದೇಶಗಳ ಪಟ್ಟಿಯಲ್ಲಿದೆ. ಆದರೆ 2047ರ ವರೆಗೆ ಗುರಿ ಮುಟ್ಟಲು ಶಕ್ತಿ ಮೀರಿ ಕೆಲಸ ಮಾಡಬೇಕಾಗಿದೆ ಯುವಕರು, ಇದರಲ್ಲಿ ಬಹು ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದರು.

         ಡಾ.ಸುನಂದಾ  ವಾಂಜರಖೇಡೆ ಸ್ವಾಗತಿಸಿದರು. ಪ್ರೊ.ಆರತಿ.ಜಿ ಡಾ.ಅನಿತಾ ಮೇತ್ರೆ ಅತಿಥಿಗಳನ್ನು ಪರಿಚಯಿಸಿದರು, ಪ್ರೋ. ವಷಾರ್À ಪಾಟೀಲ ವಂದನಾರ್ಪಣೆ ಮಾಡಿದರು, ಪ್ರೋ.ದಯಾನಂದ ಹೊಡಲ್ ಕಾರ್ಯಕ್ರಮ ನಿರೂಪಿಸಿದರು. ಕು. ನಂದಕುಮಾರನ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.