ಮುಂಗಾರು ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆ ನಿರ್ವಹಣೆ

ಕಲಬುರಗಿ:ಅ.1:ಜಿಲ್ಲೆಯ ಪ್ರಮುಖ ಬೆಳೆಗಳಾದ ತೊಗರಿ, ಹತ್ತಿ, ಸೂರ್ಯಕಾಂತಿ, ಕಬ್ಬು, ಉದ್ದು, ಹೆಸರು ಮತ್ತು ಸೋಯಾಬಿನ್ ಬೆಳೆಗಳಲ್ಲಿ ದಿನಾಂಕ: 18.07.2023 ರಿಂದ 29.07.2023 ರ ಅವದಿಯಲ್ಲಿ 160 ಮೀ.ಮೀಟರ್‍ಗಿಂತ ಅಧಿಕ ಮಳೆಯಾಗಿದ್ದು, ನಿಧಾನಗತಿ ಮಳೆ ವಿವಿಧ ಬೆಳೆಗಳಲ್ಲಿ ಸಾರಜನಕ, ರಂಜಕ, ಕಬ್ಬಿಣ ಮತ್ತು ಜಿಂಕ್ ಪೋಷಕಾಂಶಗಳ ಕೊರತೆ ಲಕ್ಷಣಗಳು ಎಲೆಗಳಲ್ಲಿ ಕಂಡು ಬಂದಿದೆ. ಹತ್ತಿಯಲ್ಲಿ ಕೆಂಪು ಎಲೆ ರೋಗ ಆರಂಭವಾಗಿದ್ದು, ಈ ಪೋಷಕಾಂಶಗಳ ಕೊರತೆ ನಿರ್ವಹಣೆಗೆ ಮ್ಯಾಗ್ನಿಸಿಂ ಸಲ್ಪೇಟ್ 5 ಗ್ರಾ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಕಬ್ಬು ಬೆಳೆಯಲ್ಲಿ ಎಲೆಗಳೆಲ್ಲಿ ಇಟ್ಟಂಗಿ ಕಂದು ಬಣ್ಣ ಕಂಡು ಬಂದಿದ್ದು, ಹೇನಿನ ಭಾದೆ ಹತೋಟಿಗೆ ಎಸಿಪೇಟ್ 1 ಗ್ರಾ. ಹಾಗೂ ನೀರಿನಲ್ಲಿ ಕರಗುವ 19:19:19 ಎನ್.ಪಿ.ಕೆ. 5 ಗ್ರಾ. ಪ್ರತಿ ಲೀಟ್‍ರ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಬೇರುಗಳ ಉತ್ತಮ ರಚನೆಗೆ ಪಾಸ್ಪೇಟ್ ಅಂಶಯುಳ್ಳ ಗೊಬ್ಬರ ಡಿ.ಎ.ಪಿ ಅಥವಾ ಸುಪರ್ ಪಾಸ್‍ಪೇಟ್ 50 ಕೆಜಿ ಪ್ರತಿ ಎಕರೆಗೆ ನೀಡಬೇಕು. ಸೋಯಾಬಿನ್ ಮತ್ತು ಹೆಸರು ಬೆಳೆಯಲ್ಲಿ ತಿಳಿ ಹಳದಿ ಎಲೆಗಳು ಕಂಡು ಬಂದಿದ್ದು, ಸಾರಜನಕದ ಕೊರತೆ ನಿರ್ವಹಣೆಗೆ ನೀರಿನಲ್ಲಿ ಕರಗುವ 19:19:19 ಎನ್.ಪಿ.ಕೆ. 5 ಗ್ರಾ. ಪ್ರತಿ ಲೀಟ್‍ರ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಉದ್ದು ಬೆಳೆಯಲ್ಲಿ ಚಿಬ್ಬು ರೋಗ ಕಂಡು ಬಂದಿದ್ದು, ಇದರ ಹತೋಟಿಗೆ ಹೆಕ್ಸಾಕೊನೋಜೊಲ್ 1 ಮಿ. ಪ್ರತಿ ಲೀಟರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಸೂರ್ಯಕಾಂತಿ ಬಿತ್ತನೆ ಮಾಡುವ ರೈತರು ಇಮಿಡಾ ಕ್ಲೋಪಿಡ್ 5 ಮಿ.ಲೀಟರ್ ಪ್ರತಿ ಕೆಜಿ ಬೀಜಕ್ಕೆ ಬೀಜೋಪಚರಿಸಿ ಬಿತ್ತನೆ ಮಾಡೆಬೇಕು. ತೊಗರಿ ಬಿತ್ತನೆ ಮಾಡಿದ ರೈತರು 20 ದಿನದೊಳಗೆ ಜಿಂಕ್ ಸಲ್ಪೇಟ್ ಗೊಬ್ಬರವನ್ನು 5 ಕೀ.ಗ್ರಾ ಪ್ರತಿ ಎಕರೆಗೆ ನೀಡಬೇಕು. ಸೌತೆಕಾಯಿ, ಹಾಗಲಕಾಯಿ ಡೊಂಕು ಕಾಯಿ ನಿರ್ವಹಣೆಗೆ ಬೋರಾನ್ 1 ಗ್ರಾ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಗರದ ಆಳಂದ ರಸ್ತೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ ತೋಟಗಾರಿಕೆ ತಜ್ಞರಾದ ಡಾ. ವಾಸುದೇವ ನಾಯ್ಕ್, ಸಸ್ಯರೋಗ ತಜ್ಞರಾದ ಡಾ. ಜಹೀರ್ ಅಹೆಮದ್, ಬೇಸಾಯ ತಜ್ಞರಾದ ಡಾ. ಯುಸುಫ್‍ಅಲಿ ನಿಂಬರಗಿ, ಮಣ್ಣು ತಜ್ಞರಾದ ಡಾ. ಶ್ರೀನಿವಾಸ ಬಿ.ವಿ ರವರಿಂದ ಮಾಹಿತಿ ಪಡೆಯಬಹುದು.