ಮೀಸಲಾತಿ ಪ್ರಮಾಣ ಹಂಚಿಕೆ ಅವೈಜ್ಞಾನಿಕ

ರಾಯಚೂರು,ಮಾ.೨೭- ಸಂವಿಧಾನದಲ್ಲಿ ಅವಕಾಶ ಇಲ್ಲದಿದ್ದರೂ ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಯನ್ನು ಹಂಚಿಕೆ ಮಾಡಿದೆ.
ಪರಿಶಿಷ್ಟ ಜಾತಿಗಳ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸ್ಥಿತಿಗತಿ ಮತ್ತಿತರ ಅಂಶಗಳನ್ನು ಈ ಸರ್ಕಾರ ವಸ್ತುನಿಷ್ಠವಾಗಿ ಅಧ್ಯಯನ ಮಾಡಿಲ್ಲ ರಾಜ್ಯ ಸರ್ಕಾರ ಮಾಡಿರುವ ಮೀಸಲಾತಿ ಪ್ರಮಾಣದ ಹಂಚಿಕೆ ಅವೈಜ್ಞಾನಿಕವಾಗಿದೆ ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಎನ್ ಶಿವಣ್ಣ ಪವರ್ ತಿಳಿಸಿದರು.
ಯಾರ ವಿಶ್ವಾಸವಿಲ್ಲದೇ ಗುಪ್ತವಾಗಿ ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲು ಮೀಸಲಾತಿ ಪ್ರಕಟಮಾಡಿರುವ ಸರ್ಕಾರ ಏಕಏಕಿಯಾಗಿ ಚುನಾವಣೆ ಗಿಮಿಕ್ ಗೋಸ್ಕರ ಬಂಜಾರ, ಬೋವಿ, ಕೊರಚ, ಕೊರಮ ಸಮುದಾಯದವರಿಗೆ ಅನ್ಯಾಯ ಮಾಡಿದೆ ಎಂದು ತಿಳಿಸಿದರು.
ನಾವು ಸು.೬೦ಲಕ್ಷ ಜನರಿದ್ದೆವೇ ೩೦ಕ್ಷೇತ್ರದಲ್ಲಿ ೧೦ ಸಾವಿರಕ್ಕೂ ಹೆಚ್ಚು ಜನ ಇದ್ದೇವೆ, ನಮಗೆ ಅನ್ಯಾಯ ಮಾಡಿದೆ ಬಿಜೆಪಿ ಸರ್ಕಾರ ಹಾಗಾಗಿ ನಾಲ್ಕು ಸಮಾಜದವರು ನಾವೆಲ್ಲರೂ ಈ ಬಾರಿ ಬಿಜೆಪಿ ಪಕ್ಷಕ್ಕೆ ಓಟ್ ನೀಡುವುದಿಲ್ಲ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ನಮ್ಮ ಸಮುದಾಯದವರಿಗೆ ಘನಘೋರ ಅನ್ಯಾಯ ಮಾಡಿದೆ,
ಕೆಲವೇ ದಿನಗಳಲ್ಲಿ ರಾಜ್ಯದ ಎಲ್ಲಾ ಕಡೆಗೆ ಬಿಜೆಪಿ ಹಠವೋ ತಾಂಡಾ ಬಚಾವೋ ಆಂದೋಲನ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಎಂ. ವಿ ಈರಣ್ಣ ತಿಳಿಸಿದರು.
ಈ ಸಂಧರ್ಭದಲ್ಲಿ ಸಂ.ಕಾರ್ಯದರ್ಶಿಯಾದ ನರಸಿಂಹಲು ಕಮಲಾಪುರ್, ಹನುಮಂತ್, ಶಿವರಾಂ, ಭೀಮಯ್ಯ ಕಲಮಲಾ ಇದ್ದರು.