ಮುಂಗಾರು ಮಳೆ ಆಗಮನ ರೈತರ ಮೊಗದಲ್ಲಿ ಮಂದಹಾಸ

ದೇವದುರ್ಗ.ಜೂ.೦೫-ರಾಜ್ಯ ಹಾಗೂ ದೇಶದಲ್ಲಿ ಕೊರೋನಾ ಮಹಾಮಾರಿ ೨ ಅಲೆ ಅಪ್ಪಳಿಸಿದ್ದು ಇಡೀ ರಾಜ್ಯವೇ ನಲಿಗಿ ಹೋಗಿದ್ದು ಅವಧಿಗೆ ಮುನ್ನ ಮುಂಗಾರು ಮಳೆ ಆಗಮನ ಹಿನ್ನಲೆಯಲ್ಲಿ ತಾಲೂಕಿನ ರೈತ ವರ್ಗದಲ್ಲಿ ಮಂದಹಾಸ ಮೂಡಿದೆ.
ಕಳೆದ ಕೆಲವು ವರ್ಷಗಳಿಂದ ಮುಂಗಾರು ಮಳೆ ಜೂನ್ ಕೊನೆವಾರ ಹಾಗೂ ಜುಲೈನಲ್ಲಿ ತಾಲೂಕಿನಲ್ಲಿ ಪ್ರವೇಶ ಪಡೆದಿತ್ತು
ಆದರೆ ಈ ಬಾರಿ ಅವರಿಗೂ ಮುಂಚೆ ಜೂನ್ ಮೊದಲನೇ ವಾರದಲ್ಲಿ, ಮುಂಗಾರು ವರ್ಷಧಾರೆ ಧರೆಗಿಳಿದು ಬಂದ ಹಿನ್ನೆಲೆಯಲ್ಲಿ ಅಲ್ಲದೆ ಈ ಬಾರಿ ಮುಂಗಾರು ಬೆಳೆಯಾದ ಹೆಸರು,ಸೂರ್ಯಕಾಂತಿ, ಸಜ್ಜೆ, ಮೆಕ್ಕೆಜೋಳ, ಕಡಲೆ, ಶೇಂಗಾ, ಕೆಲವು ಮುಂತಾದ ಮುಂಗಾರು ಬೆಳೆಗಳು. ಬಿತ್ತಿ, ಬೆಳೆಯಲು ತಾಲೂಕಿನ ರೈತಾಪಿ ವರ್ಗಕ್ಕೆ ಶುಕ್ರವಾರ ತಡರಾತ್ರಿ ಸುರಿದ ಧಾರಾಕಾರ ಮಳೆ ರೈತರಿಗೆ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.
ಕರೋನಾ ಮಹಾಮಾರಿ ೨ ಅಲೆ ಅಪ್ಪಳಿಸಿದ್ದು, ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಂದೂವರೆ ತಿಂಗಳಿನಿಂದ ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದು ಇದೇ ೨ ರಿಂದ ರೈತ ಸಂಪರ್ಕ ಕೇಂದ್ರ ಖಾಸಗಿ ಗೊಬ್ಬರ ಕ್ರಿಮಿನಾಶಕ ಅಂಗಡಿ ಮಂಗಾಟಗಳು ಬೆಳಗ್ಗೆ೬ ರಿಂದ ೧೦ ಗಂಟೆವರೆಗೆ ರೈತರ ಕೃಷಿಗೆ ಸಂಬಂಧಿಸಿದಂತೆ ಯಾವುದೇ ಅಡೆತಡೆಯಿಲ್ಲದೆ ಬೀಜ ಗೊಬ್ಬರ ಸಬ್ಸಿಡಿ ದರದಲ್ಲಿ ಪಡೆಯಲು ರೈತರಿಗೆ ಯಾವುದೇ ಕೊರತೆಯಾಗದಂತೆ ಕೃಷಿ ಇಲಾಖೆ. ಮುಂಜಾಗ್ರತವಾಗಿ ಅಗತ್ಯ ಕ್ರಮ ಕೈಗೊಂಡಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮ ಆಗಿ ರೈತರು ಸಮೃದ್ಧ ಬೆಳೆ ಬೆಳೆದು ರೈತರ ಬದುಕು ಹಸನಾಗಿ ಕರೋನಾ ದಿಂದ ಕೆಲವು ಎರಡು ವರ್ಷಗಳಿಂದ ರಾಜ್ಯ ದೇಶ ತತ್ತರಿಸಿದ ಹಿನ್ನಲೆಯಲ್ಲಿ ಈ ಬಾರಿ ಉತ್ತಮ ಮಳೆ ಬೆಳೆಯಾಗಿ ಕೃಷಿ ಕೈಗಾರಿಕೆ ಆರ್ಥಿಕ ಶೈಕ್ಷಣಿಕ ಸೇರಿ ಮುಂತಾದ ಕ್ಷೇತ್ರಗಳಲ್ಲಿ ಕುಸಿತ ಕಂಡ ರಾಜ್ಯಕ್ಕೆ ನವಚೇತನ ನೀಡಲಿ ಎಂದು ತಾಲೂಕಿನ ರೈತರ ಒತ್ತಾಸೆಯಾಗಿದೆ.
ಫೋಟೋ. ಡಿವಿಡಿ೧