ಮೀಸಲಾತಿ ಹೆಚ್ಚಳ, ಸಿಎಂ ಬೊಮ್ಮಾಯಿಗೆ ಸೂರ್ಯಕಾಂತ್ ಅಭಿನಂದನೆ

ಬೀದರ್: ಮಾ.27:ವಿವಿಧ ಸಮುದಾಯಗಳ ಮೀಸಲಾತಿ ಹೆಚ್ಚಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸಲಾಗುತ್ತದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಗೊಳಿಸಲಾಗಿದೆ. ಎಡಗೈ ಸಮುದಾಯಕ್ಕೆ ಶೇ. 6, ಬಲಗೈ ಸಮುದಾಯಕ್ಕೆ ಶೇ. 5.5, ಭೋವಿ ಬಂಜಾರಾ ಸಮುದಾಯಗಳಿಗೆ ಶೇ. 4.5 ಮತ್ತು ಅಲೆಮಾರಿ ಸಣ್ಣ ಸಮುದಾಯಗಳಿಗೆ ಶೇ. 1 ರಷ್ಟು ಮೀಸಲಾತಿ ನೀಡಿರುವುದು ಐತಿಹಾಸಿಕ. ಸಾಮಾಜಿಕ ನ್ಯಾಯದ ಬಗ್ಗೆ ಬಿಜೆಪಿಗೆ ಬದ್ಧತೆ ಇದ್ದಿರುವುದಕ್ಕೆ ಮೀಸಲಾತಿ ಹೆಚ್ಚಳವೇ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಒಕ್ಕಲಿಗ ಸಮುದಾಯದ ಮೀಸಲಾತಿ (ಪ್ರವರ್ಗ 2ಸಿ) ಶೇ. 4 ರಿಂದ 6 ಕ್ಕೆ ಹೆಚ್ಚಿಸಲಾಗಿದೆ. ವೀರಶೈವ ಲಿಂಗಾಯತರ ಮೀಸಲಾತಿಯನ್ನು (ಪ್ರವರ್ಗ 2 ಡಿ) ಶೇ. 5 ರಿಂದ 7 ಕ್ಕೆ ಹೆಚ್ಚಿಸಿರುವುದು ಐತಿಹಾಸಿಕ ಕ್ರಮವಾಗಿದೆ ಎಂದು ಅವರು ತಿಳಿಸಿದ್ದಾರೆ.