ಮೀಸಲಾತಿ ಜಾಗೃತಿ ಜಾಥಾ

ಲಕ್ಷ್ಮೇಶ್ವರ,ನ10: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆಯುವ ಸಮಾಜದ ಹೋರಾಟಕ್ಕೆ ಶೀಘ್ರದಲ್ಲಿಯೇ ಜಯ ಸಿಗುತ್ತದೆ ಆದರೆ ಪಂಚಮಸಾಲಿ ಸಮಾಜದವರು ಮೀಸಲಾತಿಯ Àದವಕಾಶ, ಸದುಪಯೋಗವನ್ನು ಪಡೆಯುವ ಬಗ್ಗೆ ತಿಳುವಳಿಕೆ ಮತ್ತು ಜಾಗೃತಿ ಹೊಂದಬೇಕಾಗಿದೆ ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ಲಕ್ಷ್ಮೇಶ್ವರ ತಾಲೂಕಿನಲ್ಲಿ ಕೈಗೊಂಡ ಪಂಚಮಸಾಲಿ ಮೀಸಲಾತಿ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯದಲ್ಲಿ ಹೆಚ್ಚು ಜನ ಸಂಖ್ಯೆ ಹೊಂದಿರುವ ಪಂಚಮಸಾಲಿ ಸಮಾಜದಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಐಎಎಸ್, ಕೆಎಎಸ್‍ನಂತಹ ಉನ್ನತ ಹುದ್ದೆಯಲ್ಲಿದ್ದಾರೆ. ಕಾರಣ ಈ ಸಮಾಜಕ್ಕೆ ಮೀಸಲಾತಿ ಸೌಲಭ್ಯ ಕಡಿಮೆ ಪ್ರಮಾಣದಲ್ಲಿರುವುದು. ಶೈಕ್ಷಣಿಕವಾಗಿ ಮುಂದಿದ್ದು ಅತ್ಯಂತ ಕಡಿಮೆ ಅಂಕದಲ್ಲಿ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಈಗಾಗಲೇ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಕುಲಶಾಸ್ತ್ರ ಅಧ್ಯಯನ ವರದಿಯ ಆಧಾರದ ಮೇಲೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗುತ್ತದೆ. ಆದರೆ ಸಿಕ್ಕ ಮೇಲೆ ಸಮಾಜದವರು ಮೀಸಲಾತಿಯನ್ನು ಹೇಗೆ ಪಡೆದುಕೊಳ್ಳಬೇಕು ಎಂಬ ಕುರಿತು ಜಾಗೃತಿ ಅವಶ್ಯವಾಗಿದೆ. ಕಾಲಂ ನಂ.19ರ ಉಪಜಾತಿಯಲ್ಲಿ ಪಂಚಮಸಾಲಿ ಎಂದು ನಮೂದಿಸಿ ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ರಾಜ್ಯದ ಬಹುತೇಕ ಜಿಲ್ಲೆ/ತಾಲೂಕುಗಳಲ್ಲಿ ಮೀಸಲಾತಿ ನಮ್ಮ ಹಕ್ಕು ಎಂಬ ಉದ್ದೇಶದಡಿ ಸಮಾಜ ಜಾಗೃತಿ ನಡಿಗೆ ಕೈಗೊಳ್ಳಲಾಗಿದೆ. ಎಲ್ಲರೂ ಜಾಗೃತರಾಗಿರಿ ಮತ್ತು ಪಕ್ಷಾತೀತವಾಗಿ ಒಂದಾಗಿ ಬದ್ಧತೆ ಪ್ರದರ್ಶಿಸಬೇಕು. ಆರ್ಥಿಕ ತೊಂದರೆಯಲ್ಲಿರುವ ಸಮಾಜದ ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸದೇ ಅವರನ್ನು ಹರಿಹರ ಮಠದಲ್ಲಿ ಬಿಡಿ, ಅವರಿಗೆ ಶಿಕ್ಷಣದೊಂದಿಗೆ ಸಮಾಜದಲ್ಲಿ ಹೇಗೆ ಬದುಕು ಕಟ್ಟಿಕೊಳ್ಳಬೇಕು ಎಂಬ ಸಂಸ್ಕøತಿ-ಸಂಸ್ಕಾರ ನೀಡಿ ಅವರನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ನಿರ್ಮಾಣ ಮಾಡುತ್ತೇವೆ. ಭಕ್ತರಿಗೆ ಕಷ್ಟ ಪರಿಹಾರಕ್ಕೆ ಪಂಚಮಸಾಲಿ ಪೀಠ ಸನ್ನದ್ಧವಾಗಿದೆ ಎಂದರು.
