ಮುಂಜಾಗೃತ ಕ್ರಮದಿಂದ ಡೆಂಗೀ ಜ್ವರ ನಿಯಂತ್ರಣ ಸಾಧ್ಯ:ಶಿಲ್ಪಾ.ಎಂ

ಬೀದರ, ಮೇ 17: ಈಡಿಸ್ ಇಜಿಪ್ವೈ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಡೆಂಗೀ ಕಾಯಿಲೆಯು ಅಪಾಯಕಾರಿಯಾಗಿದು ನಾವೇಲ್ಲರೂ ಮುಂಜಾಗೃತ ಕ್ರಮ ತೆಗೆದುಕೊಡ್ಡಲ್ಲಿ ಇದನ್ನು ತಡೆಯಬಹುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ ಹೇಳಿದರು.

ಅವರು ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೀದರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಡೆಂಗೀ ದಿನ, ಜಾಗೃತಿ ಜಾಥ ಹಾಗೂ ಜನ ಜಾಗೃತಿ ಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡದರು.

ಇದ್ದಕ್ಕಿದ್ದಂತೆ ತಿವ್ರ ಜ್ವರ, ವಿಪರೀತ ತಲೆ ನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸ ಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಡೆಂಗೀ ರೋಗದ ಲಕ್ಷಣಗಳಾಗಿದ್ದು ಇವುಗಳಲ್ಲಿ ಯಾವುದೇ ಒಂದು ಸಮಸ್ಯೆ ಕಂಡುಬಂದರು ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರತಿಕಾಂತ ವಿ ಸ್ವಾಮಿ ಮಾತನಾಡಿ ಜಿಲ್ಲೆಯಲ್ಲಿ ಮಾನಸೂನ್ ಪ್ರಾರಂಭವಾಗುವ ಲಕ್ಷಣಗಳಿರುವುದರಿಂದ ಸೊಳ್ಳೆ ಉತ್ಪತ್ತಿ ಹೆಚ್ಚಾಗಿ ಡೆಂಗೀ, ಚಿಕ್ಕುಂಗುನ್ಯಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಬೀದರ ಜಿಲ್ಲೆಯಲ್ಲಿ ಡೆಂಗೀ ರೋಗ ದಿಂದ ಇಲ್ಲಿಯವರೆಗೆ ಯಾವುದೇ ಸಾವು ಸಂಭಿವಿಸಿರುವುದಿಲ್ಲ ಇದು ಜಿಲ್ಲೆಯಲ್ಲಿ ಡೆಂಗೀ ರೋಗ ನಿಯಂತ್ರಣದಲ್ಲಿದೆ ಎಂದು ಸೂಚಿಸುತ್ತದೆ ಎಂದು ಹೇಳಿದರು.

ಡೆಂಗೀ ರೋಗ ನಿಯಂತ್ರಣಕ್ಕೆ ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದ, ಸ್ಥಳೀಯ ನಗರ ಸಭೆ, ಪಟ್ಟಣ ಪಂಚಾಯಿತಿ ಹಾಗೂ ಪುರಸಬೆ ಇವರ ಸಹಕಾರದೊಂದಿಗೆ ಪ್ರತಿ ತಿಂಗಳ ಮೊದಲನೆ ಮತ್ತು ಮೂರನೇ ಶುಕ್ರವಾರದಂದು ಡೆಂಗೀ ನಿಯಂತ್ರಣಕ್ಕಾಗಿ ಈಡೀಸ್ ಲಾರ್ವಾ ಸಮೀಕ್ಷೆ ಹಾಗೂ ನಿರ್ಮೂಲನೆ ಕಾರ್ಯವನ್ನು ಕೈಕೊಳ್ಳಲಾಗುತ್ತಿದೆ. ಈ ಚಟವಟಿಕೆಗಳು ಜಿಲ್ಲೆಯಾದ್ಯಂತೆ ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ಆಶಾ ಕಾರ್ಯಕ್ರರ್ತರು, ಆರೋಗ್ಯ ಸಿಬ್ಬಂದಿಗಳ ಮೂಲಕ ಕೈಕೊಳ್ಳಲಾಗುತ್ತಿದೆ.ಆದ್ದರಿಂದ ತಮ್ಮ ಮನೆಗಳಿಗೆ ಭೆಟ್ಟಿ ನೀಡುವ ಸಿಬ್ಬಂದಿಗಳಿಗೆ ಸಹಕಾರ ನೀಡಿ ಅವರ ಸೂಚನೆ ಅನುಸಾರ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಹಾಗೂ ನಿಯಂತ್ರಣಕ್ಕಾಗಿ ಸಾರ್ವಜನಿಕರು ಸಹಕರಿಸಬೇಕು ಎಂದರು.

