ಮುಂಡರಗಿ ಕಳ್ಳತನ ಭೇದಿಸಿದ ಖಾಕಿಪಡೆ

ದೇವದುರ್ಗ.ನ.೨೨- ತಾಲೂಕಿನ ಐತಿಹಾಸಿಕ ಮುಂಡರಗಿ ಶ್ರೀಶಿವರಾಯ ದೇವಸ್ಥಾನದಲ್ಲಿ ಬೆಳ್ಳಿಯ ಮೂರ್ತಿ, ಪ್ರಭಾವಳಿ ಸೇರಿ ಸುಮಾರು ೩ಲಕ್ಷ ರೂ. ಆಭರಣಗಳನ್ನು ಕಳ್ಳತನ ಮಾಡಿದ್ದ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಾದಗಿರಿ ಜಿಲ್ಲೆಯ ರುಕ್ಮಾಪುರದ ಪ್ರಭು ನಂದಪ್ಪ, ಎಲ್ಲೇರಿ ತಾಂಡಾದ ಅರ್ಜುನ್ ನ್ಯಾಮನಾಯ್ಕ್, ಎಲ್ಲೇರಿತಾಂಡಾದ ಹೇಮ ಮುಂಗ್ಯಾನಾಯ್ಕ, ಕುಂಬಾರಪೇಟೆಯ ಹುಸೇನ್‌ಬಾಷಾ ಹುಸೇನ್ ಸಾಬ್, ಕವಡಿಮಟ್ಟಿಯ ಮಾನಪ್ಪ ಸಿದ್ದಪ್ಪ ಕಡಂಗೇರಿ ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ ಶ್ರೀಶಿವರಾಯ ತಾತನ ಬೆಳ್ಳಿಮೂರ್ತಿ, ಬೆಳ್ಳಿಯ ಪ್ರಭಾವಳಿ, ಬೆಳ್ಳಿಯ ಕೊಡಲಿ, ಎರಡು ಬೆಳ್ಳಿಯ ಲಿಂಗದಕಾಯಿ, ಎರಡು ಬೆಳ್ಳಿಯ ಶಿವನಮೂರ್ತಿ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಭೇದಿಸಲು ಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು ಎಂದು ಸಿಪಿಐ ಆರ್.ಎಂ.ನದಾಫ್ ತಿಳಿಸಿದ್ದಾರೆ.