ಮುಂದಿನ ತಿಂಗಳು ಶಬರಿ ಆಗಮನ

ತಮಿಳು ನಟಿ ವರಲಕ್ಷ್ಮೀ ಶರತ್‍ಕುಮಾರ್ “ಶಬರಿ” ಅವತಾರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಮುಂದಿನ ತಿಂಗಳು ಆರಂಭದಲ್ಲಿ ಬಿಡುಗಡೆಗೆ ಸಜ್ಜಾಗಿದೆ.ನಾಯಕಿ ಪ್ರಧಾನ ಸಿನಿಮಾ ಇದು

ಈ ಸಿನಿಮಾ ಒಂದೇ ಭಾಷೆಗೆ ಸೀಮಿತವಾಗಿರದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಿದ್ದು, ಬಿಡುಗಡೆಗೂ ದಿನಾಂಕ ನಿಗದಿಯಾಗಿದೆ. ಮೇ 3ರಂದು ಈ ಸಿನಿಮಾ ಪಂಚ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಮಹೇಂದ್ರ ನಾಥ್ ಕೊಂಡ್ಲಾ ಶಬರಿ ಸಿನಿಮಾಕ್ಕೆ ಹಣ ಹೂಡಿದ್ದಾರೆ. ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆ ಆಗಲಿರುವ ಚಿತ್ರವನ್ನು ಅನಿಲ್ ಕಾಟ್ಜ್ ನಿರ್ದೇಶನ ಮಾಡಿದ್ದಾರೆ.

ವರಲಕ್ಷ್ಮೀ ಶರತ್ ಕುಮಾರ್, ಗಣೇಶ್ ವೆಂಕಟರಮಣನ್, ಶಶಾಂಕ್, ಮೈಮ್ ಗೋಪಿ, ಸುನಯನಾ, ರಾಜಶ್ರೀ ನಾಯರ್, ಮಧುನಂದನ್, ರಶಿಕಾ ಬಾಲಿ, ವಿವಾ ರಾಘವ್, ಪ್ರಭು, ಭದ್ರಮ್, ಕೃಷ್ಣ ತೇಜ, ಬಿಂದು ಪಜಿದಿಮರ್ರಿ, ಅಸ್ರಿತಾ ವೆಮುಗಂಟಿ, ಹರ್ಷಿಣಿ ಕೊಡುರು. ಅರ್ಚನ್ ಅನಂತ್, ಪ್ರಮೋದಿನಿ, ಬೇಬಿ ನಿವೇಕ್ಷಾ, ಬೇಬಿ ಕೃತಿಕಾ ತಾರಾಗಣದಲ್ಲಿದ್ದಾರೆ.