
ಸಂಜೆವಾಣಿ ವಾರ್ತೆ
ಕುರುಗೋಡು.ಮಾ.14: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಜನರ ಜೀವನ ಸುಗಮಗೊಳ್ಳಲಿದೆ ಎಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಮುರುಳಿ ಕೃಷ್ಣ ಹೇಳಿದರು.
ಪಟ್ಟಣ ಸಮೀಪದ ಮಣ್ಣೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಜನತೆಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳನ್ನು ವಿತರಿಸಿ ಮಾತನಾಡಿದ ಅವರು,
ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ, ಪ್ರತಿ ಬಡ ಕುಟುಂಬಗಳಿಗೆ 200 ಯುನಿಟ್ ಉಚಿತ ವಿದ್ಯುತ್ ಹಾಗೂ 10 ಕೆಜಿ ಪಡಿತರ ನೀಡಲು ಕಾಂಗ್ರೆಸ್ ಉದ್ದೇಶಿಸಿದೆ. ಅದರ ಅಂಗವಾಗಿ ಪ್ರತಿ ಗ್ರಾಮಗಳಲ್ಲಿ ಗ್ಯಾರಂಟಿ ಕಾರ್ಡ್ ವಿತರಿಸಲು ತೀರ್ಮಾನಿಸಲಾಗಿದೆ ಎಂದರು.
ಕಾರ್ಯಕರ್ತರು ಗ್ಯಾರಂಟಿ ಕಾರ್ಡ್ ಪ್ರತಿಯೊಬ್ಬರ ಮನೆ ಮನೆಗೆ ತಲುಪಿಸಿ, ಕಾಂಗ್ರೆಸ್ ಪ್ರಣಾಳಿಕೆ ತಿಳಿಸುವ ಜತೆಗೆ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ತಿಳಿಸಬೇಕು. ಬಿಜೆಪಿ ಸರ್ಕಾರವು ಬೆಲೆ ಏರಿಕೆ ದುಬಾರಿ ತೆರಿಗೆ ಹಾಕಿದ್ದು ಬಿಟ್ಟರೆ ಜನರಿಗೆ ಅಚ್ಚೇ ದಿನ್ ಬರಲಿಲ್ಲ. ಜನಪರ ಯೋಜನೆಗಳು ಜನರಿಗೆ ಈವರೆಗೂ ಸಿಕ್ಕಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕರಿಬಸಪ್ಪ, ತೆಕ್ಕಲಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರುದ್ರ ಗೌಡ, ಟಿ.ಎಂ. ಚಂದ್ರಶೇಖರಯ್ಯ ಸ್ವಾಮಿ, ಮಾಜಿ ಶಾಸಕ ಬಿ.ಎಂ. ನಾಗರಾಜ, ಮುಖಂಡರಾದ ನರೇಂದ್ರ ಸಿಂಹ, ಸಿದ್ದರಾಮಯ್ಯ ಸ್ವಾಮಿ, ಹೆರಕಲ್ಲು ಜೆಡಿಸ್ವಾಮಿ, ಶಿವಶಂಕರಗೌಡ, ಉಡೆಗೊಳ ನರಸಿಂಹ ನಾಯಕ್, ಎಂ.ಮಾರುತಿ, ವರಪ್ರಸಾದ್ ರೆಡ್ಡಿ, ನಗರಸಭೆ ಸದಸ್ಯರಾದ ಕಾಯಿಪಲ್ಲೆ ಆರ್.ನಾಗರಾಜ, ಎಚ್. ಗಣೇಶ್, ಬಿ.ಎಂ. ಅಪ್ಪಾಜಿ ನಾಯಕ್, ಡಿ ನಾಗರಾಜ್, ಕಮಲ್ ಹುಸೇನ್, ಜಾಜಿ ರಾಮಣ್ಣ, ಮಹೇಶ್ ಗೌಡ, ಶ್ರೀನಿವಾಸ ಸೇರಿದಂತೆ ಮುಖಂಡರುಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.