ಮೀಸಲು ಕಾಮಗಾರಿಗಳ ಮೊತ್ತ ಹೆಚ್ಚಳ: ಸನ್ಮಾನ

ಬೀದರ್:ಜು.14:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗುತ್ತಿಗೆದಾರರ ಮೀಸಲು ಕಾಮಗಾರಿ ಮೊತ್ತ ಹೆಚ್ಚಿಸಿದ ಪ್ರಯುಕ್ತ ಕರ್ನಾಟಕ ರಾಜ್ಯ ಎಸ್.ಸಿ, ಎಸ್.ಟಿ. ಗುತ್ತಿಗೆದಾರರ ಸಂಘದ ಬೀದರ್ ಜಿಲ್ಲಾ ಘಟಕದ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಸಂಘದ ರಾಜ್ಯ ಅಧ್ಯಕ್ಷ ಎನ್. ಮಹಾದೇವ ಸ್ವಾಮಿ ಅವರನ್ನು ಸನ್ಮಾನಿಸಿದರು.
ಕೇಂದ್ರ ಸಂಘದ ನಿರಂತರ ಪ್ರಯತ್ನದ ಫಲವಾಗಿ ರಾಜ್ಯ ಬಜೆಟ್‍ನಲ್ಲಿ ಮೀಸಲು ಕಾಮಗಾರಿಗಳ ಮೊತ್ತವನ್ನು ರೂ. 50 ಲಕ್ಷದಿಂದ ರೂ. 1 ಕೋಟಿಗೆ ಏರಿಸುವ ಘೋಷಣೆ ಮಾಡಲಾಗಿದೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಹಿಂದೆಯೂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ರೂ. 50 ಲಕ್ಷದ ವರೆಗಿನ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮೀಸಲು ಕಲ್ಪಿಸಿತ್ತು ಎಂದು ಸ್ಮರಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರಕುಮಾರ ಹಾಸನಕರ್, ಉಪಾಧ್ಯಕ್ಷರಾದ ವಿನೋದಕುಮಾರ ಅಪ್ಪೆ, ವಿಠ್ಠಲ ಪಾಂಡೆ, ಪ್ರಧಾನ ಕಾರ್ಯದರ್ಶಿ ಬುದ್ಧಪ್ರಕಾಶ ಭಾವಿಕಟ್ಟಿ, ಖಜಾಂಚಿ ಪೃಥ್ವಿರಾಜ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಶಾಂತ ಸಾಗರ್ ಇದ್ದರು.