ಮುಂದಿನ ದಿನಗಳಲ್ಲಿ ನಿರಾಣಿ ಮುಖ್ಯಮಂತ್ರಿ: ಗುತ್ತೇದಾರ

ಅಫಜಲಪುರ:ಡಿ.6: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಧನೆಗಳೇ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲಿಸಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ್ ನಿರಾಣಿ ತಿಳಿಸಿದರು.ತಾಲೂಕಿನ ಸ್ಟೇಷನ್ ಗಾಣಗಾಪುರದಲ್ಲಿ ಕಲಬುರಗಿ ಹಾಗೂ ಯಾದಗಿರಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ ಪರವಾಗಿ ತಾಲೂಕಾ ಬಿಜೆಪಿ ಮಂಡಲ ವತಿಯಿಂದ ಆಯೋಜಿಸಿದ್ದ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಪಂಚಾಯತಿ ರಾಜ್ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.371 (ಜೆ) ಹೈದರಾಬಾದ್-ಕರ್ನಾಟಕಕ್ಕೆ 1500 ಕೋಟಿ ರೂ. ಅನುದಾನ ನೀಡಿದ್ದು, ಬಸವಕಲ್ಯಾಣದ ಅನುಭವ ಮಂಟಪಕ್ಕೆ 500 ಕೋಟಿ ರೂಪಾಯಿಯಲ್ಲಿ ಈಗಾಗಲೇ 200 ಕೋಟಿ ರೂ. ಬಿಡುಗಡೆ ಮಾಡಿದ್ದು, ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ರೂ. ಅನುದಾನ ನೀಡುವ ಭರವಸೆಯನ್ನು ಈಗಾಗಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಇನ್ನು ಮುಂದೆ ಅಭಿವೃದ್ಧಿಯಲ್ಲಿ ಸಾಕಷ್ಟು ಮುಂದುವರೆಯಲಿದೆ. ಜೊತೆಗೆ ಕಲಬುರಗಿ ಜಿಲ್ಲೆಯವರು ಪ್ರತಿ ಕುಟುಂಬದಲ್ಲಿ ಕೈಗಾರಿಕೆ ಉದ್ಯಮಿ ಆಗಬೇಕು.ಹಾಗೂ ನಮ್ಮ ಪಕ್ಷದ ಅಭ್ಯರ್ಥಿಯಾದ ಬಿ.ಜಿ.ಪಾಟೀಲ್ ಅವರನ್ನು ಕಳೆದ ಚುನಾವಣೆಯಲ್ಲಿ ಸಹ ಗೆಲ್ಲಿಸಿದ್ದೀರಿ, ಎರಡನೇ ಬಾರಿ ಸಹ ದೇಶದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಬಿ.ಜಿ.ಪಾಟೀಲ್ ಅವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾವಣೆ ಮಾಡುವ ಮೂಲಕ ಗೆಲ್ಲಿಸಬೇಕೆಂದು ಮನವಿ ಮಾಡಿದರು.ಅಫಜಲಪುರ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಮಾನಗಳನ್ನು ಕಲ್ಪಿಸಲಾಗುವುದು.2023ಕ್ಕೆ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.
ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಮಾತನಾಡಿ ಗ್ರಾಮ ಪಂಚಾಯತ್ ಸದಸ್ಯರು ಸಹ ಸ್ವಾಭಿಮಾನದಿಂದ ಜೀವನ ಸಾಗಿಸಲು ನಮ್ಮ ಸರ್ಕಾರ ಈ ಹಿಂದೆ ಗೌರವ ಧನವನ್ನು ವಿತರಣೆ ಮಾಡುವ ಯೋಜನೆ ಜಾರಿಗೆ ಮಾಡಿದೆ. ಇದನ್ನು ಹೆಚ್ಚಿಸಲು ಮತ್ತೆ ನಮ್ಮ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಹಾಗೂ ಸರ್ಕಾರ ಚಿಂತನೆ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷದ ಸ್ವಾರ್ಥದಿಂದ ದೇಶದ ಎಲ್ಲ ರಾಜ್ಯಗಳಲ್ಲಿ ಅಧಿಕಾರವನ್ನು ಕಳೆದುಕೊಂಡು ದೂಳಿಪಟ ಆಗಿದೆ. ಪ್ರತಿನಿತ್ಯ ಬಿಜೆಪಿ ಪಕ್ಷವು ಸದೃಢವಾಗಿ ಬೆಳೆಯುತ್ತಿದೆ. ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಒಳ್ಳೆಯ ಗೌರವ ಇದೆ. ಅಲ್ಲದೆ ಸಚಿವ ಮುರುಗೇಶ್ ನಿರಾಣಿ ಅವರು ಬಹಳಷ್ಟು ಉತ್ಸುಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಹೀಗಾಗಿ ಮುಂದಿನ ದಿನಗಳಲ್ಲಿ ಮುರುಗೇಶ್ ನಿರಾಣಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು. ಕೈಗಾರಿಕೆ ಕ್ಷೇತ್ರದಲ್ಲಿ ಹಲವಾರು ಸಾಧನೆಗಳ ಮಾಡಿರುವ ನಿರಾಣಿ ಅವರು ಸುಮಾರು 25 ಸಾವಿರ ಜನರಿಗೆ ಉದ್ಯೋಗ ನೀಡಿದ್ದಾರೆ. ಹೀಗಾಗಿ ಈ ಭಾಗದಲ್ಲಿ ಒಂದು ಸಕ್ಕರೆ ಕಾರ್ಖಾನೆಯನ್ನು ಸ್ಥಾಪನೆಮಾಡಿ ಈ ಭಾಗದ ಯುವಕರಿಗೆ ಉದ್ಯೋಗ ನೀಡಬೇಕೆಂದು ಹೇಳಿದರು.ಅಲ್ಲದೆ ಕಾಂಗ್ರೆಸ್ ಪಕ್ಷದ ದುರಾಡಳಿತಕ್ಕೆ ಕಡಿವಾಣ ಹಾಕಲು ಮಾಲೀಕಯ್ಯ ಗುತ್ತೇದಾರ ಚುನಾವಣೆಯ ಅಭ್ಯರ್ಥಿಯೆಂದು ಭಾವಿಸಿ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡುವ ಮೂಲಕ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಾಜಿ ವಿಧಾನ ಪರಿಷತ್ ಅಮರನಾಥ ಪಾಟೀಲ್, ತಾಲೂಕು ಬಿಜೆಪಿ ಉಸ್ತುವಾರಿ ಸಂಜಯ್ ಮಿಸ್ಕಿನ್, ಬಿಜೆಪಿ ತಾಲೂಕು ಅಧ್ಯಕ್ಷ ಶೈಲೇಶ್ ಗುಣಾರಿ, ಸಿದ್ದಾಜೀ ಪಾಟೀಲ್, ಚಂದಮ್ಮ ಪಾಟೀಲ್, ಮಂಜೂರ ಅಹ್ಮದ ಅಗರಖೇಡ, ವಿಶ್ವನಾಥ ರೇವೂರ, ಶಿವಪುತ್ರಪ್ಪ ಕರೂರ, ಸೂರ್ಯಕಾಂತ ನಾಕೇದಾರ, ಅವಣ್ಣ ಮ್ಯಾಕೇರಿ,ಅಶೋಕ್ ಬಗಲಿ,ಸಿದ್ದು ಸಾಲಿಮನಿ, ವಿಶ್ವಚಂದ್ರ ಠಾಕೂರ, ರಾಮಣ್ಣ ನಾಯ್ಕೋಡಿ,ರಮೇಶ ಬಾಕೆ,ರಾಜು ಜಿಡ್ಡಗಿ, ಬಿ.ವೈ.ಪಾಟೀಲ್,ಶ್ರೀಶೈಲ ಬಳೂರ್ಗಿ, ರಾಚಯ್ಯ ಹೀರೆಮಠ,ಬಿ.ರಾಜು ಬೇನಕನಹಳ್ಳಿ,ಗುರು ಸಾಲಿಮಠ, ಜ್ಯೋತಿ ಪ್ರಕಾಶ್ ಪಾಟೀಲ್, ಸೇರಿದಂತೆ ಇನ್ನಿತರು ಇದ್ದರು.

