ಮುಂಗಾರು ಬಿತ್ತನೆ ಸಿದ್ಧತೆ ಪೂರ್ವ ಬಿರುಸಿನ ಮಾಗಿ ಉಳಿಮೆ

ಆಳಂದ:ಮೇ.25: ಲೋಕಸಭಾ ಚುನಾವಣೆಯಲ್ಲಿ ಮಗ್ನವಾಗಿದ್ದ ರೈತರು ಈಗ ಚುನಾವಣೆಯ ಮುಗಿದ ಬೆನ್ನೆಲೆ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರದಲ್ಲೇ ಮತ್ತೆ ಮುಂಗಾರು ಬಿತ್ತನೆ ಸಿದ್ಧತೆಗಾಗಿ ಮಾಗಿ ಉಳಿಮೆ ಕೈಗೊಳ್ಳುತ್ತಾ ಬಿತ್ತನೆ ಸಿದ್ಧತೆಗಾಗಿ ಭೂಮಿ ಸಜ್ಜುಗೊಳಿಸತೊಡಗಿದ್ದಾರೆ.
ದಿನದ ಹೊತ್ತೆರುವ ಮುನ್ನ ಹಾಗೂ ಇಳಿ ಹೊತ್ತಿನ ನಡುವೆ ಕುಂಟಿಯನ್ನು (ಗಳ್ಯಾ), ಹೊಡೆದು ಭೂಮಿಯ ಸಾಗಮಾಡುವಲ್ಲಿ ರೈತರು ಮುಂದಾಗಿದ್ದಾರೆ.
ಮಾಗಿ ಉಳುಮೆ ಕೈಗೊಂಡರೆ ಮಾತ್ರ ಬಿತ್ತನೆಗೆ ಭೂಮಿ ಹದವಾಗಿ ಪರಿಣಮಿಸುವ ಹಿನ್ನೆಲೆಯಲ್ಲಿ ಮತ್ತು ಇದರಿಂದ ಬೆಳೆಗೆ ವೈಜ್ಞಾನಿಕವಾಗಿ ಲಾಭ ಆಗುವುದರಿಂದ ರೈತರು ಪ್ರತಿ ವರ್ಷ ಭೂಮಿಯನ್ನು ಕನಿಷ್ಟ ಎರಡ್ಮೂರು ಬಾರಿಯಾದರು ಉಳಿಮೆಯನ್ನು ಮಾಡಿ ಸ್ವಚ್ಛಗೊಳಿಸಿದಂತೆ ಬಹುತೇಕ ತಾಲೂಕಿನ ಎಲ್ಲ ರೈತಾಪಿಗಳು ಈ ಕಾರ್ಯವನ್ನು ಭರದಿಂದ ಕೈಗೊಳ್ಳತೊಡಗಿದ್ದಾರೆ.
ಎತ್ತುಗಳ ಅವಲಂಬಿತ ಕೃಷಿ ವರ್ಷ ಕಳೆದಂತೆ ಕ್ಷೀಣಿಸುತ್ತಿದ್ದರಿಂದ ಈಗ ಟ್ಯ್ರಾಕ್ಟರ್‍ಗಳ ಮೊರೆಹೋಗಿ ಭೂಮಿಯ ಸಾಗಮಾಡುತ್ತಿರುವುದು ಕೂಡ ಹೆಚ್ಚುತೊಡಗಿದೆ.
