ಮುಂಗಾರು ಬೀಜ ದಿನೋತ್ಸವ: ಸುಧಾರಿತ ಬೇಸಾಯ ಕ್ರಮ, ಬೀಜೋಪಚಾರದ ಕುರಿತು ಮಾಹಿತಿ

ಕಲಬುರಗಿ:ಮೇ.25:ವಲಯ ಕೃಷಿ ಸಂಶೋಧನಾ ಕೇಂದ್ರ, ಐಸಿಎಆರ್. ಕೃಷಿ ವಿಜ್ಞಾನ ಕೇಂದ್ರ ಮತ್ತು ರದ್ದೆವಾಡಗಿ ಕೃಷಿ ಸಂಶೋಧನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮುಂಗಾರು ಬೀಜ ದಿನೋತ್ಸವದಲ್ಲಿ ವಿವಿಧ ಗ್ರಾಮಗಳಿಂದ ಸುಮಾರು 150 ಜನ ರೈತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರಿಗೆ ಮುಂಗಾರು ಹಂಗಾಮಿನ ಸಿದ್ಧತೆ, ತಳಿಗಳ ಮತ್ತು ತಾಂತ್ರಿಕತೆಗಳ ಬಗ್ಗೆ ವಿವಿರವಾಗಿ ಮಾಹಿತಿ ನೀಡಲಾಯಿತು. ಅಲ್ಲದೇ ತೊಗರಿ ಬೀಜೋತ್ಪಾದನೆ, ಸುಧಾರಿತ ಬೇಸಾಯ ಕ್ರಮಗಳ ಹಾಗೂ ಬೀಜೋಪಚಾರದ ಮಾಹಿತಿಯನ್ನು ವಿವಿರವಾಗಿ ತಿಳಿಸಿಕೊಡಲಾಯಿತು
ಇದಲ್ಲದೆ ಬೆಳೆಗಳಿಗೆ ತಗಲುತ್ತಿರುವ ರೋಗಗಳ ನಿಯಂತ್ರಣ ಮತ್ತು ಕೀಟಗಳ ನಿರ್ವಹಣೆ ಕುರಿತು ಸಂಬಂಧಿಸಿದ ವಿಜ್ಞಾನಿಗಳಿಂದ ಮಾಹಿತಿ ನೀಡಲಾಯಿತು. ನೂತನ ತಳಿಗಳ ಬಳಕೆ, ತಾಂತ್ರಿಕ ಸಮಸ್ಯೆಗಳ ಬಗ್ಗೆ, ಪಲ್ಸ್ ಮ್ಯಾಜಿಕ್ ಮತ್ತು ಚಿ???ಪಿ ಮ್ಯಾಜಿಕ ಮತ್ತು ಜೈವಿಕ ಗೊಬ್ಬರಗಳ ಬಳಸುವ ವಿಧಾನವನ್ನು ತಿಳಿಸಿಕೊಡಲಾಯಿತು. ಕೃಷಿ ಉಪ ನಿರ್ದೇಶಕರು ಇಲಾಖೆಯಲ್ಲಿ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ವಿವಿರವಾದ ಮಾಹಿತಿಯನ್ನು ನೀಡಿದರು.
ರಾಜ್ಯ ಮಟ್ಟದಲ್ಲಿ ಕಡಲೆ ಹಿಂಗಾರು ಮಳೆಯಾಶ್ರಿತ ಪುರುಷರ ವಿಭಾಗದ ಬೆಳೆ ಸ್ಪರ್ಧೆಯಲ್ಲಿ ಸೇಡಂ ತಾಲ್ಲೂಕಿನ ಊಡಗಿ ಗ್ರಾಮದ ಸೋಮಣ್ಣ ತಂದೆ ಮಲ್ಕಪ್ಪ ಬೋಮನಳ್ಳಿ ಅವರು ರಾಜ್ಯ ಮಟ್ಟದ ಕೃಷಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಅವರಿಗೆ ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನವನ್ನು ಮಾಡಿ ಗೌರವಿಸಲಾಯಿತು.
ಕೃಷಿ ಉಪ ನಿರ್ದೇಶಕಿ ಶ್ರೀಮತಿ ಅನುಸೂಯಾ ಹೂಗಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ವಿಜ್ಞಾನಿ ಡಾ.ವಾಸುದೇವ್ ನಾಯಕ್ ಅವರು ಕೃಷಿ ಸಂಬಂಧಿಸಿದ ಮಾಹಿತಿಯನ್ನು ಒದಗಿಸಿದರು. ಅಧ್ಯಕ್ಷತೆಯನ್ನು ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಬಿ.ಎಂ. ದೊಡ್ಡಮನಿ ಅವರು ವಹಿಸಿದ್ದರು.
ಕೇಂದ್ರದ ವಿಜ್ಞಾನಿಡಾ. ಬಿ.ಎಸ್. ರೆಡ್ಡಿ, ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಮುನಿಸ್ವಾಮಿ ಎಸ್., ಡಾ. ಬಸವರಾಜ್ ಕೆ., ಡಾ. ಶೋಭಾರಾಣಿ, ಡಾ. ಮಲ್ಲಿಕಾರ್ಜುನ್ ಕೆಂಗನಾರ್ಳ, ಡಾ. ಪಂಪನಗೌಡ, ಡಾ. ಲಕ್ಷ್ಮಣ್, ಡಾ. ಆನಂದ್ ಪೋಲಿಸ್ ಪಾಟೀಲ್ ಅವರು ರೈತರಿಗೆ ಮಾಹಿತಿಯನ್ನು ನೀಡಿದರು. ರೈತರು ಸಹ ತಮ್ಮ ಅನುಭವಗಳನ್ನು ಹಂಚಿಕೊಂಡರು.