ಮುಂಗಾರು ಪ್ರವೇಶ; ದಾವಣಗೆರೆಯಲ್ಲಿ ಹದಮಳೆ

ದಾವಣಗೆರೆ.ಜೂ.೩; ದಾವಣಗೆರೆ ನಗರ ಸುತ್ತಮುತ್ತ ಬೆಳ್ಳಂಬೆಳಗ್ಗೆಯಿಂದ ಭರ್ಜರಿ ಮಳೆ ಸುರಿದಿದೆ. ಕೇರಳದಲ್ಲಿ ಇಂದಿನಿಂದ ಮುಂಗಾರು ಮಳೆ ಪ್ರವೇಶ ಪಡೆದಿದ್ದು, ರಾಜ್ಯದಲ್ಲಿಯೂ ಕೂಡ ಉತ್ತಮ ಮಳೆಯಾಗುತ್ತಿದೆ.ಹಾಗೆಯೇ ದಾವಣಗೆರೆ ಯಲ್ಲಿ ಒಂದು ತಾಸಿಗೂ ಹೆಚ್ಚು ಹೊತ್ತು ಭರ್ಜರಿ ಮಳೆಯಾಗಿದೆ.ಈಗಾಗಲೇ ಜಿಲ್ಲೆಯಲ್ಲಿ ಹಿಂಗಾರು ಮಳೆ ಉತ್ತಮವಾಗಿದ್ದರಿಂದ ರೈತರ ಬಿತ್ತನೆಗೆ ಹೊಲವನ್ನು ಸಿದ್ಧಪಡಿಸಿಕೊಂಡಿದ್ದು, ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದರು. ಮಳೆರಾಯ ರೈತರ ನಿರೀಕ್ಷೆಗೆ ತಕ್ಕಂತೆ ಮಳೆಯಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.