ಮುಂದಿನ ಚುನಾವಣೆ ಗೆಲ್ಲಲು ಸಂಪುಟ ಪುನರ್ರಚನೆ ಅವಶ್ಯ- ಎಚ್ ವಿಶ್ವನಾಥ್

ಬೆಂಗಳೂರು ನ.11-ಹಾಲಿ ಸಚಿವರನ್ನಿಟ್ಟುಕೊಂಡು ಹೋದರೆ ಮುಂದಿನ ಸಾರ್ವತ್ರಿಕ ಚುನಾವಣೆ ಗೆಲ್ಲುವುದು ಕಷ್ಟ ಸಾರ್ವತ್ರಿಕ ಚುನಾವಣೆ ಗೆಲ್ಲಬೇಕಾದರೆ ಸಂಪುಟ ಪುನರ್ ರಚನೆಯಾಗಬೇಕಾಗುತ್ತೆ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಸ್ಫೋಟಕ ಹೇಳಿಕೆ ನೀಡಿದ್ದಾರ

ಉಪಚುನಾವಣೆ ಸಹಜವಾಗಿ ಸರ್ಕಾರದ ಪರವಾಗಿ ಬರುತ್ತದೆ ಉಪಚುನಾವಣೆಗಳನ್ನು ಸರ್ಕಾರಗಳು ನಡೆಸುತ್ತದೆ, ಆದರೆ ಸಾರ್ವತ್ರಿಕ ಚುನಾವಣೆ ಪಕ್ಷ ನಡೆಸುತ್ತದೆಹಾಗಾಗಿ ಹೊಸ ಮುಖಗಳ ಸಂಪುಟದೊಂದಿಗೆ ಹೋಗಬೇಕು ಎಂದರು.

ಸಾರ್ವತ್ರಿಕ ಚುನಾವಣೆ ಗೆಲ್ಲಬೇಕಾದರೆ ಸಂಪುಟ ಪುನರ್ ರಚನೆಯಾಗಬೇಕಾಗುತ್ತೆ ಎಂದು ಹೇಳಿದರು. ಬೆಂಗಳೂರು ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರುನಾನು ದೆಹಲಿಗೆ ಹೋಗಿರಲಿಲ್ಲ ಉಜ್ಜೈನಿಗೆ ಹೋಗಿದ್ದೆ, ದೆಹಲಿಯಿಂದ ಕೋಲ್ಕತ್ತಾ ಗೆ ಹೋಗಿದ್ದೆ ದೆಹಲಿ ಮಾರ್ಗದಲ್ಲಿ ಮಹಾಕಾಳಿ ದರ್ಶನಕ್ಕೆ ಹೋಗಿದ್ದೆ. ಆರ್ ಶಂಕರ್ ದೆಹಲಿಗೆ ಹೋಗಿದ್ದು ಗೊತ್ತಿಲ್ಲ ನಾನು ಅವರ ಜೊತೆ ಹೋಗಲಿಲ್ಲ ಎಂದರು

ಮಹಾಕಾಳಿಗೆ ನನಗೆ ಒಳ್ಳೆಯದು ಮಾಡುವಂತೆ ಕೇಳಿಕೊಂಡಿದ್ದೇನೆ. ದೇವರಲ್ಲಿ ಬೇಡಿಕೊಳ್ಳೋದು ದೇಶಕ್ಕೆ ಒಳ್ಳೆಯದು ಮಾಡಲಿ ಅಂತ ನಾವು ರಾಜಕಾರಣಿಗಳು, ನಮಗೂ ಒಳ್ಳೆಯದು ಮಾಡು ಅಂತ ಸ್ವಾರ್ಥಕ್ಕೂ ಬೇಡಿಕೊಳ್ತೇವೆ ನಾನು ಸಚಿವನಾಗುವ ವಿಶ್ವಾಸ ಇದೆ. ನನ್ನ ಹಿರಿತನ, ತ್ಯಾಗ ಕ್ಕೆ ಬೆಲೆ ಸಿಗುತ್ತೆಎಂಬ ವಿಶ್ವಾಸ ತಮ್ಮದು ಎಂದರು.