ಮೀಸಲಾತಿ ಸಾಕು ಪ್ರತಿಭೆಗೆ ಅವಕಾಶ ಕೊಡಿ: ಗಂಗೀರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.23: ಶಿಕ್ಷಣ ಉದ್ಯೋಗ ರಾಜಕೀಯದಲ್ಲಿ  ಮೀಸಲಾತಿ ಸಾಕು. ಇನ್ನು ಮುಂದೆ ಪ್ರತಿಭೆ, ಬುದ್ದಿಶಕ್ತಿಯನ್ನು ಆಧಾರಿಸಿ ಉದ್ಯೋಗ, ಶಿಕ್ಷಣ, ರಾಜಕೀಯ ಸ್ಥಾನಮಾನ ದೊರೆಯಲಿ ಎಂಬ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅಖಿಲ ಭಾರತ ಜನಗಣ ಒಕ್ಕೂಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.
ಕಳೆದ 14 ಪ್ರಧಾನಿಗಳು ಮಾಡಿದ್ದು 57 ಲಕ್ಷ ಕೋಟಿ ರೂ ಸಾಲ ಮಾಡಿದರೆ. ಕಳೆದ ಎಂಟು ವರ್ಷದಲ್ಲಿ  ಪ್ರಧಾನಿ ನರೇಂದ್ರ ಮೋದಿ ನೂರು ಲಕ್ಷ ರೂ ಕೋಟಿ ಸಾಲ‌ಮಾಡಿದ್ದಾರೆ ಇದೆಂತಹ ಅಭಿವೃದ್ಧಿ ಎಂದು ಪ್ರಶ್ನಿಸಿದರು.
ದೇಶದ ಶಾಸಕ, ಸಂಸದರ, ಸಚಿವರ ಆಸ್ತಿ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.