ಮುಂಗಾರು ಹಂಗಾಮು ಸಿದ್ದತೆ ಕುರಿತು ಪ್ರಗತಿ ಪರಿಶೀಲಿಸಿದ ಸಂಸದ ಡಾ.ಜಾಧವ

ಕಲಬುರಗಿ,ಜೂ.4- ಇದೇ 2021-22ನೇ ಸಾಲಿನ ಮುಂಗಾರು ಹಂಗಾಮಿನ ಸಿದ್ದತೆ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಂಸದ ಡಾ.ಉಮೇಶ ಜಾಧವ ಅವರು, ಜಿಲ್ಲೆಯ ರೈತರಿಗೆ ಬೀಜ, ರಸಗೊಬ್ಬರ ಸಕಾಲದಲ್ಲಿ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸೂಚಿಸಿದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯ ಸಭೆ ಸಭಾಂಗಣದಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯಲ್ಲಿ 2021-22 ನೇ ಸಾಲಿನ ಮುಂಗಾರು ಹಂಗಾಂಮಿಗೆ ಒಟ್ಟು 7.55 ಲಕ್ಷ ಹೆಕ್ಟರನಲ್ಲಿ ಪ್ರಮುಖ ಬೆಳೆಗಳಾದ ತೊಗರೆ (5.32 ಲಕ್ಷ ಹೆ), ಉದ್ದು (0.29 ಲಕ್ಷ ಹೆ), ಹೆಸರು (0.49 ಲಕ್ಷ ಹೆ), ಹತ್ತೀ (0.56 ಲಕ್ಷ ಹೆ), ಕಬ್ಬು (0.30 ಲಕ್ಷ ಹೆ) ಗುರಿ ಹೊಂದಲಾಗಿದೆ. ಈಗಾಗಲೇ ಕರ್ನಾಟಕ ರಾಜ್ಯ ಬೀಜ ನಿಗಮ ಮತ್ತು ರಾಷ್ಟ್ರೀಯ ಬೀಜ ನಿಗಮದಿಂದ ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೇ ಬೀಜಗಳ ದಾಸ್ತಾನಿಗೆ ಕ್ರಮ ಕೈಗೊಳ್ಳಲಾಗಿದೆ.
ಪ್ರಮುಖವಾಗಿ ತೊಗರಿ, ಹೆಸರು, ಉದ್ದು, ಮೆಕ್ಕೆಜೋಳ, ಸೋಯಾಬಿನ ಮತ್ತು ಇತರೆ ಬೆಳೆಗಳ ದಾಸ್ತಾನು ಪ್ರಗತಿಯಲ್ಲಿದೆ ಮತ್ತು ರೈತರಿಗೆ ಬೀಜ ವಿತರಣೆ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ಸಂಸದರಿಗೆ ಮಾಹಿತಿ ನೀಡಿದರು.
ಹೆಚ್ಚುವರಿಯಾಗಿ 13,785 ಕ್ವಿಂಟಾಲ ಬೀಜ ಬೇಡಿಕೆಗೆ ಕೇಂದ್ರ ಕಾರ್ಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.

 • ಜಿಲ್ಲೆಗೆ ರಸಗೊಬ್ಬರ ತರುವಲ್ಲಿ ಯಶಸ್ವಿ *
  ಈ ವರ್ಷದ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮುಂಗಾರು ಹಂಗಾಮಿಗೆ ಬೆಳೆವಾರು ಕ್ಷೇತ್ರ ಆಧಾರದ ಮೇಲೆ ಡಿಎಪಿ 54,300 ಮೆ.ಟ. ಯೂರಿಯಾ 34,900 ಮೆ.ಟ. ಕಾಂಪ್ಲೇಕ್ಸ 17,200 ಎಂಒಪಿ 6350 ಎಸ್‍ಎಸ್‍ಪಿ 6645 ಮೆ.ಟನ್ನ ಹೀಗೆ ಒಟ್ಟು 1,19,395 ಮೆ.ಟನ್ನು ಬೇಡಿಕೆ ಇರುತ್ತದೆ, ಕಳೆದ ಸಾಲಿನಲ್ಲಿ 81,233 ಮೆ.ಟನ್ನ ರಸಗೊಬ್ಬರ ಬಳಕೆಯಾಗಿರುತ್ತದೆ.
  ಕೇಂದ್ರ ಕಚೇರಿಯಿಂದ 73,096 ಮೆ.ಟನ್ನ ರಸಗೊಬ್ಬರ ಹಂಚಿಕೆಯಾಗಿರುತ್ತದೆ. ಸದ್ಯ ಕಲಬುರ್ಗಿ ಜಿಲ್ಲೆಯಲ್ಲಿ ಕಾಪು ದಾಸ್ತಾನು ಯೋಜನೆಯಡಿ ಡಿಎಪಿ 3142 ಮೆ.ಟ. ಹಾಗೂ 147 ಮೆ.ಟ ಯುರಿಯಾ ದಾಸ್ತಾನಿಕರಿಸಲಾಗಿರುತ್ತದೆ. ಪ್ರಸ್ತುತ ಡಿಎಪಿ 11,,281 ಮೆ.ಟ. ಯೂರಿಯಾ 8027 ಮೆ.ಟ. ಕಾಂಪ್ಲೆಕ್ಸ 9850 ಮೆ.ಟ. ಎಂಒಪಿ 2251 ಮೆ.ಟ. ಎಸ್‍ಎಸ್‍ಪಿ 1043 ಮೆ. ಟ. ಹೀಗೆ ಒಟ್ಟು 32,452 ಮೆ.ಟ. ದಾಸ್ತಾನು ಇರುತ್ತದೆ.
