ಮುಂಡರಗಿ:ಹದಗೆಟ್ಟ ರಾಜ್ಯ ಹೆದ್ದಾರಿ ದುರಸ್ತಿಗೆ ಆಗ್ರಹ

ದೇವದುರ್ಗ,ಜ.೧೭- ಸಮೀಪದ ಮುಂಡರಗಿ ಗ್ರಾಮದ ಮೂಲಕ ಗಲಗ ಹಾಗೂ ಅಮರಪುರ ಕ್ರಾಸ್ ವರೆಗೆ ರಾಜ್ಯ ಹೆದ್ದಾರಿ ೧೨೮ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಯೋಗ್ಯವಿಲ್ಲವಾಗಿದ್ದು, ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ ಎಂದು ವಾಹನ ಚಾಲಕರು ಆರೋಪಿಸಿದ್ದಾರೆ.
ಗಲಗ-ಅಮರಪುರ ಕ್ರಾಸ್ ಮಧ್ಯೆ ೧೪ ಕಿ.ಮೀ ಹೊಂದಿರುವ ಈ ರಸ್ತೆಯಲ್ಲಿ ಅತಿಹೆಚ್ಚು ಹದಗೆಟ್ಟಿರುವುದು ಮುಂಡರಗಿ ಗ್ರಾಮದಿಂದ ಗಣಜಲಿ ಗ್ರಾಮದವರೆಗೆ ತುಂಬಾ ಹದಗೆಟ್ಟು ಹೋಗಿದೆ. ಲೋಕೋಪಯೋಗಿ ಇಲಾಖೆ ತಾಲ್ಲೂಕಿನಲ್ಲಿ ಇದ್ದು ಇಲ್ಲವಾಗಿದೆ.
ಈ ಹಿಂದೆ ರಸ್ತೆಗಳಲ್ಲಿ ಸಣ್ಣ ಪ್ರಮಾಣದ ಗುಂಡಿಗಳು ಬಿದ್ದರು ಸಹ ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿತ್ತು. ಅದರೆ, ಈಚೆಗೆ ಯಾವುದೇ ರಸ್ತೆಗಳಲ್ಲಿ ಗುಂಡಿ ಬಿದ್ದು ತೊಂದರೆ ಉಂಟಾದರೆ ದುರಸ್ತಿ ಕಾಣುವುದು ದೂರದ ಮಾತು ಎನ್ನುವಂತಾಗಿದೆ ಎಂದು ಗಣಜಲಿ ಗ್ರಾಮದ ನಿವಾಸಿ
ಹನಮಂತಪ್ಪ ಆರೋಪಿಸಿದರು.
ಕಳೆದ ಎರಡು ವರ್ಷಗಳ ಹಿಂದೆಯೇ ಈ ರಸ್ತೆಯಲ್ಲಿರುವ ಕಿರು ಸೇತುವೆಯಲ್ಲಿ ಬೋಂಗ ಬಿದ್ದಿದೆ. ಅದನ್ನು ದುರಸ್ತಿ ಮಾಡಲು ಅನೇಕ ಬಾರಿ ಮಾನವಿ ಮಾಡಿಕೊಂಡರು ಸಹ ಇಲ್ಲಿಯವರೆಗೆ ಏನು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ತಾಲ್ಲೂಕಿನ ಪ್ರಸಿದ್ದ ದೇವಸ್ಥಾನಗಳಲ್ಲಿ ಮುಂಡರಗಿಯ ಶಿವರಾಯ ದೇವಸ್ಥಾನ ಕೂಡ ಇದೆ. ನಿತ್ಯ ನೂರಾರೂ ಸಂಖ್ಯೆಯಲ್ಲಿ ಭಕ್ತರು ಇದೇ ರಸ್ತೆಯ ಮೂಲಕವೇ ದೂರದ ಗ್ರಾಮಗಳಿಂದ ದರ್ಶನಕ್ಕೆ ಬರುತ್ತಾರೆ.
ಅದರೆ, ರಸ್ತೆ ಹದಗೆಟ್ಟಿರುವುದರಿಂದ ಕುಟುಂಬ ಸಮೇತವಾಗಿ ಬೇಟಿ ನೀಡುವವರ ಸಂಖ್ಯೆ ಕಡಿಮೆಯಾಗಿದೆ. ಕಾರಣ ಅನೇಕರು ಈ ರಸ್ತೆಯಲ್ಲಿ ಬಿದ್ದ ಕೈ ಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ದೇವಸ್ಥಾನದ ಪರಮಾ ಭಕ್ತರಾಗಿದ್ದು, ಪ್ರತಿ ಆಮವಾಸೆ, ಹುಣ್ಣುಮೆ ಈ ಗ್ರಾಮದ ದೇವಸ್ಥಾನಕ್ಕೆ ಬೇಟಿ ನೀಡಿ ದರ್ಶನ ಪಡೆಯುತ್ತಾರೆ. ಅದರೂ ಸಹ ಅ ರಸ್ತೆ ದುರಸ್ತಿ ಬಗ್ಗೆ ಗಮನ ಹರಿಸದೇ ಇರುವುದು ಸಾರ್ವಜನಿಕರಲ್ಲಿ ಬೇಸರದ ಸಂಗತಿಯಾಗಿದೆ.
ಅಲ್ಲದೇ ರಸ್ತೆಯ ಮಧ್ಯೆ ಅನೇಕ ಕಡೆ ಬೇಕಾ ಬಿಟ್ಟಿಯಾಗಿ ರೈತರು ರಸ್ತೆ ಅಗೆದು ನೀರಿನ ಪೈಪ್ ಹಾಕಿದ್ದು, ವಿದ್ಯುತ್ ವೈರ್ ಗಳನ್ನು ಹಾಕಿಕೊಂಡಿರುವುದು, ಪ್ರತಿ ಅಂಗಡಿ, ಮನೆಗಳಿಗೆ ಒಂದು ರಸ್ತೆ ಉಬ್ಬು ಹಾಕಿರುವುದು ಇದರಿಂದ ಪ್ರಯಾಣಿಕರಿಗೆ ಹಾಗೂ ವಾಹನ ಚಾಲಕರಿಗೂ ತುಂಬಾ ತೊಂದರೆಯಾಗಿದೆ. ತಕ್ಷಣವೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಮುಂಡರಗಿ, ಗಣಜಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅಧಿಕಾರಿ ಪ್ರತಿಕ್ರಿಯೆ ರಸ್ತೆ ತುಂಬಾ ಹದಗೆಟ್ಟಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಮುಂಡರಗಿ ಗ್ರಾಮದಿಂದ ಗಣಜಲಿ ಗ್ರಾಮದವರೆಗೆ ಸಿ.ಸಿ ರಸ್ತೆ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಮಾನ್ವಿ ಮೂಲಕದ ಗುತ್ತಿಗೆದಾರ ಎಂ ಈರಣ್ಣ ಅವರಿಗೆ ಕೆಲಸ ಅಗಿದೆ. ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು. ಅಲ್ಲದೇ ರಸ್ತೆ ಮಧ್ಯೆ ರೈತರು ಅಗೆದು ಅಕ್ರಮವಾಗಿ ಪೈಪ್,ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ತಪ್ಪಿತಸ್ಥ ರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು.