ಮುಂದಿನ ತಿಂಗಳು ಬರಲು ಸಜ್ಜಾದ `ರಾಕ್ಷಸರು’

ರಮೇಶ್ ಕಶ್ಯಪ್ ನಿರ್ಮಿಸಿರುವ “ರಾಕ್ಷಸರು” ಚಿತ್ರ ಮುಂದಿನ ತಿಂಗಳು ತೆರೆಗೆ ಬರಲು ಸಜ್ಜಾಗಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಿರುವ  ಕ್ರೈಮ್ ಥ್ರಿಲ್ಲರ್ ಚಿತ್ರ.

ಐದು ಜನ ಕ್ರಮಿನಲ್ ಗಳು  ಮಾಡಬಾರದ ದುಷ್ಕೃತ್ಯಗಳನ್ನು ಮಾಡಿ ತಲೆ ಮರಸಿಕೊಂಡಿರುತ್ತಾರೆ. ಇವರನ್ನು ಪೊಲೀಸರು ಹೇಗೆ ಹುಡುಕುತ್ತಾರೆ ಎಂಬುದೇ ಕಥಾಹಂದರ. ದಂಡುಪಾಳ್ಯದ ಕ್ರಿಮಿನಲ್ ಗಳನ್ನು ಮೀರಿಸುವ ಕ್ರಿಮಿನಲ್ ಗಳು ಈ “ರಾಕ್ಷಸರು”. ರಜತ್  ಚಿತ್ರವನ್ನು ನಿರ್ದೇಶಿಸಿದ್ದಾರೆ.

 ಸೆನ್ಸಾರ್ ಮಂಡಳಿ ಚಿತ್ರ ವೀಕ್ಷಿಸಿ, ಕ್ರೈಂ ಹೆಚ್ಚಾಗಿರುವುದರಿಂದ ಬಿಡುಗಡೆಗೆ ನಿರಾಕರಿಸಿ ನಿರ್ಮಾಪಕರ ಮನವಿ ಮೇರೆಗೆ ಕೆಲವು ಕಟ್ ಗಳ ಜೊತೆಗೆ ಎ ಸರ್ಟಿಫಿಕೇಟ್ ನೀಡಿದೆ.

ಆಗಸ್ಟ್‌ ಎರಡನೇ ವಾರ ಚಿತ್ರ ತೆರೆ ಕಾಣುತ್ತಿದೆ ಚಿತ್ರವನ್ನು ಆರಕ್ಷಕರಿಗೆ ಅರ್ಪಿಸುವುದಾಗಿ ನಿರ್ಮಾಪಕರುವ ತಿಳಿಸಿದ್ದಾರೆ. ಎರಡು ಹಾಡುಗಳಿರುವ  ಚಿತ್ರಕ್ಕೆ ಎಮಿಲ್ ಸಂಗೀತ , ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ಜನಾರ್ದನ ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಮನು ನೃತ್ಯ ನಿರ್ದೇಶನ  ಚಿತ್ರಕ್ಕಿದೆ.

ಡೈಲಾಗ್ ಕಿಂಗ್ ಸಾಯಿಕುಮಾರ್, ರಾಜಶೇಖರ್, ನಾಜರ್, ಸುಮನ್, ಕಿರಣ್ ಸುನೀಲ್, ತ್ರಿವೇಣಿ, ಅವಿನಾಶ್ ನೀರಜ್ ಯಾದವ್, ಹರ್ಷಿತ್, ಚೈತ್ರ, ಮಾನಸ, ಆಶಾ, ಮಂಜುಳ, ಸುರೇಖ, ರಚನ, ಕಮಲ, ಚಂದ್ರಕಲಾ ರಾಧ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.