ಮೀಸಲು ಕ್ಷೇತ್ರದಲ್ಲಿ ದಮನಿತ ದಲಿತ ಶೋಷಿತರಿಗೆ ದ್ವನಿಯಾದ . ಹಾಲಿ ಮಾಜಿ ಶಾಸಕರಿಗೆ ಕಾಳಾಪುರ ಧಣಿ ದ್ವನಿ ಸವಾಲು .!!

ಲಿಂಗಸುಗೂರು ಸಂಜೆ ವಾಣಿ ವಾರ್ತೆ ೨೫

ಲಿಂಗಸುಗೂರು ಮೀಸಲು ಕ್ಷೇತ್ರದಲ್ಲಿ ದಲಿತ ಅಸ್ಪುಶ್ಯರು ದಮನಿತ ಸಮುದಾಯಗಳಿಗೆ ಸಾಮಾಜಿಕ ಪರಿಕಲ್ಪನೆ ಅಡಿಯಲ್ಲಿ ಶೋಷಣೆಗೊಳಗಾದ ಮಾದಿಗ ಸಮುದಾಯ ಹಾಗೂ ಚಲುವಾದಿ ಇವರಿಗೆ ಅಂಬೇಡ್ಕರ್ ಬರೆದ ಸಂವಿಧಾನದ ಪ್ರಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಲಿತ ದಲಿತರ ಮುಂದೆ ನಲುಗಿರುವ ಈ ಸಮಾಜಕ್ಕೆ ಮುಂದಿನ ಚುನಾವಣೆಯಲ್ಲಿ ಅಸ್ಪುಶ್ಯರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಬೇಕು ಏಕೆಂದರೆ ಇಲ್ಲಿರುವ ಬಲಿತ ದಲಿತರ ಹಣದ ಮುಂದೆ ಶಾಸಕರಾಗಲು ಅವಕಾಶ ಇಲ್ಲದಂತಾಗಿದೆ ಇದರಿಂದಾಗಿ ಸಂವಿಧಾನದ ಪ್ರಕಾರ ಮೂಲ ದಲಿತರಿಗೆ ಶಾಸಕರಾಗಲು ಅವಕಾಶ ನೀಡಬೇಕು ಎಂದು ಕಾಳಾಪುರದ ಧಣಿ ರುದ್ರಭೂಪಾಲ ನಾಡಗೌಡ ಇವರು ಮೊನ್ನೆಯಷ್ಟೇ ನಡೆದ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಅವರ ಹುಟ್ಟುಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಮಾತನಾಡಿದರು.
೨೦೧೮ರಲ್ಲಿ ಲಿಂಗಸುಗೂರು ವಿಧಾನ ಸಭಾ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲಾತಿ ಪ್ರಕಟವಾಗಿದ್ದು ಕಡಿಮೆ ಜನಸಂಖ್ಯೆ ಹೊಂದಿರುವ ಜನಾಂಗ ಶಾಸಕ ರಾಗಿ ಆಯ್ಕೆಯಾಗಿರುವ ಪರಿಣಾಮವಾಗಿ ಕ್ಷೇತ್ರದಲ್ಲಿ ಮಾದಿಗ ಚಲುವಾದಿ ಸಮುದಾಯಗಳಿಗೆ ಮೀಸಲಾತಿ ಪ್ರಕಟಗೊಡಾಗಿನಿಂದಲೂ ಅನ್ಯಾಯವಾಗಿದೆ ಇದಕ್ಕಾಗಿಯೇ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಎಡಗೈ ಬಲಗೈ ಎಂಬ ಬೇಧಬಾವ ಮರೆತು ಒಂದಾಗಿ ಚುನಾವಣೆ ಎದುರಿಸಲು ಸಂಘಟನಾತ್ಮಕ ವ್ಯೂಹ ರಚನೆ ಮಾಡಿ ಹಣ ಬಲ ಇರುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ನೇರವಾಗಿ ಮಾಜಿ ಶಾಸಕರಿಗೆ ಹಾಗೂ ಹಾಲಿ ಶಾಸಕರಿಗೆ ಟಾಂಗ್ ನೀಡಿದ್ದಾರೆ.
ಈಗಾಗಲೇ ಕ್ಷೇತ್ರದಲ್ಲಿ ಮಾದಿಗ ಚಲುವಾದಿ ಸಮುದಾಯದ ಮತ ೪೫ರಿಂದ ೫೦ಸಾವಿರ ಮತದಾರರು ಇದ್ದಾರೆ ಕೂಡಲೇ ಈ ಎರಡು ಸಮಾಜ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ರಾಜಕೀಯ ಒಗ್ಗಟ್ಟು ಪ್ರದರ್ಶಿಸಬೇಕು ಎಂಬುದು ನಮ್ಮ ಆಶಯವಾಗಿದೆ .
