ಮುಂಗಾರು ಬಿತ್ತನೆ ರೈತರ ಜಮೀನಿಗೆ ಭೇಟಿ ನೀಡಿದ ಕೃಷಿ ಅಧಿಕಾರಿ ರಾಥೋಡ್

ಸೇಡಂ,ಜೂ,11: ಮುಂಗಾರು ಹಂಗಾಮಿನ ಬಿತ್ತನೆ
ಕೋಲ್ಕುಂದ, ಮುಧೋಳ್, ವ್ಯಾಪ್ತಿಯಲ್ಲಿರುವ ರೈತರು ಹೆಸರು ಉದ್ದು ತೊಗರಿ ಪ್ರಾರಂಭಿಸಿದರೆ ಇನ್ನು ಕೆಲವು ಕಡೆ ಮಳೆ ಬರದೆ ಬಿತ್ತನೆ ನಿಲ್ಲಿಸಿದ್ದಾರೆ, ಇಂದು ಮದನಾ, ಗ್ರಾಮದ ಕಾರ್ಯನಿರತ ಶಿಕ್ಷಕರಾದ ಕಿಷ್ಟಪ್ಪ ತಂದೆ ಸಾಬಣ್ಣ ಅವರ ಮುಂಗಾರು ಹಂಗಾಮಿನ ಬಿತ್ತನೆ ಮಾಡುತ್ತಿರುವ ಜಮೀನಿಗೆ ರೈ.ಸಂ.ಕೇಂದ್ರ ಕೊಡ್ಲಾ ಕೃಷಿ ಅಧಿಕಾರಿ ಪ್ರಕಾಶ್ ರಾಥೋಡ್ ಭೇಟಿ ನೀಡಿ ಬಿಜೋಪಚಾರ, ತೊಗರಿಯ ಹೊಸ ತಳಿ ಹಾಗೂ ಹವಾಮಾನದ ಕುರಿತು ಮಾಹಿತಿ ನೀಡಿದರು.