ಮೀಸಲಾತಿ ರದ್ದು : ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರಿಗೆ ಭಾರೀ ಶಾಕ್
ರಾಯಚೂರು.ನ.20- ಸುಧೀರ್ಘ ಎರಡು ವರ್ಷಗಳ ವಿಳಂಬ, ಕಾನೂನು ತೊಡಕುಗಳ ಅಡ್ಡಿ ಮಧ್ಯೆ ನವೆಂಬರ್ 02 ರಂದು ಚುನಾವಣೆ ಪೂರ್ಣಗೊಂಡಿದ್ದರೂ, ನವೆಂಬರ್ 12 ಕ್ಕೆ ನ್ಯಾಯಾಲಯದಿಂದ ಫಲಿತಾಂಶ ಪ್ರಕಟಗೊಂಡ ನಂತರ ಅಧಿಕಾರ ಸ್ವೀಕರಿಸಿದ ಅಧ್ಯಕ್ಷ, ಉಪಾಧ್ಯಕ್ಷರಿಗೆ ರಾಜ್ಯ ಹೈಕೋರ್ಟ್ ಮೀಸಲು ರದ್ದು ತೀರ್ಪು ಭಾರೀ ಶಾಕ್ ನೀಡಿದೆ.
2018 ಸೆಪ್ಟೆಂಬರ್ 03 ರಂದು ಚುನಾವಣೆ ನಡೆದು ಮೀಸಲು ಗೊಂದಲದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಚುನಾವಣೆ ವಿಳಂಬ ನಂತರ ಚುನಾವಣೆ ನಡೆದು ಅಧಿಕಾರ ಚುಕ್ಕಾಣಿ ಹಿಡಿದ ರಾಜ್ಯದ 170 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೈಕೋರ್ಟ್ ತೀರ್ಪು ನಿದ್ದೆಗೆಡುವಂತೆ ಮಾಡಿದೆ. ಏಕ ಪೀಠ ನ್ಯಾಯಾಲಯವೂ ರಾಜ್ಯ ಸರ್ಕಾರ ಹೊರಡಿಸಿದ 8-11-2020 ರ ಮೀಸಲಾತಿ ಆದೇಶವನ್ನು ರದ್ದು ಪಡಿಸಿರುವುದು ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದವರಿಗೆ ಈಗ ಗಂಡಾಂತರ ಕಾದಿದೆ.
ಮೇಲ್ಮನವಿ ಸಲ್ಲಿಸಲು ಹೈಕೋರ್ಟ್ 10 ದಿನಗಳ ಗಡುವು ನೀಡಿದೆ. ಈ ಹಿಂದೆ ವಿಭಾಗೀಯ ಪೀಠ ಚುನಾವಣೆಗೆ ಆದೇಶ ನೀಡುವ ಸಂದರ್ಭದಲ್ಲಿ ಸ್ಪಷ್ಟವಾಗಿ ಹೈಕೋರ್ಟ್ ತೀರ್ಪಿಗೆ ಬದ್ಧರಾಗಿ ಚುನಾವಣೆ ನಡೆಸುವಂತೆ ಆದೇಶಿಸಿತ್ತು. ಹೈಕೋರ್ಟ್‌ನ ನಿನ್ನೆಯ ತೀರ್ಪಿನ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಪರವಾಗಿ ಮೇಲ್ಮನವಿ ಸಲ್ಲಿಸಲಿದ್ದಾರೆ. ದ್ವಿಸದಸ್ಯ ಪೀಠ, ಏಕಸದಸ್ಯ ಪೀಠದ ತೀರ್ಪಿನ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದನ್ನು ಆಧಾರಿಸಿ, ಮುಂದಿನ ಬೆಳವಣಿಗೆ ಅವಲಂಬಿಸಿವೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪ್ರತಿಸಲ ಒಂದಿಲ್ಲೊಂದು ಕಾನೂನಿನ ಗದಾ ಪ್ರಹಾರ ಭಾರೀ ಸಮಸ್ಯೆಗೆ ದಾರಿ ಮಾಡಿದೆ. ಪ್ರಸ್ತುತ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರಿಗೆ ತಮ್ಮ ನಿತ್ಯ ಕಾರ್ಯ ನಿರ್ವಹಿಸಲು ಯಾವುದೇ ಅಡ್ಡಿ ಆತಂಕಗಳಿಲ್ಲ. ಆದರೆ, ಮೇಲ್ಮನವಿಯಲ್ಲಿ ಹಿನ್ನೆಡೆಯಾದರೇ, ರಾಜ್ಯ ಸರ್ಕಾರ ಮತ್ತೇ ಪುನಃ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ರೂಪಿಸಿ, ಮತ್ತೊಮ್ಮೆ ಚುನಾವಣೆ ನಡೆಸುವಂತಹ ಆತಂಕಕ್ಕಾರಿ ಸಂಗತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ತೀವ್ರವಾಗಿ ಕಾಡುತ್ತಿದೆ. ಮುಂದಿನ ನ್ಯಾಯಾಂಗ ವ್ಯವಹಾರಗಳ ಬಗ್ಗೆ ತೀವ್ರ ಕುತೂಹಲದಿಂದ ನೋಡಲಾಗುತ್ತದೆ.