ಬೀದರ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ .ಡಾ.ಸಂಜೀವಕುಮಾರ ಪಾಟೀಲ್ ಮಾತನಾಡಿ ಜಿಲ್ಲೆಯಲ್ಲಿ 2023ನೇ ಸಾಲಿನಲ್ಲಿ ಇಲ್ಲಿಯವರೆಗೆ ಎರಡು ಡೆಂಗೀ ಖಚಿತ ಪ್ರಕರಣ ವರದಿಯಾಗಿವೆ. ಸೊಳ್ಳೆಯಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಸದಾಕಾಲ ಮೈತುಂಬಾ ಬಟ್ಟೆಧರಿಸಬೇಕು. ಮಲಗುವಾಗ ಸೊಳ್ಳೆ ಪರದೆ ಬಳಸಬೇಕು. ಮನೆಕಿಟಕಿ ಬಾಗಿಲುಗಳಿಗೆ ಜಾಲರಿಗಳನ್ನು ಅಳವಡಿಸಬೇಕು. ಸೊಳ್ಳೆ ನಿರೋಧಕ ಸೇರಿದಂತೆ ಇನ್ನಿತರ ಮುಂಜಾಗೃತ ಕ್ರಮಗಳಿಂದ ಡೆಂಗೀ ಜ್ವರ ಬರದಂತೆ ತಡೆಯಬಹುದು ಎಂದ ಅವರು ಈ ವರ್ಷ “ಎಲ್ಲರ ಸಹಭಾಗಿತ್ವದೊಂದಿಗೆ ಡೇಂಗೀಯನ್ನು ಸೋಲಿಸೋಣ”ಎಂಬ ಘೋಷವಾಕ್ಯದೊಂದಿಗೆ ಎಲ್ಲರೂ ಸೇರಿ ಜಿಲ್ಲೆಯಾದ್ಯಂತ ಡೆಂಗೀ ನಿಯಂತ್ರಿಸೋಣ ಎಂದು ಹೇಳಿದರು..

ಡೆಂಗೀ ನಿಯಂತ್ರಣ ಜಾಗೃತಿ ಜಾಥಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ ಚಾಲನೆ ನೀಡಿದರು ಜಾಥವು ನಗದರ ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯಿಂದ ಆರಂಭವಾಗಿ ಜನವಾಡಾರಸ್ತೆ, ಅಂಬೇಡ್ಕರ ವೃತ್ತ, ಭಗತಸಿಂಗ ವೃತ್ತ, ತಹಸೀಲ್ ಕಛೇರಿ, ಜಿಲ್ಲಾಧಿಕಾರಿಗಳ ಕಛೇರಿ, ನಗರ ಸಭೆ ಕಛೇರಿ, ಹರಳಯ್ಯಾ ವೃತ್ತ ಮಾರ್ಗವಾಗಿ ಸಾಗಿ ಪುನಃ ಡಿಎಚ್‍ಓ ಕಛೇರಿ ತಲುಪಿತು.

ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿಗ ಡಾ.ಶಿವಶಂಕರ.ಬಿ, ಡಿಎಸ್‍ಓ ಡಾ.ಶಂಕ್ರೇಪ್ಪ ಬೊಮ್ಮಾ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಕಿರಣ ಪಾಟೀಲ್, ಬೀದರ ತಾಲ್ಲೂಕ ಆರೋಗ್ಯ ಅಧೀಕಾರಿ ಡಾ. ಸಂಗಾರೆಡ್ಡಿ ಕೆ, ನಗರ ಆರೋಗ್ಯ ಕೇಂದ್ರಗಳ ವೈದ್ಯಧಿಕಾರಿ ಡಾ.ಮೊಹ್ಮದ್ ಸೋಹೇಲ್, ಸಮಾಲೋಚಕ ಕೀಟಶಾಸ್ತ್ರಜ್ಞ ಜೇತುಲಾಲ ಪವಾರ, ಉಪ ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿಗಳಾದ ಅನಿತಾ, ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಶುಶ್ರುತ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.