ಮುಂದಾಲೋಚನೆಯ ಬಜೆಟ್: ಅಷ್ಠಗಿ

ಕಲಬುರಗಿ:ಫೆ.1:ಇಂದಿನ ಬಜೆಟ್ ವಿಕ್ಷಿತ್ ಭಾರತ್‌ನ ನಾಲ್ಕು ಮಹತ್ವದ ಸ್ತಂಭಗಳಾದ ಯುವಕರು, ಬಡವರು, ಮಹಿಳೆಯರು ಮತ್ತು ರೈತರನ್ನು ಸಶಕ್ತಗೊಳಿಸಲಿದೆ ಎಂದು ಶಿವ ಅಷ್ಠಗಿ, ಜಿಲ್ಲಾ ಉಪಾಧ್ಯಕ್ಷ, ಬಿಜೆಪಿ ಯುವ ಮೋರ್ಚಾ ಕಲಬುರಗಿ ತಿಳಿಸಿದ್ದಾರೆ.
ಬಡತನದಿಂದ 25 ಕೋಟಿ ಜನರನ್ನು ಮುಕ್ತಗೊಳಿಸಲಾಗಿದೆ. 1.4 ಕೋಟಿ ಯುವಕರು ಸ್ಕಿಲ್ ಇಂಡಿಯಾ ಮೂಲಕ ಕೌಶಲ್ಯ ಹೊಂದಿದ್ದಾರೆ, 11.8 ಕೋಟಿ ರೈತರು ಪಿಎಂ-ಕಿಸಾನ್ ಮೂಲಕ ಸಬಲೀಕರಣಗೊಂಡಿದ್ದಾರೆ ಮತ್ತು ಮಹಿಳೆಯರಿಗೆ 30 ಕೋಟಿಗೂ ಹೆಚ್ಚು ಮೌಲ್ಯದ ಪಿಎಂ ಮುದ್ರಾ ಸಾಲ. ಪ್ರಧಾನಿ ಮೋದಿಯವರ ಸರ್ಕಾರವು GDP (Governance, Development Performance” ಆಡಳಿತ, ಅಭಿವೃದ್ಧಿ, ಕಾರ್ಯಕ್ಷಮತೆ) ಮಾದರಿಯ ಅಭಿವೃದ್ಧಿ ಯೋಜನೆ ನೀಡುತ್ತಿದೆ ಎಂದು ತಿಳಿಸಿದ್ದಾರೆ.