ಮೀಸಲಾತಿ ಹೆಚ್ಚಿಸುವ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಒತ್ತಾಯಿಸಿ ಮನವಿ

ವಿಜಯಪುರ, ಸೆ.11-ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕಾ ಘಟಕ ಬಸವನ ಬಾಗೇವಾಡಿ ವತಿಯಿಂದ ಕರ್ನಾಟಕ ಸ್ವಾಭಿಮಾನಿ ಎಸ್.ಸಿ.ಮತ್ತು ಎಸ್.ಟಿ. ಸಂಘಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಕ್ರಿಯಾ ಸಮಿತಿ ನಿವೃತ್ತ ನ್ಯಾಯಾಮೂರ್ತಿ ಎಚ್. ನಾಗಮೋಹನದಾಸ ಅವರ ವರದಿ ಮೀಸಲಾತಿ ಹೆಚ್ಚಿಸುವ ಕುರಿತು ಬಸವನ ಬಾಗೇವಾಡಿ ಶಾಸಕರಾದ ಶಿವಾನಂದ ಪಾಟೀಲ ಅವರಿಗೆ ಮತ್ತು ದೇವರಹಿಪ್ಪರಗಿ ಮತಕ್ಷೇತ್ರ ಶಾಸಕರಾದ ಸೋಮನಗೌಡ ಪಾಟೀಲ ಆಪ್ತ ಸಹಾಯಕರಿಗೆ ನಡೆಯಲಿರುವ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಬಾಗೇವಾಡಿ ತಾಲೂಕು ಅಧ್ಯಕ್ಷರಾದ ರವಿ ಪ್ರಭು ನಾಯ್ಕೋಡಿ ಮಾತನಾಡಿ ಜನಸಂಖ್ಯೆ ಅನುಗುಣವಾಗಿ ಪರಿಶಿಷ್ಟ ಜಾತಿ 15% ರಿಂದ 17% ಪರಿಶಿಷ್ಟ ಪಂಗಡ 3% ರಿಂದ 7.5% ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಸ್ವಾಮಿಗಳಾದ ಪ್ರಸನ್ನಾನಂದ ಪುರಿ ಶ್ರೀಗಳು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಇಂದಿಗೆ ಸುಮಾರು ಇಂದಿಗೆ 211 ದಿನಗಳ ಗತಿಸುತ್ತ ಕಳೆದರು ತಿರುಗಿ ನೋಡದ ರಾಜ್ಯ ಸರಕಾರ ನಿರ್ಲಕ್ಷ ತೋರುತ್ತಿದೆ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾ ಸಂಚಾಲಕರಾದ ಅರವಿಂದ ಸಾಲೋಟಗಿ ಮಾತನಾಡಿ ಎಸ್.ಸಿ. ಮತ್ತು ಎಸ್.ಟಿ. ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿದ್ಯವನ್ನು ಕಾನೂನಾತ್ಮಕವಾಗಿ ನೀಡುವುದರ ಮೂಲಕ ಸಮಾಜದ ಇತರ ವರ್ಗಗಳ ಸಮಾನ ಹಂತಕ್ಕೆತರುವ ಉದ್ದೇಶದಿಂದ ಮೀಸಲಾತಿಯನ್ನು ಕಲ್ಪಿಸಿರುತ್ತಾರೆ. ಅದರಂತೆ ಸಂವಿಧಾನ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂವಿಧಾನದ ಅಂಶಗಳಂತೆ 2011ಜಾತಿ ಜನಸಂಖ್ಯೆಗೆ ಅನುಗುಣವಾಗಿ ಎಸ್.ಸಿ.ಮತ್ತು ಎಸ್.ಟಿ.Uಳ ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗದಲ್ಲಿ ಕ್ರಮವಾಗಿ ಶೇಕಡಾ ಕ್ರಮವಾಗಿ ಹೆಚ್ಚಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಹಾಂತೇಶ ಕಾಸಾಬಾಳ, ಪರಸರಾಮ ಬಡಿಗೇರ, ಪರಸರಾಮ ಕೊಳೂರ, ಪ್ರಕಾಶ ರಾಗಪ್ಪಗೋಳ, ನಿಜಪ್ಪ ಔರಸಂಗ, ಶ್ರೀಶೈಲಹೊನ್ನಳ್ಳಿ, ನಾಗಪ್ಪಬಡಿಗೇರ, ಬಸನಗೌಡಪಾಟೀಲ, ಚಂದ್ರಶೇಖರ ಲಿಂಗದಳ್ಳಿ, ಪರಸರಾಮ ಬಿರಾದಾರ ರಾಜು ಮಾಸ್ತಳ, ಯಮನಪ್ಪ ಗುಡದಿನ್ನಿ, ಡಿ.ಬಿ. ಹಿರೇಮಠ, ಮುಂತಾದವರುಉಪಸ್ತಿತರಿದ್ದರು.