ಮುಂದಿನ ಚುನಾವಣೆಯಲ್ಲಿ ಅಸ್ಪುಶ್ಯರಿಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ತಾಲ್ಲೂಕಿನ ಎಚ್ ಬಿ ಮುರಾರಿ ಹಾಗೂ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಇವರು ಕ್ಷೇತ್ರದಲ್ಲಿ ತಮ್ಮದೇ ರೀತಿಯಲ್ಲಿ ಸಂಘಟನೆ ಮಾಡುತ್ತಿದ್ದಾರೆ ಈಗಾಗಲೇ ಕ್ಷೇತ್ರದ ಜನತೆ ಮಾತನಾಡುತ್ತಿದ್ದಾರೆ ಹಾಗೂ ಬಿ ರುದ್ರಯ್ಯ ಇವರು ಕೂಡ ನಮ್ಮನ್ನು ಸಂಪರ್ಕಿಸಿ ಈ ಕ್ಷೇತ್ರದ ಆಕಾಂಕ್ಷಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಇದರಿಂದ ಶೋಷಿತರ ಪರವಾಗಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಇಂದು ಬೆಳಗ್ಗೆ ಕಾಳಾಪುರ ಗ್ರಾಮಕ್ಕೆ ಸಂಜೆ ವಾಣಿ ವರದಿಗಾರರು ಭೇಟಿಯಾಗಿ ಮಾತುಕತೆ ಸಂದರ್ಭದಲ್ಲಿ ಮೇಲಿನ ರೀತಿಯಲ್ಲಿ ಸರಳವಾಗಿ ಮಾತನಾಡಿದರು.
ದ್ವನಿ ಇಲ್ಲದ ಸಮಾಜದ ಪರವಾಗಿ ದ್ವನಿ ಹೆತ್ತಿನಿತ್ತ….ಧಣಿಗೆ . ಸಮಾಜದ ಜನರು ವಿವಿಧ ಗ್ರಾಮದಿಂದ ಕಾಳಪುರ ಗ್ರಾಮಕ್ಕೆ ತೆರಳಿ ನಾಡ ಗೌಡರಿಗೆ.ಕೃತಜ್ಞತೆ ಭಾವನೆಗಳಿಂದ ಸತ್ಕರಿಸಲಾಯಿತು ಲಿಂಗಸುಗೂರು ಕ್ಷೇತ್ರದಲ್ಲಿ… ಹಣದ ದಬ್ಬಾಳಿಕೆ ಯಿಂದ ಆಗಬಹುದೆಂದು ತಿಳಿದಿರುವ ಶಾಸಕರಿಗೆ ಧಣಿಗಳ ಧ್ವನಿ ಸವಾಲಾಗಿದೆ ….ನಾಡ ಗೌಡ ರಿಂದ ಹಣ ವಂತರಿಗೆ ಸವಾಲಾಗಿದೆ.
ಸತ್ಕಾರ ಸ್ವೀಕರಿಸಿ ಸಮಾಜದ ಮುಖಂಡರಿಗೆ ಕಿವಿ ಮಾತುಗಳನ್ನು ಹೇಳಿದರು ಕ್ಷೇತ್ರದಲ್ಲಿರುವಂತಹ ಅಸ್ಪೃಶ್ಯ ಸಮಾಜದವರಿಗೆ .ಕಾಳಪುರ ನಾಡ ಗೌಡರು….ನಮ್ಮ ಸಮುದಾಯವಾದ ಹೊಲೆ ಮಾದಿಗರು ಈ ಮೀಸಲು ಕ್ಷೇತ್ರಕ್ಕೆ ಮುಂಬರುವ ೨೦೨೩ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಾಯಕರಾಗ ಬೇಕು ಎಂದು ನಮ್ಮ ಸಮಾಜದ ಪರವಾಗಿ ಧ್ವನಿ ಹೆತ್ತಿ
ನಮ್ಮ ಸಮಾಜದ ಜನತೆಗೆ ಆತ್ಮ ಬಲ ತುಂಬಿದರು. .
ಅದರ ಪರವಾಗಿ.. ನಮ್ಮ ಸಮುದಾಯದ ಪರವಾಗಿ ನಮ್ಮ ಸಮಾಜದ ಮಾಜಿ ಕೆಪಿಸಿಸಿ ಕಾರ್ಯದರ್ಶಿ ಹೆಚ್ ಬಿ ಮುರಾರಿ ಯವರು ಹಾಗೂ ಕಾಳಪುರ ಜಾಲಿಬೆಂಚಿ ಮಿಂಚೇರಿ ಐದನಾಳ ಗ್ರಾಮದ ಜನರ ಜೊತೆ ಗೂಡಿ ನಾಡ ಧಣಿಗಳಿಗೆ ಹೂವಿನ ಹಾರ ಹಾಕುವುದರ ಮುಖಾಂತರ ಅಭಿನಂದನೆ ಸಲ್ಲಿಸಿದರು.