ಮುಂದಿನ ಚುನಾವಣೆಯಲ್ಲಿ ಸ್ಪರ್ದಿಸಲ್ಲ-ರುದ್ರೇಶ್

ಕನಕಪುರ,ಜು೨೮:ರಾಮನಗರ ವಿಧಾನಸಭಾ ಕ್ಷೇತ್ರವು ತಮಗೆ ರಾಜಕೀಯ ಜನ್ಮವನ್ನು ನೀಡಿದೆ, ಈ ಕ್ಷೇತ್ರವನ್ನು ಎಂದಿಗೂ ತಾವು ಮರೆಯುವುದಿಲ್ಲ, ಆದರೆ ಈ ಕ್ಷೇತ್ರದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ತಿಳಿಸಿದರು.
ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಅಣೇದೊಡ್ಡಿ ಗ್ರಾಮದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ತಮ್ಮ ಅಭಿಮಾನಿಗಳು ಏರ್ಪಡಿಸಿದ್ದ ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬ್ಯಾಗ್ ವಿತರಣೆ ಮಾಡಿ ಮಾತನಾಡಿದರು.
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಿಸನ್ ೧೫೦ ಗುರಿಯನ್ನು ಹೊಂದಿದ್ದು ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಯಾರಿಗೆ ಟಿಕೇಟ್ ನೀಡಿದರು ಅಭ್ಯರ್ಥಿ ಗೆಲುವಿಗೆ ಸಂಪೂರ್ಣ ಸಹಕಾರ ನೀಡಿ ಗೆಲ್ಲಿಸಿಕೊಂಡು ಬರಲಾಗುವುದು ಎಂದು ಹೇಳಿದರು.
ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಜಗ್ನನ್ನಾಥ್, ಬಿಡದಿ ಪ್ರಾಧಿಕಾರದ ಅಧ್ಯಕ್ಷ ವರದರಾಜಗೌಡ, ರಾಮನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎಸ್.ಮುರಳೀಧರ್, ಬಿಜೆಪಿ ಒಬಿಸಿ ರಾಜ್ಯ ಕಾರ್ಯದರ್ಶಿ ನಾಗರಾಜು, ಬಿಜೆಪಿ ಹೋಬಳಿ ಅಧ್ಯಕ್ಷರಾದ ಜಿ.ಎಸ್.ಪ್ರಕಾಶ್, ಕಲ್ಲನಕುಪ್ಪೆ ಕುಮಾರ್, ಮುಖಂಡರಾದ ಮಲ್ಲೇಶ್, ಬಾಲಾಜಿಸಿಂಗ್ ಕಡಸಿಕೊಪ್ಪ, ಲಕ್ಷ್ಮಿಕಾಂತ ಹೊನ್ನಾಲಗನದೊಡ್ಡಿ, ಶಿವಕುಮಾರ್ ಬನ್ನಿಕುಪ್ಪೆ, ಯೋಗೇಶ್ ಹುಚ್ಚಮ್ಮನದೊಡ್ಡಿ, ಅಗರ ಕುಮಾರ್, ಯುವ ಮುಖಂಡ ಜಿಮ್ ಕಿರಣ್, ನಂಜುಂಡ, ರಮೇಶ್, ರಾಜು, ದಿನು, ಚಿಕ್ಕಮರಿಯಪ್ಪ, ವೆಂಕಟರಾಜು, ಮರಿದೇವರು ಮೊದಲಾದವರು ಉಪಸ್ಥಿತರಿದ್ದರು.