ಮುಂದಿನ ತಿಂಗಳು ನಾನೇ ನರರಾಕ್ಷಸ

ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ರಾಜ್ ಮನೀಶ್ ನಾಯಕನಾಗುವ ಜೊತೆಗೆ ನಿದೇರ್ಶನ ನಿರ್ಮಾಣ ಹೀಗೆ ಹಲವು ವಿಭಾಗದಲ್ಲಿ ಕೆಲಸ ಮಾಡಿರುವ “ನಾನೇ ನರ ರಾಕ್ಷಸ” ಚಿತ್ರ ತೆರೆಗೆ ಮುಂದಿನ ತಿಂಗಳು ತೆರೆಗೆ ಬರಲಿದೆ.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ರಾಜ್ ಮನೀಶ್, ಯುವ ತಂಡ ಉತ್ಸಾದಿಂದ ಮಾಡಿರುವ ಚಿತ್ರ ಇದು. ಸಸ್ಪೆನ್ಸ್ ಚಿತ್ರ.

ಬನ್ನೂರು, ಮೈಸೂರು ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ. ಯಾವುದೇ ಕ್ಷಣದಲ್ಲಿ ಸಾಧು ಕೂಡ ನರ ರಾಕ್ಷಸ ಆಗ್ತಾನೆ ಎನ್ನುವುದು ಚಿತ್ರದ ತಿರುಳು. ಅಪ್ಪು,ಅಣ್ಣಾವ್ರ ಪೂಜೆ ಮಾಡ್ತೇವೆ. ಹೀಗಾಗಿ ಯಾವುದೇ ವಿಘ್ನ ಆಗಲಿಲ್ಲ ಎಂದರು.

ಕಾಡಿನಲ್ಲಿ ಸುಮಾರು 12 ದಿನ ಕಾಡಿನಲ್ಲಿ ರಾತ್ರಿಯ ಸಮಯ ಚಿತ್ರೀಕರಣ ಮಾಡಲಾಗಿದೆ. ಈ ಅನುಭವ ಮರೆಯಲಾಗದ್ದು ಒಳ್ಳೆಯ ಕಥೆ ಹೊಂದಿದೆ. ಎಲ್ಲರ ಪ್ರೀತಿ,ಸಹಕಾರ ಇರಲಿ ಎಂದು ಕೇಳಿಕೊಂಡರು. ಕಲಾವಿದರಾದ ಸುನೀಲ್ ಸ್ವಾಮಿರಾಜ್, ದಿವ್ಯ ಕುಮಾರ್ ಸತ್ತೇಗಾಲ,ಬೇಬಿ ಗಾನವಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು. ನಿರ್ಮಾಪಕರಾದ ಆರ್.ರಾಧ, ನಿಹಾರಿಕ ಇದ್ದರು.