ಮುಂಡ್ರಿಗಿ, ಆಂಧ್ರಾಳ್ ರಸ್ತೆ- ಒಳಚರಂಡಿ ಸಮಸ್ಯೆ ನಿವಾರಿಸಲು ಮನವಿ

ಬಳ್ಳಾರಿ ಮಾ 31 : ನಗರದ ಆಂಧ್ರಾಳ್ ರಸ್ತೆಯಲ್ಲಿರುವ ಹರಿಚಂದ್ರ ಘಾಟ್ ಹತ್ತಿರ ಮೂಲಭೂತ ಸೌಕರ್ಯದ ಕೊರತೆಯಿಂದ ಜನತೆ ಶೋಚನೀಯ ಪರಿಸ್ಥಿತಿಗೆ ಒಳಗಾಗಿದ್ದಾರೆ. ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೆ ಕೆಟ್ಟ ಪರಿಸ್ಥಿತಿ ಉಂಟಾಗಿದೆ ಹಾಗೂ ಸಮರ್ಪಕ ರಸ್ತೆ ಇಲ್ಲದೆ ಸಾರ್ವಜನಿಕರಿಗೆ ಅತೀವ ತೊಂದರೆಯಾಗಿದೆ. ಎಂದು SUಅI [ಅ] ತಿಳಿಸಿದೆ.
ಈ ಕುರಿತಂತೆ ಮಹಾನಗರ ಪಾಲಿಕೆಗೆ ಡಾ ಪ್ರಮೋದ್ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಿದ್ದು,
ನಗರದ ಹೊರ ವಲಯದಲ್ಲಿರುವ ಮುಂಡ್ರಗಿ ಬಡಾವಣೆಯ ಆಶ್ರಯ ಕಾಲನಿಯಲ್ಲಿ ಅನೇಕಾನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಶ್ರಯ ಕಾಲನಿಯ ಮುಖ್ಯ ರಸ್ತೆಯಲ್ಲಿ ಮಳೆ ನೀರಿನ ಕಾಲುವೆಯಲ್ಲಿ ಚರಂಡಿ ನೀರು ಹರಿಯಲು ಅವಕಾಶ ಮಾಡಿಕೊಡಲಾಗಿದೆ. ಚರಂಡಿ ನೀರು ನಿಂತಲ್ಲಿಯೆ ನಿಂತು, ಗೊಬ್ಬು ನಾತ ಬೀರುತ್ತಿದೆ. ರೋಗ ರುಜಿನಗಳಿಗೆ ಕಾರಣವಾಗಿದೆ. ಇದಲ್ಲದೆ ಆಶ್ರಯ ಕಾಲನಿಯ ಕೆಲವು ರಸ್ತೆಗಳಲ್ಲಿ ಒಳಚರಂಡಿ ಪದೇ ಪದೇ ಅಡಚಣೆಗೆ ಒಳಗಾಗಿ ಚರಂಡಿ ನೀರು ಮನೆ ಒಳಗೂ ನುಗ್ಗುತ್ತದೆ. ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ. ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಿತವಾಗಿ ಬರುವುದರಿಂದ ಜನರು ಹಲವು ರೋಗಗಳಿಗೆ ತುತ್ತಾಗಿದ್ದಾರೆ.

ದುಡಿದಿದ್ದೆಲ್ಲಾ ಆಸ್ಪತ್ರೆಗೆ ಇಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಈ ಕೂಡಲೇ ಮಹನಗರಪಾಲಿಕೆಯು ಮುಂಡ್ರಿಗಿ ಹಾಗೂ ಹರಿಶ್ಚಂದ್ರ ಘಾಟ್ ಬಳಿಯ ಪ್ರದೇಶಗಳಿಗೆ ಸಮರ್ಪಕ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು SUಅI [ಅ] ನಗರ ಸ್ಥಳೀಯ ಸಮಿತಿಯು ಮನವಿ ಮಾಡಿಕೋಂಡಿದೆ.