
ನವದೆಹಲಿ,ಏ.6- ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನಲ್ಲಿ ಸುಮಾರು 1.30 ಲಕ್ಷ ಕಾನ್‌ಸ್ಟೆಬಲ್‌ಗಳ ಹುದ್ದೆಗಳ ನೇಮಕಾತಿಯಲ್ಲಿ ಶೇ.10 ರಷ್ಟು ಮೀಸಲಾತಿ ನೀಡಲು ಕೇಂದ್ರ ಗೃಹ ಸಚಿವಾಲಯ ಇಂದು ಅಧಿಸೂಚನೆ ಹೊರಡಿಸಿದೆ.
ಕೇಂದ್ರೀಯ ಮೀಸಲು ಪೋಲಿಸ್ ಪಡೆ ಕಾಯ್ದೆ 1949 (1949 ರ 66) ಸೆಕ್ಷನ್ 18 ರ ಉಪ-ವಿಭಾಗ (1) ಮತ್ತು ಕೇಂದ್ರೀಯ ಮೀಸಲು ಪೋಲೀಸ್ ಪೊಲೀಸ್ ಪಡೆ ‘ಸಿ ದರ್ಜೆಯ ಕೇಡರ್ ನೇಮಕಾತಿ ನಿಯಮಗಳು, 2010 ರ ಅಡಿಯಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆ ಗ್ರೂಪ್ ಸಾಮಾನ್ಯ ಕೇಡರ್ ಕಾನ್ಸ್‌ಟೇಬಲ್ ಹುದ್ದೆಗೆ ನೇಮಕಾತಿ ವಿಧಾನವನ್ನು ನಿಯಂತ್ರಿಸುವ ಕೆಳಗಿನ ನಿಯಮಗಳಡಿ ಈ ಮೀಸಲಾತಿ ಅಧಿಸೂಚನೆ ಪ್ರಕಟಿಸಲಾಗಿದೆ.
ಸಾಮಾನ್ಯ ಕೇಂದ್ರ ಸೇವೆ, ಗ್ರೂಪ್ ‘ಸಿ’, ನಾನ್ ಗೆಜೆಟೆಡ್, ಮಹಿಳೆಯರಿಗೆ 4667 ಹುದ್ದೆಗಳನ್ನು ಒಳಗೊಂಡ ಒಟ್ಟು 1,29,929 ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾರಿಗೆ ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.
ಅಗ್ನಿವೀರರಿಗೆ ಆದ್ಯತೆ:
ಮಾಜಿ ಅಗ್ನಿವೀರರ ಮೊದಲ ಬ್ಯಾಚ್‌ನ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯು ಐದು ವರ್ಷಗಳವರೆಗೆ ಸಡಿಲಿಸಬಹುದಾಗಿದೆ.
ಮಾಜಿ ಅಗ್ನಿವೀರ್‌ಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯನ್ನು ಮೂರು ವರ್ಷಗಳವರೆಗೆ ಸಡಿಲಗೊಳಿಸಲಾಗುತ್ತದೆ. ಮಾಜಿ ಅಗ್ನಿವೀರ್‌ಗಳನ್ನು ಶಾರೀರಿಕ ದಕ್ಷತೆಯ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಕಾನ್ಸ್‌ಟೇಬಲ್ ಹುದ್ದೆಗೆ ನೇಮಕಾತಿಗಾಗಿ ಮಾಜಿ ಅಗ್ನಿವೀರ್‌ಗಳಿಗೆ 10 ಪ್ರತಿಶತ ಖಾಲಿ ಹುದ್ದೆಗಳನ್ನು ಕಾಯ್ದಿರಿಸಲಾಗಿದೆ ಎಂದು ಗೃಹ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.