
(ಸಂಜೆವಾಣಿ ವಾರ್ತೆ)
ನವಲಗುಂದ,ಆ14: ಸಮಾಜದ ಮುಂಚೂಣಿಗಾಗಿ ಮೀಸಲಾತಿ ಅನಿವಾರ್ಯವಾಗಿದ್ದು, ಮೀಸಲಾತಿ ಹೋರಾಟವನ್ನು ಶ್ರಾವಣ ಮಾಸದಲ್ಲಿ ಧಾರವಾಡ ಜಿಲ್ಲೆ ಗಬ್ಬೂರಿನಿಂದ ಮತ್ತೆ ಪ್ರಾರಂಭ ಮಾಡೋಣ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಹೇಳಿದರು.
ಪಟ್ಟಣಕ್ಕೆ ಆಗಮಿಸಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ಅವಶ್ಯವಾಗಿದೆ ಸರಕಾರ ಯಾವುದೇ ಇದ್ದರೂ ಹೋರಾಟ ಅನಿವಾರ್ಯವಾಗಿದೆ ಬೇಡಿಕೆ ಈಡೇರಿಕೆ ವರೆಗೂ ನಮ್ಮ ಹೋರಾಟ ನಿರಂತರ ಎಂದರು.