ಮುಂಗಾರು ಬಿತ್ತನೆ ಬೀಜ ವಿತರಣೆಗೆ ಚಾಲನೆ

ಚಿಂಚೋಳಿ,ಜೂ.3- ಚಂದಾಪುರ ರೈತ ಸಂಪರ್ಕ ಕೇಂದ್ರದಲ್ಲಿ ತಾಲೂಕ ಕೃಷಿ ಇಲಾಖೆ ವತಿಯಿಂದ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಯಿತು.
ಶಾಸಕರಾದ ಡಾ. ಅವಿನಾಶ ಜಾಧವ ಅವರು, ರೈತರಿಗೆ ಬಿತರಿಸಿ ಮಾಡಿದ ಅವರು, ತಾಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಒಳ್ಳೆಯ ಮಳೆ ಬಿದಿದ್ದು, ರೈತರು ತಮ್ಮ ತಮ್ಮ ಹೊಲಗಳಿಂದ ಒಳ್ಳೆ ಬೆಳೆ ಬರಲಿ ಎಂದು ಶುಭಹಾರೈಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೃಷಿ ಮಹತ್ವ ನೀಡಿದ್ದು, ಕೃಷಿ ಸಂಬಂಧಪಟ್ಟಗಳ ಎಲ್ಲ ತರದ ಯೋಜನೆಗಳನ್ನು ತಾಲೂಕಿನ ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೋವಿಡ್ 19 ಮಾರ್ಗ ಸೂಚನೆಗಳನ್ನು ಎಲ್ಲಾ ರೈತರು ಅಳವಡಿಸಿಕೊಂಡು ಬಿತ್ತನೆ ಬಿಜ, ರಸಗೊಬ್ಬರ ಪಡೆಯಬೇಕು ಹಾಗೂ ಬಿತ್ತನೆ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.
ಚಿಂಚೋಳಿ ತಾಲೂಕಿನಲ್ಲಿ ಕೊರೋನ ಮುಕ್ತ ತಾಲೂಕ ಮಾಡೋಣ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ. ಸೇಡಂನ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಸಮದ್ ಪಟೇಲ್. ಚಿಂಚೋಳಿಯ ಕೃಷಿ ಇಲಾಖೆಯ ಅಧಿಕಾರಿಗಳಾದ ಡಾ. ಅನೀಲಕುಮಾರ ರಾಠೋಡ್. ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷರಾದ ಸಂತೋಷ ಗಡಂತಿ. ಕೃಷಿ ಇಲಾಖೆಯ ಸಿಬ್ಬಂದಿಗಳನ್ನು ಸಿರಾಜುದ್ದೀನ್ ಪಟೇಲ. ಚಿಂಚೋಳಿ ಸಂಪರ್ಕ ಕೇಂದ್ರದ ಅಧಿಕಾರಿಗಳಾದ ಅಭಿಲಾಶ. ಕೃಷಿ ಇಲಾಖೆಯ ಸಿಬ್ಬಂದಿಗಳಾದ ರಘುವೀರ. ಬಿಜೆಪಿ ಮುಖಂಡರಾದ ಪ್ರೇಮಸಿಂಗ ಜಾಧವ. ಭೀಮಶೆಟ್ಟಿ ಮುರುಡ. ಶಾಮರಾವ ಕೊರವಿ. ಅಶೋಕ ಚವ್ಹಾಣ. ಜಗದೀಶಸಿಂಗ ಠಾಕೂರ. ರಾಜು ಪವಾರ. ಪವನ ಕುಮಾರ ಗೋಪನಪಳ್ಳಿ. ಹನುಮಂತ ಗಾರಂಪಳ್ಳಿ. ಮತ್ತು ಅನೇಕ ರೈತರು ಉಪಸ್ಥಿತರಿದ್ದರು.