ಮೀಸಲಾತಿ ಸಿಗುವವರೆಗೂ ಹೋರಾಟ: ಜಯ ಮೃತ್ಯುಂಜಯ ಶ್ರೀ


ಕುಂದಗೋಳ,ಎ.11:ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ಬಿಟ್ಟಿಲ್ಲ, ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಕಲ್ಯಾಣಪುರ ಬಸವಣ್ಣ ಅಜ್ಜನವರ ಮಠದ ಸಭಾ ಭವನದಲ್ಲಿ ಏರ್ಪಡಿಸಿದ್ದ ಶರಣು ಶರಣಾರ್ಥಿ ಸಂದೇಶ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು. ಪಂಚಮಸಾಲಿ ಸಮಾಜ ಸ್ವಾರ್ಥವನ್ನು ಬಯಸದೇ, ತ್ಯಾಗದ ಪ್ರತೀಕವಾಗಿ ನೆಲೆ ನಿಂತಿರುವ ಸಮಾಜವಾಗಿದೆ. ಹೋರಾಟದ ಕಿಚ್ಚು ರಕ್ತಗತವಾಗಿ ಪೂರ್ವಜರಿಂದ ಬಂದಿದ್ದು, ಯಾವಾಗಲು ಶ್ರಮ ಜೀವಿಗಳು ಮತ್ತು ಸದಾ ಪರಿಸರದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಸಮಾಜವಾಗಿದೆ ಎಂದರು.
ಇದಕ್ಕೂ ಪೂರ್ವದಲ್ಲಿ ಮಾಜಿ ಕೇಂದ್ರ ಸಚಿವರಾದ ಬಸನಗೌಡ ಪಾಟೀಲ ಯತ್ನಾಳ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಪಂಚಮಸಾಲಿ ಸಮಾಜ ಹೋರಾಟವನ್ನು ಕೈ ಬಿಟ್ಟಿಲ್ಲ ರಾಜ್ಯದ ಮುಖ್ಯಮಂತ್ರಿಯಾದ ಬಿ.ಎಸ್ ಯಡಿಯೂರಪ್ಪನವರು 6 ತಿಂಗಳಲ್ಲಿ 2ಂ ಮೀಸಲಾತಿ ನೀಡುವ ಭರವಸೆ ನೀಡಿದ್ದಾರೆ.ಅದಕ್ಕಾಗಿ ಹೋರಾಟವನ್ನು ಹಿಂಪಡಿದಿದ್ದೇವೆ. ಮೀಸಲಾತಿ ನೀಡದಿದ್ದರೆ ಮುಂದಿನ ಹೋರಾಟದ ಪೂರ್ವ ಸಿದ್ಧತೆ ಇದಾಗಿದೆ.ಮುಂದಿನ ದಿನಗಳಲ್ಲಿ ಸೆಪ್ಟೆಂಬರ್ 15 ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ 20 ಲಕ್ಷಕ್ಕೂ ಅಧಿಕ ಸಮಾಜದ ಬಾಂದವರನ್ನು ಸೇರಿಸಲಾಗುತ್ತದೆ ಎಂದು ಹೇಳಿ ಸಂಚಲನ ಮೂಡಿಸಿದರು ಒಂದು ವೇಳೆ ಮೀಸಲಾತಿ ನೀಡಲು ವಿಳಂಬ ಧೋರಣೆ ತೋರಿದರೆ ಮುಂದಿನ ಚುನಾವಣೆಯಲ್ಲಿ ಸಮಾಜಬಾಂಧವರು ತಕ್ಕ ಪಾಠ ಕಲಿಸುತ್ತಾರೆ ಜನಸಂಖ್ಯೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮಾ?ಜ ಚುನಾವಣೆಯಲ್ಲಿ ನಿರ್ಣಾಯಕರು ಉತ್ತರ ಕರ್ನಾಟಕದಲ್ಲಿ 33 ಹೆಚ್ಚು ಶಾಸಕರನ್ನು ನೀಡುವಂತಹ ಸಾಮಥ್ರ್ಯ ಲಿಂಗಾಯತ ಪಂಚಮಸಾಲಿ ಸಮಾಜದ ಇದೆ ಎಂದು ಎಚ್ಚರಿಸಿದರು ಯೂರಪ್ಪನವರು ಹಾಗೂ ಜಗದೀಶ್ ಶೆಟ್ಟರ್ ನಿಮ್ಮ ಸಮಾಜಕ್ಕೆ ಮೀಸಲಾತಿ ರಾತ್ರೋ ರಾತ್ರಿ ಪಡೆದುಕೊಂಡಿದ್ದೀರಿ ಆಗ ಕಾನೂನು ತೊಡಕು ಇರಲಿಲ್ಲ ನಮ್ಮ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದಾಗ ತಜ್ಞರ ವರದಿ ಕಾನೂನು ತೊಡಕು ಕುಂಟು ನೆಪ ಹೇಳುವುದನ್ನು ಬಿಡಬೇಕು ಎಂದು ಹೇಳಿದರು
ದಿವ್ಯ ಸಾನಿಧ್ಯ ವನ್ನು ತ್ರಿವಿಧ ದಾಸೋಹಿ ಬಸವಣ್ಣಅಜ್ಜನವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎಸ್.ಐ.ಚಿಕ್ಕನಗೌಡ್ರ,ಎಂ.ಎಸ್.ಅಕ್ಕಿ, ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ್, ಹರಿಹರದ ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ,ಮಾಜಿ ಸಚಿವರಾದ ಪಿ.ಸಿ.ಸಿದ್ದನಗೌಡ್ರ,ಮಾತನಾಡಿದರು.
ಈ ಸಂದರ್ಭದಲ್ಲಿ, ಮಲ್ಲಣ್ಣ ಮಾರಡಗಿ ಆರ್ ಜಿ ಬಂಕರ್.ರಾಜು ಗೌಡ ಪಾಟೀಲ್ ಬಸವರಾಜ ನಾವಳ್ಳಿ ಅಪ್ಪಣ್ಣ ಹುಂಡೇಕರ್, ದೇವಪ್ಪ ಇಚ್ಚಂಗಿ,ಮಹೇಶ್ ಗೋಕುಲ್,ಯಲ್ಲಪ್ಪ ಶಿಗ್ಗಾವಿ, ಮುತ್ತು ಚಕಾರಿ, ಪ್ರಕಾಶ ಬಿಳೇಬಾಳ, ವಿ ಎಸ್. ಕಂಟೆಪ್ಪ ಗೌಡರ ರಾಮಣ್ಣ ಮುದ್ದಣ್ಣವರ, ರಮೇಶ್ ಇಂಗಳಹಳ್ಳಿ, ಪ್ರಕಾಶ ಬೆಳೆ ಬಾಳು, ದೇವೇಂದ್ರಪ್ಪ ಇಚ್ಚಂಗಿ, ಸೇರಿದಂತೆ ಸಮಾಜದ ಬಾಂಧವರು ಉಪಸ್ಥಿತರಿದ್ದರು.