ಮುಂಜಾನೆ ಮಾಯವಾದ ಕಾರು ಸಂಜೆ ಪತ್ತೆಯಾಯ್ತು

ಬಳ್ಳಾರಿ, ಜೂ.03: ಈ ಕೆಂಪು ಕಲರ್ ಸ್ವಿಫ್ಟ್ ಕಾರು ನಿನ್ನೆ ಬೆಳಗಿನ ಜಾವ ಕಳ್ಳತನ ಆಯ್ತು, ಹುಡುಕಾಡುವುದಕ್ಕೆ ಆರಂಭಿಸುವುದರೊಳಗೆ ಸಂಜೆ ವೇಳೆಗೆ ಬೇರೊಂದು ಕಡೆ ಪತ್ತೆಯಾಗಿದೆ.
ಮರಳು ಗುತ್ತಿಗೆದಾರ ಹಗರಿ ಗಾದಿಲಿಂಗಪ್ಪಗೆ ಸೇರಿದ ಈ ಸ್ವಿಫ್ಟ್ ಕಾರನ್ನು ನಿನ್ನೆ ಬೆಳಗಿನ ಜಾವ 3.30ಕ್ಕೆ ಕಳುವು ಮಾಡಲಾಗಿದೆ. ಬೆಳಿಗ್ಗೆ ಈ ಬಗ್ಗೆ ಅವರು ಕೌಲ್ ಬಜಾರ್ ಠಾಣೆಗೆ ಕಳುವಿನ ಮಾಹಿತಿ ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿಲ್ಲ. ಆದರೆ ಎತ್ತ ಹೋಗಿದೆ ಎಂದು ಹುಡುಕುವಷ್ಟರಲ್ಲಿ ತಾಳೂರು ರಸ್ತೆಯ ಭಗತ್ ಸಿಂಗ್ ನಗರ ಬಳಿ ಕಾಲುವೆಯ ಪಕ್ಕದಲ್ಲಿ ಸಂಜೆ ಪತ್ತೆಯಾಗಿದೆ.
ಕಾರನ್ನು ಯಾರು ಕದ್ದರು ಮತ್ತೆ ಏಕೆ ಅಲ್ಲೇ ಬಿಟ್ಟು ಹೋದರು ಎಂಬುದು ಮಾತ್ರ ಪ್ರಶ್ನೆಯಾಗಿದೆ.