ಮುಂಡ್ಲೂರು ಹನುಮ ಕಿಶೋರ್ ಸ್ಪರ್ಧೆಗೆ ಬೆಂಬಲಿಗರ ಒತ್ತಡ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಏ,17- ನಗರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಮುಂಡ್ಲೂರು ಹನುಮ ಕಿಶೋರ್ ಅವರಿಗೆ ಅವರ ಬೆಂಲಿಗರು ಒತ್ತಾಯ ಮಾಡುತ್ತಿದ್ದಾರೆಂಬ ಸುದ್ದಿ ಹರಿದಾಡತೊಡಗಿದೆ.
ಅವರ ಬೆಂಬಲಿಗರು ಪತ್ರಿಕೆಗೆ ಕರೆ ಮಾಡಿ ನಮ್ಮ ಸಣ್ಣ ಧಣಿ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಾರೆಂದು ಹೇಳಿದ್ದಾರೆ. ಈ ಬಗ್ಗೆ ಹನುಮ ಕಿಶೋರ್ ಅವರನ್ನು ಪ್ರಶ್ನಿಸಿದಾಗ ಕಾರ್ಯಕರ್ತರ ಒತ್ತಡ ಸಹಜವಾಗಿ ಇದೆ. ಆದರೆ ಈ ಬಗ್ಗೆ ತಂದೆಯವರನ್ನು ಕೇಳಿ ನಿರ್ಧರಿಸುವುದಾಗಿ ಹೇಳಿದರು.
ತಂದೆಯವರು‌ ಈ ಬಗ್ಗೆ ನನಗೇನು ಗೊತ್ತಿಲ್ಲ ಅಂತಹ ಆಲೋಚನೆ ಇಲ್ಲ ಎಂದಿದ್ದಾರೆ. ಇನ್ನೆರೆಡು ದಿನಗಳಲ್ಲಿ  ಯಾವುದೇ ಬೆಳವಣಿಗೆಗಳು ಸ್ಪಷ್ಟವಾಗಿ ಗೋಚರಿಸಲಿವೆ.