ಮುಂಜಾಗ್ರತಾ ಕ್ರಮ ಕೈಗೊಳ್ಳುಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಹರಿಹರ.ಜೂ.೪ : ರಾಜ್ಯದಾದ್ಯಂತ ಮುಂಗಾರು ಆರಂಭದ  ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ಶಿವಾನಂದ ಕಾಪಸಿಯವರು ಹರಿಹರಕ್ಕೆ ಭೇಟಿ ನೀಡಿ ತಾಲೂಕಿನ ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳು ಸೂಚನೆ ನೀಡಿದರು.ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಿ ನ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಮಾತನಾಡಿ ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಮುಂಗಾರು ಆರಂಭವಾಗು ತ್ತಿರುವ ಹಿನ್ನೆಲೆಯಲ್ಲಿ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ತಹಸಿಲ್ದಾರ್ ರೊಂದಿಗೆ ಹರಿಹರ ತಾಲೂಕಿನ ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮುಂಜಾಗ್ರತ ಕ್ರಮಗಳನ್ನು ತೆಗೆದು ಕೊಳ್ಳುವಂತೆ ಸೂಚನೆ ನೀಡಿದ್ದೀನೆ.ಮಳೆ ಹೆಚ್ಚಾಗಿ ಬಿದ್ದ ಪ್ರದೇಶಗಳಲ್ಲಿನ ಜನಜಾನುವಾರು ಬೆಳೆಗಳ ಸಮೀಕ್ಷೆಯನ್ನು ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜಯಂತಿಯಾಗಿ ಮಾಡಿ ತಕ್ಷಣ ವರದಿಯನ್ನು ಜಿಲ್ಲಾ ಆಡಳಿತಕ್ಕೆ ತಿಳಿಸುವಂತೆ ಎಚ್ಚರಿಕೆ ನೀಡಲಾಗಿದೆ ಸಂತ್ರಸ್ತರಿಗೆ ಯಾವುದೇ ರೀತಿಯ ಕಿರುಕುಳ ಇತರೆ ಸಮಸ್ಯೆ ಆಗದಂತೆ ವರದಿಯನ್ನು ಸರಳವಾಗಿ ತಯಾರಿಸಿ ಕಳಿಸುವಂತೆಯೂ ತಿಳಿಸಲಾಗಿದೆ.ಅಲ್ಲದೆ ನಗರ ಪ್ರದೇಶದಲ್ಲಿ ಪ್ರಭಾವಕ್ಕೆ ತುತ್ತಾಗುವ ಬಡಾವಣೆಗಳಲ್ಲಿ ಮುಂಜಾಗ್ರತ ಕ್ರಮವಾಗಿ ಅಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆಯ ಅಧಿಕಾರಿಗಳು ಸನ್ನದ್ಧರಾಗಬೇಕು.ಮುಖ್ಯವಾಗಿ ನಗರದ ಹೊರವಲಯದಲ್ಲಿನ ಗಂಗಾನಗರ ಬಡಾವಣೆಯ ನಿವಾಸಿಗಳು ಅವರಿಗೆ ಮುಂಬರುವ ದಿನಗಳಲ್ಲಿ ಸರ್ಕಾರದ ಯಾವುದಾದರೂ ವಸತಿ ಯೋಜನೆಗಳಲ್ಲಿ ಸೂರು ಕಲ್ಪಿಸುವ ಆಲೋಚನೆ ಮಾಡಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ಈ ಸಮಯದಲ್ಲಿ ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ತಾ.ಪಂ.ಕಾರ್ಯ ನಿರ್ವಹಣಾ ಧಿಕಾರಿ,ಸಿಬ್ಬಂದಿಗಳು ಹಾಗೂ ಕೆಲ ಪಿಡಿಓಗಳು ಭಾಗವಹಿಸಿದ್ದರು.