ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ

ಅಫಜಲಪುರ:ಜೂ.6: 2024-25 ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜವನ್ನು ರೈತರಿಗೆ ಸಹಾಯಧನ ರೂಪದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದು ಕೃಷಿ ಅಧಿಕಾರಿ ಆನಂದ ಅವರಾದ ತಿಳಿಸಿದ್ದಾರೆ.

ಉದ್ದು, ಹೆಸರು, ತೊಗರಿ, ಸೂರ್ಯಕಾಂತಿ, ಮುಂತಾದ ಬಿತ್ತನೆ ಬೀಜಗಳನ್ನು ಪಡೆಯಲು ಕಡ್ಡಾಯವಾಗಿ ಎಫ್.ಐ.ಡಿ ನಂಬರ್ ಮೂಲಕ ಬೀಜ ಖರೀದಿಗೆ ಅವಕಾಶವಿದೆ. ಒಂದು ವೇಳೆ ಎಫ್.ಐ.ಡಿ ಆಗದೆ ಇದ್ದ ಸಂದರ್ಭದಲ್ಲಿ ಆಧಾರ್ ಕಾರ್ಡ್, ಪಹಣಿ ಹಾಗೂ ಬ್ಯಾಂಕ್ ಪಾಸ್ ಬುಕ್ ದಾಖಲೆಗಳೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಎಫ್.ಐ.ಡಿ ಮಾಡಿಸಿದ ನಂತರ ಬೀಜ ಖರೀದಿಗೆ ಅವಕಾಶ ನೀಡಲಾಗುವುದು. ಹಾಗೂ ಸೂಕ್ತ ತೇವಾಂಶ ಮತ್ತು ಹದವಾದ ಮಳೆಯನ್ನು ಅನುಸರಿಸಿ ಬಿತ್ತನೆ ಬೀಜ ಬಿತ್ತಲು ರೈತರು ಮುಂದಾಗಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲು ಕೋರಿದ್ದಾರೆ.