ರಾಯಚೂರು.ಅ.೧೦- ಮೀಸಲಾತಿ ಲಾಭಪಡೆದ ಶೇ.೧೫ರಷ್ಟು ಜನರು ತಮ್ಮ ಸಂಪಾದನೆಯ ಶೇ.೨೦ ಪ್ರತಿಶತ ಹಣವನ್ನು ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಬ್ಯಾಂಕ್ ಖಾತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚಾಮರಾಜಪೇಟೆ ಬೆಂಗಳೂರು ಖಾತೆ ಸಂಖ್ಯೆಗೆ ಜಮಾ ಮಾಡಬೇಕು ಇಲ್ಲದಿದ್ದಲ್ಲಿ ಅವರ ವಿರುದ್ಧ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಹಾಕಲಾಗುವುದೆಂದು ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಸಂಸ್ಥಾಪಕ ದೇವಮಿತ್ರ ವಕೀಲರು ಎಚ್ಚರಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಪುನಾ ಒಪ್ಪಂದದ ಪ್ರಕಾರ ಅಸ್ಪೃಶ್ಯತೆ ನಿವಾರಣೆ ಹಾಗೂ ಮೀಸಲಾತಿ ವಿಷಯಗಳು ಮುನ್ನಲೆಗೆ ಬಂದಿದ್ದು, ಈಗ ಮೀಸಲಾತಿ ಲಾಭ ಪಡೆಯುವವರು ಇತರ ಪರಿಶಿಷ್ಟರಿಗೆ ವಂಚನೆ ಮಾಡಿದ್ದಾರೆ ಎನ್ನುವುದು ಅಂಬೇಡ್ಕರ್ ಅವರ ನೋವಿನ ಮಾತಾಗಿತ್ತು. ಆದ್ದರಿಂದ ಅಂಬೇಡ್ಕರ ಅವರ ವಾದವನ್ನು ನಾವು ಇನ್ನು ಕೋರ್ಟ್ ಮುಂದೆ ತೆಗೆದುಕೊಂಡು ಹೋಗಿ ಮೀಸಲಾತಿ ಪಡೆದವರ ಸಂಪಾದನೆಯ ೨೦ ಪ್ರತಿಶತ ಭಾಗವನ್ನು ಸವಲತ್ತು ವಂಚಿತ ಪರಿಶಿಷ್ಟರ ಏಳಿಗೆಗಾಗಿ ಖರ್ಚು ಮಾಡಬೇಕಿದೆ. ಆದ್ದರಿಂದ ಆ ೨೦ ಪ್ರತಿಶತ ಹಣವನ್ನು ನಮ್ಮ ಪಕ್ಷದ ಖಾತೆಗೆ ಜಮೆ ಮಾಡಿ ಇಲ್ಲವೇ ಕೋರ್ಟ್ ಅವರ ವಿರುದ್ಧ ರಿಟ್ ಸಲ್ಲಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿ.ಎಂ.ನಾರಾಯಣ ವಕೀಲರು,ಮದನ್ ಕುಮಾರ ಮಿತ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.