  ಜಿಲ್ಲೆಗೆ ಡಿಎಪಿ ನಿಗದಿತ ಅವಧಿಯಲ್ಲಿ ಅವಶ್ಯಕವಿರುವ ಡಿಎಪಿ ರಸಗೊಬ್ಬರ ಜೊತೆಯಲ್ಲಿ ಈತರೆ ರಸಗೊಬ್ಬರಗಳು ಪೂರೈಕೆಯಾಗುವಂತೆ ನೋಡಿಕೊಳ್ಳಲಾಗುವುದೆಂದು ಸಭೆಯಲ್ಲಿ ತಿಳಿಸಿದರು.
  ಸಂಸದ ಡಾ.ಉಮೇಶ ಜಿ ಜಾಧವ ಮಾತನಾಡಿ, ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಈ ಭಾಗದ ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವುದು ಮತ್ತು ರೈತರುಗಳಿಗೆ ಸೂಕ್ತ ಸಮಯದಲ್ಲಿ ಬೀಜ ಮತ್ತು ರಸಗೊಬ್ಬರ ಒದಗಿಸುವುದು ಅತಿ ಪ್ರಮುಖವಾಗಿದೆ ಎಂದರು.
  ಆದ್ಯತೆ ಮೇರೆಗೆ ಎಲ್ಲಾ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ಮತ್ತು ಯಾವುದೇ ರೀತಿಯ ಕೊರತೆಯಾಗದಂತೆ ಸೂಕ್ತಕ್ರಮ ವಹಿಸಬೇಕು.
  ಈ ಭಾಗದ ರೈತರಿಗೆ ಕೃಷಿಯೆ ಕಡೆಗೆ ಪ್ರೋತ್ಸಾಹಿಸಲು ಎಲ್ಲಾ ಅಧಿಕಾರಿಗಳಿಗೆ ಕಾರ್ಯನಿರತರಾಗಲು ಅವರು ಸೂಚಿಸಿದರು.
  ಕೋವಿಡ್ ಸಂಕಷ್ಟದ ಸಮಯದಲ್ಲಿ ಹೈದರಬಾದ ಕರ್ನಾಟಕ ಭಾಗದ ಕೃಷಿ ಮತ್ತು ತೋಟಗಾಕೆ ಉತ್ಪನ್ನಗಳ ಸಂಸ್ಕರಣೆಗೆ ಶೈತ್ಯಾಗಾರ ಘಟಕ ಮಂಜೂರಾತಿ :-
  ಕೋವಿಡ್ ಮೋದಲನೆ ಅಲೆಯಲ್ಲಿ ಜಿಲ್ಲೆಯ ಭಾಗದ ರೈತರುಗಳು ಬೆಳೆದಿರುವ ಕೃಷಿ ಮತ್ತು ತೋಟಗಾಕೆ ಉತ್ಪನ್ನಗಳ ಸಂಸ್ಕರಣೆಗೆ ಶೈತ್ಯಾಗಾರ ಘಟಕ (ಅoಟಜ Sಣoಡಿಚಿge) ಅವಶ್ಯಕತೆಯಿರುವ ಕುರಿತು ಪ್ರಸ್ಥಾವನೆ ಸಲ್ಲಿಸಲಾಗಿತ್ತು ಮತ್ತು ಜಿಲ್ಲೆಗೆ 5025 ಮೆ.ಟನ್ ಸಾಮಾರ್ಥದ ಶೈತ್ಯಾಗಾರ ಘಟಕ (ಅoಟಜ Sಣoಡಿಚಿge) ಕೊಟ್ನೂರ (ಡಿ)ನಲ್ಲಿ ಮಂಜೂರಾಗಿರುತ್ತದೆ ಎಂದರು.
  ಸಂಕಷ್ಟದಲ್ಲಿನ ರೈತರಿಗೆ ಪ್ರಧಾನಮಂತ್ರೀ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಆರ್ಥೀಕ ನೆರವು :-
  ಮುಂದುವರೆದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಒಮ್ಮೇ ಅತಿವೃಷ್ಟಿಯಾದರೆ ಮತ್ತೋಮ್ಮೆ ಅನಾವೃಷ್ಟಿಗೆ ಈಡಾಗುವ ದೇಶದ ಅನ್ನದಾತ ರೈತರನ್ನು ಈ ಅನಿಶ್ಚಿತತೆಯಿಂದ ಪಾರುಮಾಡಲು “ಪ್ರಧಾನಮಂತ್ರೀ ಕಿಸಾನ್ ಸಮ್ಮಾನ್ ನಿಧಿ ಯೋಜನೆ” ಜಾರಿಗೆ ತಂದಿದೆ.
