ಮೀಸಲಾತಿ ಆಯ್ಕೆ ಪ್ರಕ್ರಿಯೆ

ಮುಂಡಗೋಡ,ಜೂ15: ತಾಲೂಕಿನ 16 ಗ್ರಾಮ ಪಂಚಾಯಿತಿಗಳ ಮುಂದಿನ ಎರಡೂವರೆ ವರ್ಷಗಳ ಅವಧಿಗಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಆಯ್ಕೆ ಪ್ರಕ್ರಿಯೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಧ್ಯಕ್ಷತೆಯಲ್ಲಿ ಪಟ್ಟಣದ ಲೊಯೊಲಾ ಕೇಂದ್ರಿಯ ವಿದ್ಯಾಲಯ ಸಭಾಂಗಣದಲ್ಲಿ ನಡೆಯಿತು.
16 ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ವಿವರ ಈ ರೀತಿ ಇದೆ: ಗುಂಜಾವತಿ ಗ್ರಾ.ಪಂ- ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಪ ವರ್ಗ-ಅ), ನಂದಿಕಟ್ಟಾ ಗ್ರಾ.ಪಂ- ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಪರಿಶಿಷ್ಟ ಪಂಗಡ), ಹುನಗುಂದ ಗ್ರಾ.ಪಂ- ಅಧ್ಯಕ್ಷ (ಪ ವರ್ಗ- ಅ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಬಾಚಣಕಿ ಗ್ರಾ.ಪಂ- ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಪ ವರ್ಗ- ಅ), ಇಂದೂರ ಗ್ರಾ.ಪಂ- ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಚವಡಳ್ಳಿ ಗ್ರಾ.ಪಂ- ಅಧ್ಯಕ್ಷ (ಪ ವರ್ಗ ಅ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಸಾಲಗಾಂವ ಗ್ರಾ.ಪಂ- ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಪರಿಶಿಷ್ಟ ಜಾತಿ ಮಹಿಳೆ), ಚಿಗಳ್ಳಿ ಗ್ರಾ.ಪಂ- ಅಧ್ಯಕ್ಷ (ಪ ವರ್ಗ-ಅ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ) ಕಾತೂರ ಗ್ರಾ.ಪಂ- ಅಧ್ಯಕ್ಷ ಪರಿಶಿಷ್ಟ ಜಾತಿ ಉಪಾಧ್ಯಕ್ಷ (ಪ ವರ್ಗ ಅ ಮಹಿಳೆ) ಪಾಳಾ ಗ್ರಾ.ಪಂ- ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಪ ವರ್ಗ-ಅ ಮಹಿಳೆ), ಕೋಡಂಬಿ ಗ್ರಾ.ಪಂ- (ಪರಿಶಿಷ್ಟ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಮಳಗಿ ಗ್ರಾ.ಪಂ- (ಪರಿಶಿಷ್ಟ ಪಂಗಡ ಮಹಿಳೆ) ಉಪಾಧ್ಯಕ್ಷ (ಪ ವರ್ಗ- ಬ ಮಹಿಳೆ) ಬೆಡಸಗಾಂವ ಗ್ರಾ.ಪಂ- ಅಧ್ಯಕ್ಷ (ಪ ವರ್ಗ-ಅ) ಉಪಾಧ್ಯಕ್ಷ (ಪರಿಶಿಷ್ಟ ಜಾತಿ), ಮೈನಳ್ಳಿ ಗ್ರಾ.ಪಂ- ಅಧ್ಯಕ್ಷ (ಪ ವರ್ಗ -ಬ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ನಾಗನೂರ ಗ್ರಾ.ಪಂ- ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಓರಲಗಿ ಗ್ರಾ.ಪಂ- ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ) ಮೀಸಲಾತಿ ಪ್ರಕಟಿಸಲಾಯಿತು.
ನಂತರ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ ಪರಿಶಿಷ್ಟ ಜಾತಿ ಮೀಸಲಾತಿ ಬಂದಿದ್ದರೆ ಆ ಗ್ರಾಮ ಪಂಚಾಯಿತಿಯಲ್ಲಿ ಈ ಮೀಸಲಾತಿ ಸದಸ್ಯರ ಇಲ್ಲದಿದ್ದರೆ ನಿಯಮದಂತೆ ಪರಿಶಿಷ್ಟ ಪಂಗಡದವರಿಗೆ ನೀಡಬಹುದಾಗಿದೆ. ಮತ್ತೊಂದು ಕಡೆ ಪರಿಶಿಷ್ಟ ಪಂಗಡ ಮೀಸಲಾತಿ ಬಂದಿದ್ದರೆ ಇದರಲ್ಲಿ ಸಹ ಯಾರು ಸದಸ್ಯರು ಇಲ್ಲದಿದ್ದರೆ ಪರಿಶಿಷ್ಟ ಜಾತಿ ಸದಸ್ಯರನ್ನು ಪರಿಗಣಿಸಬಹುದು. ಇದೇ ರೀತಿ ಪ ವರ್ಗ ಅ ಇಲ್ಲದಿದ್ದರೆ ಚುನಾವಣೆಯಲ್ಲಿ ಪ ವರ್ಗ ಬ ಸದಸ್ಯರಿಗೆ ನೀಡಲು ಅವಕಾಶವಿದೆ ಎಂದರು.
ಈ ಸಂದರ್ಭದಲ್ಲಿ ಶಿರಸಿ ಸಹಾಯಕ ಕಮಿಷನರ್ ಡಿ ದೇವರಾಜ, ತಹಶಿಲ್ದಾರ ಶಂಗರ ಗೌಡಿ ತಾ.ಪಂ ಇಒ ಪ್ರವೀಣ ಕಟ್ಟಿ ಮುಂತಾದವರು ಉಪಸ್ಥಿತರಿದ್ದರು.