ಮುಂಗಾರು ಹಂಗಾಮು 81624 ಹೆಕ್ಟರ್ ಖುಷ್ಕಿ ಪ್ರದೇಶ,36823 ಹೆಕ್ಟರ್ ನೀರಾವರಿ ಪ್ರದೇಶ ಬಿತ್ತನೆ ಗುರಿ

ಯಾದಗಿರಿ : ಮೇ 18 : ಮುಂಗಾರು ಹಂಗಾಮಿನ ಸಿದ್ದತೆ 2024-25ನೇ ಸಾಲಿನ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಯಾದಗಿರಿ ಹಾಗೂ ಗುರುಮಠಕಲ್ ತಾಲ್ಲೂಕುಗಳಲ್ಲಿ ಇಲ್ಲಿಯವರೆಗೆ ವಾಡಿಕೆ ಅನುಸಾರ ಉತ್ತಮ ಮಳೆಯಾಗಿದೆ. ರೈತರು ಭೂಮಿ ಸಿದ್ದತೆಯಲ್ಲಿ ತೊಡಗಿರುತ್ತಾರೆ. ಮುಂದಿನ ವಾರ ಬಹುತೇಕ ರೈತರು ಮುಂಗಾರು ಹಂಗಾಮಿನ ಬಿತ್ತನೆಯಾಗುವ ಸಂಭವವಿರುತ್ತದೆ. ಮುಂಗಾರು ಹಂಗಾಮಿನಲ್ಲಿ 81624 ಹೆಕ್ಟರ್ ಖುಷ್ಕಿ ಪ್ರದೇಶದಲ್ಲಿ ಹಾಗೂ 36823 ಹೆಕ್ಟರ್ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಗುರಿ ಹಮ್ಮಿಕೊಳ್ಳಲಾಗಿದೆ ಎಂದು ಯಾದಗಿರಿ ಸಹಾಯಕ ಕೃಷಿ ನಿರ್ದೇಶಕರು ಸುರೇಶ ಅವರು ತಿಳಿಸಿದ್ದಾರೆ.

 ಒಟ್ಟಾರೆಯಾಗಿ ಯಾದಗಿರಿ ಹಾಗೂ ಗುರುಮಠಕಲ್ ತಾಲ್ಲೂಕುಗಳಲ್ಲಿ 118447 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿಯನ್ನು ಹೊಂದಲಾಗಿದೆ. ಮುಂಗಾರು ಹಂಗಾಮಿನಲ್ಲಿ ಪ್ರಮುಖ ಬೆಳೆಗಳಾದ ಹೆಸರು, ತೊಗರಿ, ಉದ್ದು ಹಾಗೂ ಭತ್ತದ ಬೆಳೆಗಳ ಒಟ್ಟಾರೆಯಾಗಿ 974 ಕ್ವಿಂಟಲ್‌ಗಳ ಬೀಜಗಳ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಈಗಾಗಲೇ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಮಾಣೀತ ಬಿತ್ತನೆ ಬೀಜದ ದಾಸ್ತಾನನ್ನು ಮಾಡಿಕೊಳ್ಳಲಾಗಿದೆ. ಅದರಂತೆ ಮುಂಗಾರು ಹಂಗಾಮಿಗೆ 14277 ಟನ್ ಯೂರಿಯಾ, 6009 ಟನ್ ಡಿ.ಎ.ಪಿ, 600 ಟನ್ ಎಂ.ಒ.ಪಿ ಹಾಗೂ 14156 ಟನ್ ಎನ್.ಪಿ.ಕೆ. ಬೇಡಿಕೆಯಿದ್ದು. ಈಗಾಗಲೇ 9395 ಟನ್ ಯೂರಿಯಾ, 2007 ಟನ್ ಡಿ.ಎ.ಪಿ, 65 ಟನ್ ಎಂ.ಒ.ಪಿ, 6467 ಟನ್ ಎನ್.ಪಿ.ಕೆ ರಸಗೊಬ್ಬರವನ್ನು ದಾಸ್ತಾನಿಕರಿಸಲಾಗಿದೆ. ಯಾದಗಿರಿ ಹಾಗೂ ಗುರುಮಠಕಲ್ ತಾಲ್ಲೂಕುಗಳಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಿರುವುದಿಲ್ಲ.
 ರೈತರು ಅಧೀಕೃತ ಮಾರಾಟಗಾರರಿಂದ ಬಿತ್ತನೆ ಬೀಜ, ಕೀಟನಾಶಕ ಹಾಗೂ ರಸಗೊಬ್ಬರವನ್ನು ಖರೀದಿಸಬೇಕು ಹಾಗೂ ಖರೀದಿ ಮಾಡಿದ ಪರಿಕರದ ರಸೀದಿಯನ್ನು ಕಡ್ಡಾಯವಾಗಿ ಪಡೆದುಕೊಂಡು ಹಂಗಾಮು ಮುಗಿಯುವವರೆಗೂ ಕೂಡಾ ಕಾಯ್ದಿರಿಸಬೇಕು. ಗ್ರಾಮಗಳಲ್ಲಿ ಅನಧಿಕೃತವಾಗಿ ಲೂಸ್ ಹತ್ತಿ ಬಿತ್ತನೆ ಬೀಜವನ್ನು ಮಾರಾಟ ಮಾಡುತ್ತಿರುವುದು ಕಂಡುಬAದಲ್ಲಿ ಕೃಷಿ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.