ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್-19 ಲಸಿಕಾಕರಣಕ್ಕೆ ನೋಡಲ್ ಅಧಿಕಾರಿಗಳ ನೇಮಕ

ವಿಜಯಪುರ, ಮೇ.31-ರಾಜ್ಯ ಮಟ್ಟದ ಕಾರ್ಯಪಡೆ ಸಭೆಯ ನಿರ್ದೇಶನದಂತೆ ರಾಜ್ಯ ಕರೋನಾ ಮುಂಚೂಣಿ ಕಾರ್ಯಕರ್ತರು ಎಂದು ಗುರುತಿಸಲಾದ ಸಮೂಹಗಳ 18 ರಿಂದ 44 ವರ್ಷದ ವಯೋಮಾನದ ಸಿಬ್ಬಂದಿಗಳಿಗೆ ಆದ್ಯತೆಯ ಮೇರೆಗೆ ಕೋವಿಡ್-19 ಲಸಿಕಾಕರಣವನ್ನು ಆಯೋಜಿಸುವಂತೆ ಸೂಚಿಸಿರುತ್ತಾರೆ.
ಸರಕಾರದ ದಿ.26-05-2021 ರ ನಿರ್ದೇಶನದಂತೆ ಹೆಚ್ಚುವರಿಯಾಗಿ (ಅನುಬಂಧ -01 ರ ಪರಿಷ್ಕøತ ಪಟ್ಟಿಯಲ್ಲಿ) ಕರ್ನಾಟಕ ರಾಜ್ಯ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು, ಆಸ್ಪತ್ರೆಗಳಿಗೆ ಆಕ್ಸಿಜನ್, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವ ಸಿಬ್ಬಂದಿಗಳೊಂದಿಗೆ ಎಲ್. ಎಂ. ಒ(ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್) ಸಿಬ್ಬಂದಿ ಸೇರ್ಪಡೆಗೊಳಿಸುವುದು. ಭಾರತೀಯ ಆಹಾರ ನಿಗಮ ಸಿಬ್ಬಂದಿಯೊಂದಿಗೆ ಕರ್ನಾಟಕ ರಾಜ್ಯ ಆಹಾರ ನಿಗಮ ಸಿಬ್ಬಂದಿಯನ್ನು ಸೇರ್ಪಡೆಗೊಳಿಸುವುದು.
18 ರಿಂದ 44 ವರ್ಷ ವಯೋಮಾನದಲ್ಲಿನ ಕೋಮಾರ್ಬಿಡಿಟಿ ಹೊಂದಿರುವ ಫಲಾನುಭವಿಗಳು, ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಸಿಬ್ಬಂದಿಗಳಿಗೆ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ತೋಟಗಾರಿಕೆ ಇಲಾಖೆಯ ಸಿಬ್ಬಂದಿ, ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿ, ಇ, ಎಲ್) ಸಿಬ್ಬಂದಿ ಹಾಗೂ ಜಿಲ್ಲೆಯಲ್ಲಿ ಗುರುತಿಸಲಾದ ರಾಜ್ಯ ಕೊರೊನಾ ಮುಂಚೂಣಿ ಕಾರ್ಯಕರ್ತರ ಕೋವಿಡ್-19 ಲಸಿಕಾಕರಣ ಕಾರ್ಯವು ಸುಗಮವಾಗಿ ನಡೆಯಲು ನೋಡಲ್ ಅಧಿಕಾರಿಗಳ ನೇಮಿಸುವುದು ಸೂಕ್ತವೆಂದು ಕಂಡು ಬಂದಿರುವ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ- 2005 ರ 34ರ ಅನ್ವಯ ಈ ಕೆಳಗಿನಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ರಾಜ್ಯ ಮುಂಚೂಣಿ ಕಾರ್ಯಕರ್ತರು ಕರ್ನಾಟಕ ರಾಜ್ಯ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳಿಗೆ ರಂಗನಾಥ ಜಿಲ್ಲಾ ಅಗ್ನಿಶಾಮಕ ಅಧಿಕಾರಿ (ಮೊಬೈಲ್ ಸಂಖ್ಯೆ-9740642303), ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಸಿಬ್ಬಂದಿಗಳಿಗೆ ಪ್ರಾಣೇಶ.ಪ ಜಹಗೀರದಾರ್ ಉಪನಿರ್ದೇಶಕರು ಪಶುಪಾಲನೆ ಮತ್ತು ಪಶು ಸಂಗೋಪನೆ ಇಲಾಖೆ ವಿಜಯಪುರ (ಮೊ. ಸಂಖ್ಯೆ-6362746378) ಇವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದೆ.
ಅದರಂತೆ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ತೋಟಗಾರಿಕೆ ಇಲಾಖೆ ಸಿಬ್ಬಂದಿಗಳಿಗೆ ಬರಗಿಮಠ, ಉಪನಿರ್ದೇಶಕರು ತೋಟಗಾರಿಕೆ ಇಲಾಖೆ ವಿಜಯಪುರ ಇವರನ್ನು ನೇಮಿಸಲಾಗಿದ್ದು, (ಮೊ. ಸಂಖ್ಯೆ-9448999232), 18 ರಿಂದ 44 ವರ್ಷ ವಯೋಮಾನದಲ್ಲಿನ ಕೋಮಾರ್ಬಿಡಿಟಿ ಹೊಂದಿರುವ ಫಲಾನುಭವಿಗಳಿಗೆ ಲಸಿಕೆಗಾಗಿ ಮಹೇಂದ್ರ ಕಾಪ್ಸೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವಿಜಯಪುರ ಇವರನ್ನು (ಮೊ. ಸಂಖ್ಯೆ-9449843043) ನೇಮಿಸಲಾಗಿದೆ.
ಆಸ್ಪತ್ರೆಗಳಿಗೆ ಆಕ್ಸಿಜನ್, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವ ಸಿಬ್ಬಂದಿಗಳನ್ನು, ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ಸಿಬ್ಬಂದಿಗಳಿಗೆ ನೀಲಕಂಠ ರಾಠೋಡ್ ಔಷಧ ನಿಯಂತ್ರಕರು ವಿಜಯಪುರ ಇವರನ್ನು (ಮೊ. ಸಂಖ್ಯೆ-8217629017 ) ನೇಮಿಸಿದೆ. ಭಾರತೀಯ ಆಹಾರ ನಿಗಮ ಸಿಬ್ಬಂದಿಯೊಂದಿಗೆ ಕರ್ನಾಟಕ ರಾಜ್ಯ ಆಹಾರ ನಿಗಮ ಸಿಬ್ಬಂದಿಗಳಿಗೆ ಲಸಿಕೆ ದೊರಕಿಸಲು ಡಿ.ಎಂ ನಾಯ್ಕೋಡಿ ವ್ಯವಸ್ಥಾಪಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ವಿಜಯಪುರ ಇವರನ್ನು (ಮೊ. ಸಂಖ್ಯೆ-9008370491) ನೇಮಿಸಿದೆ.
ಈ ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ ಜಿಲ್ಲಾ ಲಸಿಕಾ ನೋಡಲ್ ಅಧಿಕಾರಿಗಳಿಗೆ ಸಲ್ಲಿಸಬೇಕು. ಲಸಿಕಾಕರಣ ಸಮಯ, ಸ್ಥಳ ಮತ್ತು ದಿನಾಂಕವನ್ನು ಜಿಲ್ಲಾ ಆರೋಗ್ಯಾಧಿಕಾರಿಗಳ ಸಮನ್ವಯೊಂದಿಗೆ ಖಾತರಿಪಡಿಸಿಕೊಂಡು ಲಸಿಕಾಕರಣಕ್ಕೆ ಸಜ್ಜಾಗಬೇಕು.
ಫಲಾನುಭವಿಗಳ ದೃಡೀಕೃತ ಪ್ರಮಾಣದೊಂದಿಗೆ ಲಸಿಕಾಕರಣವನ್ನು ಆಯೋಜಿಸುವುದು, ಲಸಿಕಾಕರಣ ಸಮಯದಲ್ಲಿ ಹೊಸದಾಗಿ ನೋಂದಾವಣಿಗೆ ಅವಕಾಶವಿರುವುದಿಲ್ಲ ಹಾಗೂ ನೌಕರರ ಕುಟುಂಬ ಸದಸ್ಯರಿಗೆ ಅವಕಾಶವಿರುವುದಿಲ್ಲ, ಕೋವಿಡ್-19 ಲಸಿಕಾಕರಣಕ್ಕೆ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ನೋಡಲ್ ಅಧಿಕಾರಿಗಳು ಒದಗಿಸಿರುವ ಪಟ್ಟಿಯಂತೆ ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು ಹಾಗೂ ಕೋವಿಡ್-19 ಸೋಂಕು ನಿಯಂತ್ರಣ ಕುರಿತು ಅಧಿಕಾರಿ ಸಿಬ್ಬಂದಿ ವರ್ಗದವರು ಪರಸ್ಪರ ಸಹಕಾರ ಸಮನ್ವಯತೆಯೊಂದಿಗೆ ಅವರಿಗೆ ವಹಿಸಿಕೊಟ್ಟ ಕಾರ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಲಸಿಕಾಕರಣಕ್ಕೆ ಎಲ್ಲ ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆಯುವ ಕುರಿತು ಕ್ರಮ ಜರುಗಿಸುವುದು. ಯಾವುದಾದರೂ ಮುಂಚೂಣಿ ಕಾರ್ಯಕರ್ತರು ಬಾಕಿ ಉಳಿದಲ್ಲಿ ಮತ್ತು ಈ ಕಚೇರಿಗೆ ದೂರು ಸ್ವೀಕೃತವಾದಲ್ಲಿ ಸಂಬಂಧಿಸಿದ ನೋಡಲ್ ಅಧಿಕಾರಿಗಳ ಮೇಲೆ ಸಾಂಕ್ರಾಮಿಕ ರೋಗ ಕಾಯ್ದೆ 1897 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರನ್ವಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಡಾ. ನಾಗರಬೆಟ್ಟ ಜಿಲ್ಲಾ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಇವರ ಮೊಬೈಲ್ ಸಂಖ್ಯೆ-9980203338 ಇವರನ್ನು ಸಂಪರ್ಕಿಸಲು ಅಧ್ಯಕ್ಷರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.