ಸಮಾಜದ ತಾಲೂಕಾ ಅಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, ಸಮಾಜದಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಸಮಾಜದ ಒಳತಿಗಾಗಿ ಎಲ್ಲವನ್ನೂ ಮರೆತು 2ಎ ಮೀಸಲಾತಿ ಹೋರಾಟಕ್ಕೆ ಶ್ರೀಗಳಿಗೆ ಬೆಂಬಲಿಸೋಣ. ಇದರಿಂದ ಮುಂಬರುವ ದಿನಗಳಲ್ಲಿ ಸಮಾಜದ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
ಪಂಚಮಸಾಲಿ 2ಎ ಮೀಸಲಿಗಾಗಿ ಜಗದ್ಗುರುಗಳು ಕೈಗೊಂಡಿರು ನಮ್ಮ ನಡೆ-ಹಳ್ಳಿಯ ಕಡೆ ಜಾಗೃತಿ ಜಾಥಾ ಬುಧವಾರ ಲಕ್ಷ್ಮೇಶ್ವರದಿಂದ ವಿವಿಧ ವಾರ್ಡಗಳಲ್ಲಿ ಸಂಚರಿಸಿ ಬಳಿಕ ಬಸಾಪುರ, ರಾಮಗೇರಿ, ಶಿಗ್ಲಿ, ಶ್ಯಾಬಳಾ, ಉಳ್ಳಟ್ಟಿ ಗ್ರಾಮಗಳಲ್ಲಿ ನಡೆಸಲಾಯಿತು. ಈ ವೇಳೆ ಸಮಾಜದ ಜಿಲ್ಲಾದ್ಯಕ್ಷ ಈರಣ್ಣ ಕರಿಬಿಷ್ಠಿ, ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ, ಶಿನವನಗೌಡ್ರ ಅಡರಕಟ್ಟಿ, ದ್ಯಾಮಣ್ಣ ಕಮತದ, ಚನ್ನಪ್ಪ ಕರೆತ್ತಿನ, ಮುದ್ದಪ್ಪ ಸಾಲಮನಿ, ಶಿವಣ್ಣ ಕಟಗಿ, ದೇವಪ್ಪ ಕರೆತ್ತಿನ, ಯಲ್ಲಪ್ಪ ಅಣ್ಣಿಗೇರಿ, ಶಿವಾನಂದ ಕರೆತ್ತಿನ, ಚಂದ್ರು ಅಡರಕಟ್ಟಿ, ಗಂಗಾಧರ ಬೆಲ್ಲದ, ಚಂದ್ರು ಮಾಗಡಿ, ಚಿನ್ನಪ್ಪ ಗೋಡಿ, ನಿಂಗಪ್ಪ ಅಣ್ಣಿಗೇರಿ, ಸೋಮಣ್ಣ ಕರೆತ್ತಿನ, ನಿಂಗಪ್ಪ ಕ್ಯೂಬಿಹಾಳ ಸೇರಿ ಮಹಿಳೆಯರು ಪಾಲ್ಗೊಂಡಿದ್ದರು. ಪೋಟೊ: 9-ಎಲ್‍ಎಕ್ಷ್‍ಆರ್-4 ಪಂಚಮಸಾಲಿ 2ಎ ಮೀಸಲಿಗಾಗಿ ಪಂಚಮಸಾಲಿ ಹರಿಹರ ಪೀಠದ ಶ್ರೀ ವಚನಾನಂದ ಮಹಾಸ್ವಾಮಿಗಳು ನಮ್ಮ ನಡೆ-ಹಳ್ಳಿಯ ಕಡೆ ಜಾಗೃತಿ ಜಾಥಾಕ್ಕೆ ಲಕ್ಷ್ಮೇಶ್ವರದಲ್ಲಿ ಚಾಲನೆ ನೀಡಿದರು. ದೇವಣ್ಣ ಬಳಿಗಾರ, ಶಂಕ್ರಪ್ಪ ಗೊರವರ, ಚಂಬಣ್ಣ ಬಾಳಿಕಾಯಿ, ಸುನೀಲ ಮಹಾಂತಶೆಟ್ಟರ, ಎಂ.ಆರ್.ಪಾಟೀಲ ಇದ್ದರು.