ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆಗೆ ಆದ್ಯತೆ

ಹರಿಹರ.ಜು.1;  ಅಂಗವೈಕಲ್ಯ ಮಾನಸಿಕ ಅಸ್ವಸ್ಥೆ ಸೇರಿದಂತೆ ಹಲವು ಫಲಾನುಭವಿಗಳಿಗೆ ಮಹಾಮಾರಿ ವೈರಸ್  ಲಸಿಕೆ ಹಾಕುವುದಕ್ಕೆ  ಆದ್ಯತೆ ನೀಡಬೇಕು ಎಂದು ತಹಸೀಲ್ದಾರ್ ಕೆ ಬಿ ರಾಮಚಂದ್ರಪ್ಪ ಹೇಳಿದರು ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರದ ಆದೇಶದಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ 18 ರಿಂದ 44 ವರ್ಷದ ವಯೋಮಾನದವರಲ್ಲಿ ಇದ್ದವರಿಗೆ ಆದ್ಯತೆ ನೀಡಿ ಗುರುತಿಸಿ  ಲಸಿಕೆ ಹಾಕಿಸುವುದಕ್ಕೆ ನೇಮಕ ಮಾಡಿದ ನೋಡಲ್ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಮಾಡಬೇಕೆಂದು ಸೂಚಿಸಿದರು ಕೋವಿಡ್ 19 ಮುಂಚೂಣಿ ಕಾರ್ಯಕರ್ತರಾದ ಅಂಗವೈಕಲ್ಯ ಹೊಂದಿರುವ ಮಾನಸಿಕ ಅಸ್ವಸ್ಥೆ ಸೇರಿದ ಫಲಾನುಭವಿಗಳ ಚಿತಾಗಾರರುಸ್ಮಶಾನ ಒಬ್ರೂಗು ಮೇಲೆ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸಹಾಯಕರು ಆರೋಗ್ಯ ಕಾರ್ಯಕರ್ತರು  ಕುಟುಂಬಸ್ಥರು ಕೋವಿಡ್ 19 ಕರ್ತವ್ಯ  ನಿಯೋಜಿಸಲಾದ ಶಿಕ್ಷಕರು ಸರ್ಕಾರಿ ಸಾರಿಗೆ ಸಿಬ್ಬಂದಿ ಆಟೋ ಮತ್ತು ಕ್ಯಾಬ್ ಚಾಲಕರು ವಿದ್ಯುತ್ ಮತ್ತು ನೀರು ಸರಬರಾಜು ಮಾಡುವವರು ಅಂಚೆ ಇಲಾಖೆ ಬೀದಿ ಬದಿ ವ್ಯಾಪಾರ ಅಂಚೆ ಇಲಾಖೆ ನ್ಯಾಯಾಂಗ ವಯೋ ವೃದ್ಧರು ತ್ರೀವ ಅನಾರೋಗ್ಯದಿಂದ ಬಳಲುತ್ತಿರುವವರು ಆರೈಕೆದಾರರು ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವ ಆಕ್ಸಿಜನ್ ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳ ಸರಬರಾಜು ಮಾಡುವ ಸಿಬ್ಬಂದಿಗಳು  ನಿರ್ಗತಿಕರು ಕೃಷಿ ಉತ್ಪನ್ನ ಮಾರುಕಟ್ಟೆ ಇತರ ಕರೋನಾ ಮುಂಚೂಣಿ ಕಾರ್ಯಕರ್ತರುಗಳಿಗೆ  ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಯೋಜನೆಯಲ್ಲಿ ಲಸಿಕೆಯನ್ನು ಹಾಕಿಸಿಕೊಳ್ಳುವುದಕ್ಕೆ ಸರ್ಕಾರ ಆದೇಶ ಮಾಡಿದೆ ಎಂದರು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ   ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಆಯಾ ಗುಂಪಿನ ನೋಡಲ್ ಅಧಿಕಾರಿಗಳು ಪ್ರತಿ ಫಲಾನುಭವಿಗಳಿಗೆ ಕೋವಿಡ್ 19 ಲಸಿಕೆಯನ್ನು ಹಾಕಿಸಬೇಕೆಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದರು ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಯು . ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಡಿ ಚಂದ್ರಮೋಹನ್ .ಪೌರಾಯುಕ್ತೆ ಎಸ್ ಲಕ್ಷ್ಮಿ .ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ  ಎಲ್ ಹನುಮನಾಯ್ಕ್.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಜಿ ಡಿ ಗಂಗಾಧರ್ .ಕೃಷಿ. ಕಾರ್ಮಿಕ  .ಪಿಡಬ್ಲುಡಿ. ಬೆಸ್ಕಾಂ .ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು