ಮೀಸಲಾತಿ ಹೆಚ್ಚಳ ಸಿಎಂಗೆ ಸನ್ಮಾನ

ವಿಜಯಪುರ: ಮಾ.31:ಮೀಸಲಾತಿ ಪ್ರಮಾಣ ಹೆಚ್ಚಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪಂಚಮಸಾಲಿ ಸಮಾಜದ ಮುಖಂಡರು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಿದರು.
ಪಂಚಮಸಾಲಿ ಸಮಾಜದ ಬಹು ದಿನಗಳ ಬೇಡಿಕೆಯಾದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ, ಆದೇಶ ಪ್ರತಿಯನ್ನು ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು, ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿದ ಸ್ಬಾಮೀಜಿಗಳು, ಮುಖಂಡರಾದ ಬಸನಗೌಡ ಪಾಟೀಲ ಯತ್ನಾಳ, ಸಿದ್ದು ಸವದಿ, ಎಂ. ಎಸ್. ರುದ್ರಗೌಡ, ಬಿ. ಎಸ್. ಪಾಟೀಲ ನಾಗರಾಳ ಹುಲಿ ಮುಂತಾದವರು ಸನ್ಮಾನಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.

ಮುಖ್ಯಮಂತ್ರಿ ಗಳು ಕೂಡ ಶ್ರೀಗಳನ್ನು ಸನ್ಮಾನಿಸಿ, ಆಶೀರ್ವಾದ ಪಡೆದುಕೊಂಡರು. ಇದೇ ವೇಳೆ ಸಮಾಜದ ಅನುಕೂಲಗಳ ಕುರಿತಂತೆ ಹಲವು ವಿಷಯಗಳ ಕುರಿತು ಕೆಲಕಾಲ ಚರ್ಚೆ ನಡೆಸಲಾಯಿತು.