ಕಳೆದ ಬಾರಿ ಸಂಕಷ್ಟದ ಸಮಯದಲ್ಲಿ ಸಹ 804 ಹೆಚ್ಚಿನ ಮತಗಳಿಂದ ನನ್ನನ್ನು ಗೆಲ್ಲಿಸಿದ್ದೀರಿ. ಇನ್ನೊಂದು ಬಾರಿ ನನ್ನನ್ನು ನಿಮ್ಮ ಅಮೂಲ್ಯವಾದ ಮತವನ್ನು ಹಾಕುವ ಮೂಲಕ ಗೆಲ್ಲಿಸಬೇಕು. ವಿಧಾನಪರಿಷತ್ ಸದಸ್ಯರಿಗೆ ಹೆಚ್ಚಿನ ಅನುದಾನ ಇರುವುದಿಲ್ಲ.ಇದೊಂದು ಚಿಂತಕರ ಚಾವಡಿ.
-ಬಿ.ಜಿ.ಪಾಟೀಲ್ ಬಿಜೆಪಿ ಅಭ್ಯರ್ಥಿ.


ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತ ಹಾಕುವ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣೀಕರ್ತರಾಗಿದ್ದೀರಿ ಹೀಗಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ಸಹ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತ ಹಾಕುವ ಮೂಲಕ ಗೆಲ್ಲಿಸಬೇಕು.

-ನಿತೀನ್ ಗುತ್ತೇದಾರ ಜಿಪಂ ಮಾಜಿ ಅಧ್ಯಕ್ಷರು.