ಮುಂಚೂಣಿ ಕಾರ್ಯಕರ್ತರಿಗೆ ಮಾಸ್ಕ್ , ಸ್ಯಾನಿಟೈಜರ್ ವಿತರಣೆ


ಗದಗ,ಜೂ.2: ಜಿಲ್ಲಾಡಳಿತಕ್ಕೆ ದಾನಿಗಳು ನೆರವು ನೀಡಿದ ಮಾಸ್ಕ್ , ಸ್ಯಾನಿಟೈಜರ್ ಹಾಗೂ ಫೇಸ್‍ಶೀಲ್ಡ್ಗಳನ್ನು ಜಿಲ್ಲಾಡಳಿತದಿಂದ ಆರೋಗ್ಯ ಇಲಾಖೆ ಸೇರಿದಂತೆ ಮುಂಚೂಣಿ ಕಾರ್ಯ ನಿರ್ವಹಿಸುವ ವಿವಿಧ ಇಲಾಖೆಗಳಿಗೆ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ವಿತರಿಸಿದರು.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಂ.ಸುಂದರೇಶ್ ಬಾಬು ಮಾತನಾಡಿ ಆರೋಗ್ಯ ಇಲಾಖೆ ಸೇರಿದಂತೆ ಸೋಂಕು ನಿಯಂತ್ರಣಕ್ಕಾಗಿ ಪೆÇಲೀಸ ಇಲಾಖೆ , ಹೋಮ್ ಗಾರ್ಡ , ಮಹಿಳಾ ಮಕ್ಕಳ ಇಲಾಖೆ, ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಪಂಚಾಯತ್ , ತಾಲೂಕಾ ಆಡಳಿತಗಳು ಮುಂಚೂಣಿ ಸೇನಾನಿಗಳಾಗಿ ಶ್ರಮಿಸುತ್ತಿವೆ. ಈ ಎಲ್ಲ ಇಲಾಖೆಗಳಲ್ಲಿನ ಅಧಿಕಾರಿ ಸಿಬ್ಬಂದಿಗಳಿಗೆ ಮಾಸ್ಕ್ , ಸ್ಯಾನಿಟೈಜರ್ ನೀಡಲು ಇಲಾಖೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾಡಳಿತಕ್ಕೆ ದಾನಿಗಳ ಮುಖಾಂತರ ನೀಡಲಾದ ಮಾಸ್ಕ್ ಸ್ಯಾನಿಟೈಜರ್ ಗಳನ್ನು ಹೆಚ್ಚುವರಿಯಾಗಿ ಇಂದು ನೀಡಲಾಗಿದೆ.
ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ಸುರಕ್ಷತಾ ಕ್ರಮವಾಗಿ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಲು ಅವಕಾಶ ನೀಡಲಾಗಿದ್ದು ಲಸಿಕೆ ಪಡೆಯದವರು ಲಸಿಕೆ ಪಡೆಯಬೇಕು. ಎಲ್ಲರೂ ಸೋಂಕು ಹರಡುವಿಕೆ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದರೊಂದಿಗೆ ಇತರರಿಗೂ ಪಾಲಿಸಲು ತಿಳಿಸಬೇಕು ಎಂದರು.
ಜಿಲ್ಲಾಡಳಿತದಿಂದ ಪೆÇಲೀಸ ಇಲಾಖೆಗೆ 3000 ಮಾಸ್ಕ್ , 30ಲೀ ಸ್ಯಾನಿಟೈಜರ್ , ಗೃಹ ರಕ್ಷಕ ಇಲಾಖೆಗೆ 2000 ಮಾಸ್ಕ್ , 5 ಲೀ ಸ್ಯಾನಿಟೈಜರ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 5000 ಮಾಸ್ಕ್ , 25 ಲೀ ಸ್ಯಾನಿಟೈಜರ್ , ನಗರಸಭೆ ಗೆ 3000 ಮಾಸ್ಕ್ , 5 ಲೀ ಸ್ಯಾನಿಟೈಜರ್ , ಜಿಲ್ಲಾ ಪಂಚಾಯತ್ ಗೆ 3000 ಮಾಸ್ಕ್ , 30 ಲೀ ಸ್ಯಾನಿಟೈಜರ್ , ಆರೋಗ್ಯ ಇಲಾಖೆಗೆ 1000 ಮಾಸ್ಕ್ , 25 ಲೀ ಸ್ಯಾನಿಟೈಜರ್ , ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ ಕಚೇರಿಗಳಿಗೆ 3000 ಮಾಸ್ಕ್ , 30 ಲೀ ಸ್ಯಾನಿಟೈಜರ್ ಹಂಚಿಕೆ ಮಾಡಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭರತ್ ಎಸ್, ಜಿಲ್ಲಾ ಪೆÇಲೀಸ ವರಿಷ್ಟಾಧಿಕಾರಿ ಯತೀಶ್ ಎನ್, ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಸೇರಿದಂತೆ ವಿವಿಧ ಇಲಾಖೆಯ ಮುಖ್ಯಸ್ಥರು ಹಾಜರಿದ್ದರು.