ಬರ ಆವರಿಸಿದ್ದರಿಂದ ಅಷ್ಟಕ್ಕಷ್ಟೇ ಬೆಳೆ ಕೈಗೆ ಬಂದಿದೆ ಆದರೆ ಸೊಯಾಭಿನ್ ಬೆಳೆಗೆಎ ಬೆಲೆ ಬರಲಿಲ,್ಲ ಖಾಸಗಿ ಮಾರುಕಟ್ಟೆಯಲ್ಲಿ ಆರಂಭದಲ್ಲಿ ತೊಗರಿಗೆ ಬೆಲೆ ಇಲ್ಲದ ಹೊತ್ತಿನಲ್ಲಿ ಅನೇಕರು ಮಾರಿಕೊಂಡಿದ್ದಾರೆ. ಇನ್ನೂ ಕೆಲವರು ದರ ಬಂದಾಗ ಮಾರಿದರಾಯಿತು ಎಂದಿಟ್ಟುಕೊಂಡವರಿಗೆ ಸದ್ಯ ಕೊಂಚ ಕೈಗೆಟುಕುವ ದರದಲ್ಲಿ ತೊಡಗರಿ ಮಾರಾಟ ನಡೆಸಿದ್ದಾರೆ.
ಕಳೆದ ಮುಂಗಾರು ಹಂಗಾಮಿಗೆ ಹಸಿರು ಬರ ಆವರಿಸಿದ್ದರಿಂದಾಗಿ ನಿರೀಕ್ಷಿತವಾಗಿ ಬೆಳೆಗಳು ಕೈಗೆಬಾರದೆ ಸಾಕಷ್ಟ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದ ರೈತ ಸಮುದಾಯಕ್ಕೆ ಬ್ಯಾಂಕ್ ಮತ್ತು ಸಾಹೂಕಾರಿ ಸಾಲದ ಹೊರೆ ಸಾಮಾನ್ಯವಾಗಿದೆ. ರೈತರಿಗೆ ಕೃಷಿ ಬಿಟ್ಟರೆ ಬೇರೆನು ಕೆಲಸ ಕಷ್ಟವಾಗಿದೆ. ಆದರೆ ಅನ್ನದ ಉತ್ಪಾದನೆಯ ಜವಾಬ್ದಾರಿಯ ನಮ್ಮ ಮೇಲಿದೆ ಎನ್ನುತ್ತಾರೆ ರೈತರು.
ಏಪ್ರಿಲ್- ಮೇ ಈ ಎರಡು ತಿಂಗಳ ಕಳೆಯುವುದೇ ಹೇಗಪ್ಪ ಎನ್ನುತ್ತಲೇ ಇನ್ನೇನು ಜೂನ್ ಸಮೀಪಿಸುತ್ತಿದ್ದ, ಮಳೆ ಬಂದರೆ ಬಿತ್ತನೆಗೆ ಬೀಜ, ಗೊಬ್ಬರ ಖರೀದಿಗೆ ಮುಂದಾಗತೊಡಗಿದ್ದಾರೆ. ಕೃಷಿ ಸಂಕಷ್ಟಮಯ ಎದುರಾದ ಹಿನ್ನೆಲೆಯಲ್ಲಿ ತಮ್ಮಲ್ಲಿನ ಎತ್ತುಗಳು ಸಾಕಲಾಗದೆ ಹಿಂದಿನ ಬರಲಗಾದಿಂದಾಗಿ ಅನೆಕರು ಮಾರಿಕೊಂಡು ಯಂತ್ರಗಳ ಮೇಲೆ ಕೃಷಿಗೆ ಅವಲಂಬಿತರಾಗತೊಡಗಿದ್ದು, ಈ ಕಾರಣಕ್ಕಾಗಿ ಮಾಗಿ ಉಳುಮೆಯನ್ನು ರೈತರು ಟ್ಯ್ರಾಕ್ಟರ್ ಮೂಲಕವೇ ಹೆಚ್ಚು ಕೈಗೊಳ್ಳುತ್ತಿದ್ದಾರೆ.