  ಸದರಿ ಯೋಜನೆಯಡಿ ಕೃಷಿ ಭೂಮಿ ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ 3 ಸಮಾನ ಕಂತುಗಳಲ್ಲಿ ವಾರ್ಷಿ 6000/- ಆರ್ಥೀಕ ನೆರವು ಮತ್ತು ರಾಜ್ಯ ಸಕಾರದಿಂದ ಹೆಚ್ಚುವರಿಯಾಗಿ ರೂ.4,000/- ಆರ್ಥೀಕ ನೆರವು ನೀಡಲಾಗುತ್ತಿದೆ ಎಂದರು.
  ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 2.83 ಲಕ್ಷ ರೈತರು ಈ ಯೋಜನೆಯಡಿ ನೋಂದಣಿಯಾಗಿದ್ದು 2019-20 ನೇ ಸಾಲಿನಿಂದ ಇಲ್ಲಿಯವರೆಗೆ 8 ಕಂತುಗಳಲ್ಲಿ ಒಟ್ಟು 2,68,863 ರೈತರಿಗೆ ಒಟ್ಟು ರೂ. 517.38 ಕೋಟಿ (ಕೇಂದ್ರ ಸರ್ಕಾರದ ಅನುದಾನ ರೂ. 336.79 ಕೋಟಿ ಮತ್ತು ರಾಜ್ಯ ಸರ್ಕಾರದ ಅನುದಾನ ರೂ. 180.59 ಕೋಟಿ) ಆರ್ಥೀಕ ನೆರವು ನೀಡಲಾಗಿದೆ.
  ಪ್ರಧಾನ ಮಂತ್ರೀ ಫಸಲಭೀಮಾ ಯೋಜನೆಯಡಿ ರೈತರಿಗೆ ಬೆಳೆ ವಿಮೆ ಸಂದಾಯ :-
  ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 13,909 ರೈತರುಗಳು ಐoಛಿಚಿಟiseಜ ಛಿಚಿಟಚಿmiಣಥಿಯಡಿ ದೂರು ಸಲ್ಲಿಸಿದ್ದು ಈಗಾಗಲೇ ಒಟ್ಟು 6552 ರೈತರಿಗೆ ರೂ 7.17 ಕೋಟಿ ಪರಿಹಾರ ಒದಗಿಸಿರುವುದಾಗಿ ಮತ್ತು ವಿವಿಧ ಹಂತಗಳಲ್ಲಿ ವಿಮೆ ಪರಿಹಾರ ಪಾವತಿ ಬಾಕಿ ಇರುವ ರೈತರ ಅರ್ಜಿಗಳನ್ನು ಪರಿಶೀಲಿಸಿ, ಆದ್ಯತ ಮೆರೆಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುವುದೆಂದು ಜಂಟಿ ನಿರ್ದೇಶಕರು ಸೂಚಿಸಿದರು.
  ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಬೇಡಿಕೆ ಮತ್ತು ಬೆಳೆ ನಿಗದಿ ಪಡಿಸುವ ನಿಟ್ಟಿನಲ್ಲಿ ರೈತರಗಳು ಬೆಳೆದಿರುವ ಬೆಳೆಗಳನ್ನು ಮೆಟ್ರೋಸಿಟಿಗಳಿಗೆ ಸಾಗಾಣಿಕೆಗೆ ಹವಾನಿಯಂತ್ರೀತ ಕಿಸಾನ್ ರೈಲು ಒದಗಿಸಲು ಪ್ರಸ್ಥಾವನೆ ಸಲ್ಲಿಸುವುದಾಗಿ ಡಾ.ಜಾಧವ ತಿಳಿಸಿದರು.
  ಸಭೆಯಲ್ಲಿ ತೊಗರಿ ಮಂಡಳಿ ಅಧ್ಯಕ್ಷರಾದ ಬಸವರಾಜ ಇಂಗಿನ್, ರಾಜ್ಯ ತೊಗರಿ ಬೆಲೆಗಾರ ಸಂಘದ ಅಧ್ಯಕ್ಷರು, ವಿಶ್ವನಾಥ ಪಾಟೀಲ, ಹೆಬ್ಬಾಳ ಮಾಜಿ ಶಾಸಕರು ಚಿತ್ತಾಪುರ, ಜಂಟಿ ಕೃಷಿ ನಿರ್ದೇಶಕರಾದ ಡಾ.ರತೇಂದ್ರನಾಥ ಸೂಗೂರ, ಉಪ ಕೃಷಿ ನಿರ್ದೇಶಕರಾದÀ ಅನುಸೂಯಾ ಹೂಗಾರ, ಉಪ ತೋಟಗಾರಿಕೆ ನಿರ್ದೇಶಕರಾದ ಪ್ರಭುರಾಜ ಹಿರೆಮಠ, ಚಂದ್ರಕಾಂತ ಮಸಳಿ, ಸಹಾಯಕ ಕೃಷಿ ನಿರ್ದೇಶಕರು (ಜಾರಿ ದಳ)ಇಲಾಖೆ ತಾಂತ್ರೀಕ ಅಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.