
ಕಲಬುರಗಿ,ಮೇ.25:ವಲಯ ಕೃಷಿ ಸಂಶೋಧನಾ ಕೇಂದ್ರ ಹಾಗೂ ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮುಂಗಾರು ಬೀಜ ದಿನೋತ್ಸವದಲ್ಲಿ ವಿವಿಧ ಗ್ರಾಮಗಳಿಂದ ಸುಮಾರು 85 ಜನ ರೈತರು ಭಾಗವಹಿಸಿದ್ದರು.
ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರಿಗೆ ಮುಂಗಾರು ಹಂಗಾಮಿನ ಸಿದ್ಧತೆ, ಅಲ್ಲದೇ ತೊಗರಿ ಬೀಜೋತ್ಪಾದನೆ ಬಗ್ಗೆ, ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ, ಬೀಜೋಪಚಾರದ ಮಾಹಿತಿಯನ್ನು ವಿವಿರವಾಗಿ ತಿಳಿಸಿಕೊಡಲಾಯಿತು. ಹಾಗೂ ಬೆಳೆಗಳಿಗೆ ತಗಲುತ್ತಿರುವ ರೋಗಗಳ ನಿಯಂತ್ರಣ ಮತ್ತು ಕೀಟಗಳ ನಿರ್ವಹಣೆ ಕುರಿತು ಸಂಬಂಧಿಸಿದ ವಿಜ್ಞಾನಿಗಳಿಂದ ಮಾಹಿತಿ ಕೊಡಲಾಯಿತು. ನೂತನ ತಳಿಗಳ ಬಳಕೆ, ತಾಂತ್ರಿಕ ಸಾಮಗ್ರಿಗಳ ಬಗ್ಗೆ, ಪಲ್ಸ್ ಮ್ಯಾಜಿಕ್ & ಚಿಕ್‍ಪಿ ಮ್ಯಾಜಿಕ ಬಳಸುವ ವಿಧಾನವನ್ನು ತಿಳಿಸಿಕೊಟ್ಟರು. ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ಇಲಾಖೆಯಲ್ಲಿ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಹಾಗೂ “ಬೆಳೆ ದರ್ಶಕ” ಮೊಬೈಲ ಆಪ್ ಬಳಕೆ ಬಗ್ಗೆ ವಿವಿರವಾದ ಮಾಹಿತಿಯನ್ನು ನೀಡಿದರು.
ಡಾ. ಎಸ್. ಕೆ. ಜಯಲಕ್ಷ್ಮಿ, ಪ್ರಾಧ್ಯಾಪಕರು, ಕೃಷಿ ಮಹಾವಿದ್ಯಾಲಯ, ಕಲಬುರಗಿ ಇವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಗೌರವಾನ್ವಿತ ಅತಿಥಿಗಳಾಗಿ ಶ್ರೀ ಮೊಹಮದ್ ಶಫಿಯುದದಿನ್, ಸಹಾಯಕ ನಿದೇಶಕರು, ಕೆ.ಎಸ್.ಎಸ್.ಓ.ಸಿ.ಎ., ಇವರು ಭಾಗವಹಿಸಿದ್ದರು. ಕಲಬುರಗಿ, ಡಾ. ಬಿ.ಎಂ. ದೊಡಮನಿ, ಸಹ ಸಂಶೋಧನಾ ನಿರ್ದೇಶಕರು, ವಲಯ ಕೃಷಿ ಸಂಶೋಧನಾ ಕೇಂದ್ರ, ಕಲಬುರಗಿ ಇವರು ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಕೇಂದ್ರದ ವಿಜ್ಞಾನಿಗಳಾದ ಡಾ. ರಾಚಪ್ಪ ವಿ. ಹಾವೇರಿ, ಪ್ರಧಾನ ವಿಜ್ಞಾನಿ (ಕೀಟಶಾಸ್ತ್ರ), ಡಾ. ಬಿ. ಎಸ್. ರೆಡ್ಡಿ, ಪ್ರಾಧ್ಯಾಪಕರು (ಕೃಷಿ ಅರ್ಥಶಾಸ್ತ್ರ) & ಹಿರಿಯ ಕ್ಷೇತ್ರ ಅಧೀಕ್ಷಕರು, ಡಾ. ಮುನಿಸ್ವಾಮಿ ಎಸ್., ಪ್ರಧಾನ ವಿಜ್ಞಾನಿ(ಜಿ.ಪಿ.ಬಿ.), ಡಾ. ಲಕ್ಷುಮಣ, ವಿಜ್ಞಾನಿ(ಜಿ.ಪಿ.ಬಿ.), ಡಾ. ಆನಂದ ಪೋಲಿಸ ಪಾಟೀಲ, ವಿಜ್ಞಾನಿ (ಬೇಸಾಯಶಾಸ್ತ್ರ) ಇವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರಿಗೆ ಮಾಹಿತಿಯನ್ನು ಒದಗಿಸಿದರು. ಅನೇಕ ಪ್ರಗತಿ ಪರ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸುವ ಜೊತೆಗೆ ತಮ್ಮ ಅನುಭವವನ್ನು ಹಂಚಿಕೊಂಡರು.