ಬಿತ್ತನೆ ಮಾಡಲು ಮುಂದಾದರೆ ಬೀಜ, ಗೊಬ್ಬರ ಖರೀದಿಗೂ ಹಣವಿಲ್ಲ. ಸಕಾಲಕ್ಕೆ ಬ್ಯಾಂಕುಗಳು ಸಹ ಸಾಲ ನೀಡುವುದಿಲ್ಲ. ಸಾಹುಕಾರಿ ಸಾಲಗಳು ಈ ಬಾರಿ ದೊರೆಯದ ಪರಿಸ್ಥಿತಿ ಉಂಟಾಗಿದ್ದು, ರೈತರಿಗೆ ಬರದ ಹಸಿವಿನ ನಡುವೆ ಮುಂಗಾರು ಹಂಗಾಮಿನ ಸಿದ್ಧತೆಗೆ ಮತ್ತೊಮ್ಮೆ ಹೋರಾಟ ಮಾಡುವ ಅನಿವಾರ್ಯತೆ ತಂದೊಡ್ಡಿದೆ.

ಮಾಗಿ ಉಳಿಮೆ ಮದ್ದು:ಬೆಳೆ ಕಟಾವು ಆದ ಮೇಲೆ ಮಾಗಿ ಉಳಿಮೆ ನಿರಂತರವಾಗಿ ಮಾಡಬೇಕು. ಮೂರು ರೀತಿಯಲ್ಲಿ ಲಾಭವಾಗುತ್ತದೆ. ಹೊಲದಲ್ಲಿ ಬಿದ್ದ ಹುಲ್ಲು, ಕಸ ಕಣಿಕೆ ಮಣ್ಣಿನಲ್ಲಿ ಸಿಕ್ಕು ಮಳೆ ಬಂದಾಗ ಕೊಳೆತು ಗೊಬ್ಬರವಾಗಿ ಪರಿಣಮಿಸುತ್ತದೆ. ನೆಟೆ ರೋಗ ನಿರ್ವಹಣೆ, ಉಳುಮೆಯಿಂದ ಭೂಮಿ ನೀರು ಇಂಗಿಸಿಕೊಳ್ಳುತ್ತದೆ. ಅಲ್ಲದೆ, ರೋಗಾಣು ಜೀವಿಗಳು ಬಿಸಿಲಿಗೆ ಬಿದ್ದಾಗ ಪಕ್ಷಿಗಳು ತಿಂದ್ದುಹಾಕುತ್ತಿವೆ. ಅಲ್ಲದೆ, ಕೆಲವೊಂದು ಸತ್ತು ಹೋಗುವುದರಿಂದ ರೋಗವು ನಿರ್ವಹಣೆಯಾಗಿ ಬೆಳೆಗೆ ಅನುಕೂಲವಾಗುತ್ತದೆ.

ವಿಲಾಸ ಹರಸೂರ ರೈತ ಸಂಪರ್ಕ ಅಧಿಕಾರಿಗಳು ನರೋಣಾ

ಸಕಾಲಕ್ಕೆ ಬೀಜ ಒದಗಿಸಿ: ಮುಂಗಾರು ಹಂಗಾಮಿಗೆ ಕೃಷಿ ಇಲಾಖೆಯೂ ಈ ಭಾಗದ ರೈತರ ಬೀಜದ ಬೇಡಿಕೆಯನ್ನು ಸಕಾಲಕ್ಕೆ ಪೂರೈಕೆ ಮಾಡಲು ಸಿದ್ಧತೆ ಮಾಡಿಕೊಂಡು ಉದ್ದು, ಹೆಸರು, ತೊಗರಿ, ಶೇಂಗಾ, ಸೂಯಾಭಿನ್, ಸಜ್ಜೆ, ಸೂರ್ಯಕಾಂತಿ ಎಳ್ಳು ಮತ್ತಿತರ ಬೀಜಗಳ ಬೇಡಿಕೆ ಇದೆ. ಮಳೆ ಬಿದ್ದ ಮೇಲೆ ಬೀಜ, ಗೊಬ್ಬರಕ್ಕಾಗಿ ಅಲೆದಾಡಿ ದಿನದೊಡುವಂತೆ ಆಗಬಾರದು. ಇಲಾಖೆಯಲ್ಲಿ ಈಗಾಗಲೇ ಮೊದಲೆ ಬೀಜಗಳ ದಾಸ್ತಾನು ಆಗಬೇಕು.

ಈರಣ್ಣಾ ಜಿ. ಆಳಂದ ಧಂಗಾಪೂರ ಕರವೇ ತಾಲೂಕು ಆಧ್ಯಕ್ಷರು.

ಸಬ್ಸಿಡಿ ನಾಮಕೆವಾಸ್ತೆ ಬೇಡ: ಬಿತ್ತನೆ ಬೀಜವು ಕೃಷಿ ಇಲಾಖೆಗೆ ಪೂರೈಕೆ ಮಾಡುವಾಗ ಕಂಪನಿಗಳು ಬೆಲೆ ಹೆಚ್ಚಿಸಿ ಪೂರೈಕೆ ಮಾಡುತ್ತವೆ. ಕಂಪನಿಗಳಿಂದ ಖರೀದಿಸುವ ಬೀಜಗಳು ಕೃಷಿ ಇಲಾಖೆ ಶೇ 50ಷ್ಟು ಸಬ್ಸಡಿ ಕಡಿತ ಮಾಡಿ ವಿತರಣೆ ಮಾಡಿದ ಮೇಲೂ ಬೆಲೆಯಲ್ಲಿ ಹೊರಗಡೆ ಯಾವುದೇ ವ್ಯಾತಾಸವಾಗದೆ ಇರುವುದು ರೈತರಿಗೆ ಬೀಜಗಳು ಯಥಾಸ್ಥಿತಿಯಲ್ಲೇ ಖರೀದಿಸುಸಂತಾಗುತ್ತದೆ. ಇದು ಸರ್ಕಾರದ ಸಬ್ಸಿಡಿಯ ಯಾವ ಪರುಷಾರ್ಥಕ್ಕೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ರೈತರಿಗೆ ಅತಿ ಕಡಿಮೆ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದೊರೆಯುವಂತಾಗಲಿ.
ಭೀಮಾಶಂಕರ ಮಾಡಿಯಾಳ ಸಿಪಿಐ ಜಿಲ್ಲಾ ಮುಖಂಡರು