ಮುಂಜಾಗ್ರತ ಕ್ರಮ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ ದಂಡಾಧಿಕಾರಿ

ನಂಜನಗೂಡು: ಜೂ.08: ಕಳೆದ ಬಾರಿ ಪ್ರವಾಹ ಉಂಟಾಗಿದ್ದ ಸಮಯದಲ್ಲಿ ತೆಗೆದುಕೊಂಡ ಮುಂಜಾಗ್ರತ ಕ್ರಮಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ ದಂಡಾಧಿಕಾರಿ ಮೋಹನ್ ಕುಮಾರಿ ಮಾಹಿತಿ ಪಡೆದರು.
ಈ ಸಭೆಯಲ್ಲಿ ಅಗ್ನಿಶಾಮಕ ದಳ ನೀರಾವರಿ ಇಲಾಖೆ ನಗರಸಭೆ ಪೆÇಲೀಸ್ ಇಲಾಖೆ ಕೃಷಿ ಇಲಾಖೆ ಲೋಕಪಯೋಗಿ ಇಲಾಖೆ ದಾಸೋಹ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳ ಮಾಹಿತಿ ಪಡೆದರು.
ದಂಡಾಧಿಕಾರಿ ಮೋಹನ್ ಕುಮಾರಿ ಮಾತನಾಡಿ ಕಳೆದ ವರ್ಷ ಪ್ರವಾಹದಲ್ಲಿ ಕೋವಿಡ್-19 ಇರಲಿಲ್ಲ. ಆದರೆ ಈ ಬಾರಿ ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕು ಅಂತರ ಕಾಯ್ದುಕೊಳ್ಳಬೇಕು. ಆದ್ದರಿಂದ ಕಳೆದ ಬಾರಿ ಗಿಂತ ಹೆಚ್ಚು ಗಂಜಿ ಕೇಂದ್ರ ತೆರೆಯಬೇಕು ಕಳೆದ ಬಾರಿ ಪ್ರವಾಹದಲ್ಲಿ ಹಾನಿಯಾದ ಮನೆಗಳಿಗೆ ಹಣ ಬಿಡುಗಡೆಯಾಗಿದೆ.
ಈ ಬಾರಿ ಅದೇ ಮನೆಗೆ ಹಾನಿಯಾದರೆ ಹಣ ನೀಡುವುದಿಲ್ಲ ಗೋಶಾಲೆ ತೆರೆಯಬೇಕು ಬೆಳೆಗಳ ಮುಳುಗಡೆ ಬಗ್ಗೆ ಎಚ್ಚರಿಕೆ ವಹಿಸಬೇಕು ಕಳೆದ ಬಾರಿ ನಗರದಲ್ಲಿ ಮುಳುಗಡೆಯಾಗಿದ್ದ ಹಳ್ಳದಕೆರಿ ಮೇದರ ಬೀದಿ ಒಕ್ಕಲಗೇರಿ ಸರಸ್ವತಿ ಕಾಲೋನಿ ಕುರುಬಗೇರಿ ಸ್ಥಳ ಪರಿಶೀಲಿಸಿ ಮುಂಜಾಗ್ರತೆ ಕ್ರಮ ವಹಿಸಲು ಸೂಚಿಸಿದರು.
ಇದಲ್ಲದೆ ಅಗ್ನಿಶಾಮಕದಳದವರು ನಗರ ಸಭೆಯವರು ಹೆಚ್ಚು ಮುಂಜಾಗ್ರತೆ ಕ್ರಮವಹಿಸಬೇಕು ಇದರ ಜೊತೆಗೆ ಪ್ರವೀಣತೆ ಹೊಂದಿರುವ ಈಜುಗಾರ ಅದನ್ನು ಗುರುತಿಸಬೇಕು ಹಾಗೂ ಎಲ್ಲೆಲ್ಲಿ ರಸ್ತೆ ಮುಳುಗಡೆಯಾಗುತ್ತದೆ ಬದಲಿ ರಸ್ತೆ ನಿರ್ಮಿಸಲು ಸೂಚಿಸಿದರು ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿ ಕೂಡ ಹೆಚ್ಚಿನ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಎಲ್ಲಾ ಅಧಿಕಾರಿಗಳು ಸೂಚನೆ ನೀಡಿದರು ಒಟ್ಟಿನಲ್ಲಿ ಪ್ರವಾಹ ಎದುರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆಯಲ್ಲಿದೆ.